BCCI central contract : ಅಜಿಂಕ್ಯ ರಹಾನೆಗೆ ಕಾದಿದೆ ಬಿಗ್ ಶಾಕ್, ಸೂರ್ಯಕುಮಾರ್ ಯಾದವ್‌ಗೆ ಬಿಗ್ ಸರ್ಪ್ರೈಜ್

ಮುಂಬೈ: ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಮುಂಬೈ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ಮತ್ತೊಂದು ಆಘಾತ ಕಾದಿದೆ. 34 ವರ್ಷದ ಅಜಿಂಕ್ಯ ರಹಾನೆ ಕಳೆದ ಜನವರಿಯಲ್ಲಿ ಭಾರತ ಪರ ಕೊನೆಯ ಟೆಸ್ಟ್ (BCCI central contract) ಪಂದ್ಯವಾಡಿದ್ದರು. ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ರಹಾನೆ, ಸದ್ಯ ದೇಶೀಯ ಕ್ರಿಕೆಟ್’ನಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ರಹಾನೆ, ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಗುರಿಯಲ್ಲಿದ್ದಾರೆ. ಆದರೆ ಇದರ ಮಧ್ಯೆಯೇ ರಹಾನೆ ಅವರಿಗೆ ಶಾಕ್ ಕೊಡಲು ಬಿಸಿಸಿಐ ಮುಂದಾಗಿದೆ.ಬಿಸಿಸಿಐ ಸದ್ಯದಲ್ಲೇ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ಪ್ರಕಟಿಸಲಿದ್ದು (BCCI central contract) , ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ ಲಿಸ್ಟ್’ನಿಂದ ಅಜಿಂಕ್ಯ ರಹಾನೆ ಹೊರ ಬೀಳಲಿದ್ದಾರೆ. ರಹಾನೆ ಜೊತೆ ಭಾರತ ಟೆಸ್ಟ್ ತಂಡದ ವೇಗಿ ಇಶಾಂತ್ ಶರ್ಮಾ (Ishant Sharma) ಕೂಡ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ವಂಚಿತರಾಗಲಿದ್ದಾರೆ. 2021ರ ನವೆಂಬರ್ ನಂತರ ಇಶಾಂತ್ ಶರ್ಮಾ ಭಾರತ ಪರ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ.

ಇದೇ ವೇಳೆ ವಾರ್ಷಿಕ ಗುತ್ತಿಗೆ ‘ಸಿ’ ಕೆಟಗರಿಯಲ್ಲಿರುವ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಟೆಸ್ಟ್ ತಂಡದ ಓಪನರ್ ಶುಭಮನ್ ಗಿಲ್ ‘ಬಿ’ ಕೆಟಗರಿಗೆ ಬಡ್ತಿ ಪಡೆಯಲಿದ್ದಾರೆ.ಟೀಮ್ ಇಂಡಿಯಾ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ‘ಎ’ ಕೆಟಗರಿಗೆ ಜಿಗಿಯಲಿದ್ದಾರೆ. ಪ್ರಸಕ್ತ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಡಿಸೆಂಬರ್ 21ರಂದು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ‘ಎ’ ಗ್ರೇಡ್’ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ ಕ್ರಿಕೆಟ್ ಮಂಡಳಿ ವರ್ಷಕ್ಕೆ 7 ಕೋಟಿ ರೂ.ಗಳನ್ನು ಪಾವತಿಸುತ್ತದೆ. ‘ಎ’ ಗ್ರೇಡ್’ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ ವಾರ್ಷಿಕ 5 ಕೋಟಿ ಮತ್ತು ‘ಸಿ’ ಗ್ರೇಡ್’ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ ಬಿಸಿಸಿಐ ವಾರ್ಷಿಕ 3 ಕೋಟಿ ರೂ,ಗಳನ್ನು ಪಾವತಿಸುತ್ತದೆ.

ಇದನ್ನೂ ಓದಿ : Sanju Samson play Ireland: ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್.. ಐರ್ಲೆಂಡ್ ಆಫರ್‌ಗೆ ಸಂಜು ಹೇಳಿದ್ದೇನು ?

ಇದನ್ನೂ ಓದಿ : Ranji Trophy updates : ರಣಜಿ ಟ್ರೋಫಿ: ಕರ್ನಾಟಕಕ್ಕೆ ಸರ್ವಿಸಸ್ ಎದುರಾಳಿ, ಮೊದಲ ಪಂದ್ಯಕ್ಕೇ ವರುಣನ ಅಡ್ಡಿ

ಇದನ್ನೂ ಓದಿ : India Vs Bangladesh test series: ಏಕದಿನ ಸರಣಿ ಸೋತ ಭಾರತಕ್ಕೆ ನಾಳೆಯಿಂದ “ಟೆಸ್ಟ್”, ಟೀಮ್ ಇಂಡಿಯಾಗೆ ರಾಹುಲ್ ನಾಯಕತ್ವ

ಬಿಸಿಸಿಐ ವಾರ್ಷಿಕ ಗುತ್ತಿಗೆ:
‘ಎ’ ಗ್ರೇಡ್: 7 ಕೋಟಿ ರೂ.
‘ಬಿ’ ಗ್ರೇಡ್: 5 ಕೋಟಿ ರೂ.
‘ಸಿ’ ಗ್ರೇಡ್: 3 ಕೋಟಿ ರೂ.

BCCI central contract: Big shock awaits Ajinkya Rahane, big surprise for Suryakumar Yadav

Comments are closed.