Cattle smuggling : ಜಾನುವಾರು ಕಳ್ಳಸಾಗಣಿಕೆ : ಪೊಲೀಸರ ಕಾರ್ಯಾಚರಣೆ, 8 ಟ್ರಕ್‌ ವಶ

ಬಂಗಾಳಕೊಲ್ಲಿ : (Cattle smuggling)ಎಂಟು ಟ್ರಕ್ ಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಬಂಗಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಗಡಿಭಾಗದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ. ದನಗಳನ್ನು ತುಂಬಿದ್ದ ಎಂಟು ಟ್ರಕ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಅಕ್ರಮ ಕಳ್ಳಸಾಗಾಣಿಕೆ(Cattle smuggling)ಪ್ರಕರಣಗಳು ಹೆಚ್ಚುತ್ತಿದೆ. ಪಶ್ವಿಮ ಬಂಗಾಲದಿಂದ ಇತರ ರಾಜ್ಯಗಳಿಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಕಾಟ ಮಾಡಲಾಗುತ್ತಿದೆ. ಇದೀಗ ಟ್ರಕ್ ಗಳ ಮೂಲಕ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾನೆಯ ವೇಳೆಯಲ್ಲಿ ಗಸ್ತು ಕಾಯುತ್ತಿದ್ದರು. ಈ ವೇಳೆಯಲ್ಲಿ ಬಂದ ಟ್ರಕ್ ಗಳನ್ನು ಪರಿಶೀಲನೆ ನಡೆಸಿದಾಗ ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಟ್ರಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Woman burned alive : ಪಕ್ಕದ ಮನೆಯವರಿಂದ ಮಹಿಳೆ ಸಜೀವ ದಹನ : ವಾಮಾಚಾರದ ಆರೋಪ

ಇದನ್ನೂ ಓದಿ : Retired officer murdered : ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿ ಕೊಲೆ ; ಕಾರು ಗುದ್ದಿಸಿ ಹಂತಕರು ಎಸ್ಕೇಪ್‌

ಟ್ರಕ್ ಗಳಲ್ಲಿ ತುಂಬಿರುವ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರು ಸಾಗಾಟ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪಶ್ಚಿಮ ಬಂಗಾಳ ಹಾಗೂ ಒಡಿಶಾ ಗಡಿ ಭಾಗದಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ : Fire accident : ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ ; 15 ಸಾವು ,250 ಮಂದಿ ಸ್ಥಳಾಂತರ

ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಪಶ್ಚಿಮ ಮಿಡ್ನಾಪುರ್‌ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಕ್ ಗಳ ಜೊತೆಗೆ ಲಾರಿ ಚಾಲಕರನ್ನೂ ಕೂಡ ವಶಕ್ಕೆ ಪಡೆದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

(Cattle smuggling) Bengal Police has succeeded in busting the network of illegal cattle smuggling in eight trucks. The attack was carried out on the basis of information about cattle smuggling on the border between West Bengal and Odisha. The police have seized eight trucks full of cattle and are investigating.

Comments are closed.