Pakistan vs Bangladesh : ಅದೃಷ್ಟದಾಟದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಪಾಕಿಸ್ತಾನ

ಅಡಿಲೇಡ್ : (Pakistan vs Bangladesh)ಅದೃಷ್ಟದ ಬೆನ್ನೇರಿ ಹೊರಟ ಪಾಕಿಸ್ತಾನ ತಂಡ ಸೂಪರ್-12 ಹಂತದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿ ಟಿ20 ವಿಶ್ವಕಪ್ ಟೂರ್ನಿ(Pakistan enters T20 World Cup semis)ಯಲ್ಲಿ (T20 World Cup 2022) ಸೆಮಿಫೈನಲ್ ಪ್ರವೇಶಿಸಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಾಕಿಸ್ತಾನ Vs ಬಾಂಗ್ಲಾದೇಶ (Pakistan vs Bangladesh) ಪಂದ್ಯ ಕ್ವಾರ್ಟರ್ ಫೈನಲ್ ಮಹತ್ವ ಪಡೆದಿತ್ತು. ಇದಕ್ಕೂ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಆಘಾತಕಾರಿ ಸೋಲುಂಡು ಟೂರ್ನಿಯಿಂದ ಹೊರ ಬಿದ್ದ ಕಾರಣ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ಮಹತ್ವ ಬಂದಿತ್ತು. ಉಭಯ ತಂಡಗಳು ತಲಾ 4 ಅಂಕಗಳನ್ನು ಗಳಿಸಿದ್ದರಿಂದ ಈ ಪಂದ್ಯವನ್ನು ಗೆದ್ದವರಿಗೆ ಗ್ರೂಪ್-2ರಿಂದ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡ ಪಾಕಿಸ್ತಾನ, ಬಾಂಗ್ಲಾವನ್ನು ಮಣಿಸಿ ಗ್ರೂಪ್-2ರಲ್ಲಿ ಅಗ್ರಸ್ಥಾನಕ್ಕೇರಿ ಅಂತಿಮ 4ರ ಘಟ್ಟಕ್ಕೆ ಲಗ್ಗೆ ಹಾಕಿತು.

ಇದನ್ನೂ ಓದಿ : South Africa knocked out : ನೆದರ್ಲೆಂಡ್ಸ್ ವಿರುದ್ಥ ಸೋಲು, ಟಿ20 ವಿಶ್ವಕಪ್’ನಿಂದ ಚೋಕರ್ಸ್ ದಕ್ಷಿಣ ಆಫ್ರಿಕಾ ಔಟ್

ಇದನ್ನೂ ಓದಿ : Danushka Gunathilaka : ಅತ್ಯಾಚಾರ ಆರೋಪ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅರೆಸ್ಟ್

ಇದನ್ನೂ ಓದಿ : T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಪಾಕ್ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಓಪನರ್ ನಜ್ಮುಲ್ ಹೊಸೇನ್ ಶಾಂತೋ 54 ರನ್ ಗಳಿಸಿದ್ರೆ, ಪಾಕ್ ಪರ ಅಮೋಘ ದಾಳಿ ಸಂಘಟಿಸಿದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ 22 ರನ್ನಿಗೆ 4 ವಿಕೆಟ್ ಪಡೆದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಜಯಭೇರಿ ಬಾರಿಸಿ ಸೆಮಿಫೈನಲ್’ಗೆ ಅರ್ಹತೆ ಪಡೆಯಿತು.
ಇದರೊಂದಿಗೆ ಗ್ರೂಪ್-2ನಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ರೆ, ಗ್ರೂಪ್-1ರಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಅಂತಿಮ 4ರ ಘಟ್ಟ ಪ್ರವೇಶಿಸಿವೆ. ನವೆಂಬರ್ 10ರಂದು ಅಡಿಲೇಡ್’ನಲ್ಲಿ ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿಯಾಗುವ ಸಾಧ್ಯತೆಯಿದೆ.

(Pakistan vs Bangladesh) In their last league match of the Super-12 level, Pakistan team left Bangladesh by 5 wickets and entered the semi-finals of the T20 World Cup tournament (Pakistan enters T20 World Cup semis) (T20 World Cup 2022).

Comments are closed.