ಖಾಸಗಿ ಬಸ್‌ಗೆ ಟ್ರಕ್‌ ಢಿಕ್ಕಿ : 4 ಸಾವು, 14 ಮಂದಿ ಗಾಯ

ಶಾಜಾಪುರ: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬಸ್ ಟ್ರಕ್‌ಗೆ ಢಿಕ್ಕಿ (bus-truck collision in Shajapur) ಹೊಡೆದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಜಾಪುರದ ಮಕ್ಸಿ ಪಟ್ಟಣದ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಮಕ್ಸಿ ಪೊಲೀಸ್ ಠಾಣೆಯ ಉಸ್ತುವಾರಿ ಗೋಪಾಲ್ ಸಿಂಗ್ ಚೌಹಾಣ್ ಪ್ರಕಾರ, ಬಸ್ಸು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಿಂದ ಅಹಮದಾಬಾದ್‌ಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಶಾಜಾಪುರದ ದೊಂಟ ಗ್ರಾಮದ ಬಳಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಒಳಗಾದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಮಹಿಳೆಯನ್ನು ಕಚ್ಚಿದ ಸಾಕು ನಾಯಿ : ಮಾವನಿಂದ ದೂರು ದಾಖಲು

ಇದನ್ನೂ ಓದಿ : ಜಲ್ಲಿಕಟ್ಟು ನಿಷೇಧ, ಮಹತ್ವದ ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್‌

ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತರು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಜ್ಜಯಿನಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು. ಈ ಅಪಘಾತಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಮೃತಪಟ್ಟವರ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟೀಲು ದೇವಸ್ಥಾನದ ಎದುರು ಹೊತ್ತಿ ಉರಿದ ಬಸ್‌

ಮಂಗಳೂರು : ( Bus Fire Kateel) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಎಂಆರ್‌ಪಿಎಲ್‌ ಕಂಪೆನಿಗೆ ಸೇರಿದ ಬಸ್‌ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ ಚಾಲಕ ಸೇರಿ ಮೂವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಸುರತ್ಕಲ್‌ ಸಮೀಪದ ಓಎಂಪಿಎಲ್‌ ಕಂಪೆನಿಗೆ ಸೇರಿದ ಬಸ್ಸು ಕಟೀಲು ರೂಟ್‌ನಲ್ಲಿ ಸಿಬ್ಬಂದಿಗಳನ್ನು ಬಿಟ್ಟು ಇಂದು ಮಧ್ಯಾಹ್ನ 2.45ರ ಸುಮಾರಿಗೆ ಬಳಿಯಲ್ಲಿರುವ ಓಎಂಪಿಎಲ್‌ ಗೆ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನಲ್ಲಿದ್ದ ಚಾಲಕ ಹಾಗೂ ಇನ್ನೂ ಇಬ್ಬರು ಬಸ್ಸಿನಿಂದ ಹೊರಗೆ ಜಿಗಿದಿದ್ದಾರೆ.

ಮೇಲ್ನೋಟಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಬಸ್ಸಿನಲ್ಲಿರುವ ಬ್ಯಾಟರಿ ಸ್ಪೋಟಗೊಂಡು ಘಟನೆ ಸಂಭವಿಸಿರುವ ಸಾಧ್ಯತೆಯಿದೆ. ಬಸ್ಸಿನಲ್ಲಿದ್ದ ಚಾಲಕ ಹಾಗೂ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಟ್ಯಾಂಕರ್‌ ಮೂಲಕ ನೀರನ್ನು ತಂದು ಬೆಂಕಿ ನಂದಿಸಿದ್ದಾರೆ.

bus-truck collision in Shajapur: Truck collides with private bus: 4 dead, 14 injured

Comments are closed.