Chicken crowing : ಕೋಳಿ ಕೂಗುತ್ತಿದೆ, ನಿದ್ದೆ ಬರುತ್ತಿಲ್ಲ : ಬೆಂಗಳೂರಲ್ಲಿ ಕೋಳಿ ವಿರುದ್ದ ಟ್ವೀಟ್ ಮೂಲಕ ಪೊಲೀಸರಿಗೆ ದೂರು

ಬೆಂಗಳೂರು : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬೆಳಗ್ಗಿನ ಜಾವಕ್ಕೆ ಕೋಳಿ ಕೂಗಿದರೆ ಜನರು ತಮ್ಮ ದೈನಂದಿನ ಕೆಲಸವನ್ನು ಪ್ರಾರಂಭಿಸುತ್ತಾರೆ. ಆದರೆ ಪಕ್ಕದ ಮನೆಯವರು ಕೋಳಿಯೊಂದನ್ನು ಸಾಕಿದ್ದು, ಅದು ಕೂಗುವುದರಿಂದ (Chicken crowing) ನಮಗೆ ತೊಂದರೆ ಆಗುತ್ತಿದೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿರುವ ಹಾಸ್ಯಾಸ್ಪದ ಘಟನೆಯೊಂದು ಸಂಭವಿಸಿದೆ.

ಬೆಂಗಳೂರಿನ ಜೆ.ಪಿ.ನಗರದ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಯನ್ನು ಮಾಡಿದ್ದಾರೆ. ಕೋಳಿ ರಾತ್ರಿ, ಹಗಲು ಕೂಗುತ್ತಿದ್ದು, ಇದರಿಂದಾಗಿ ನಿದ್ದೆ ಬರುತ್ತಿಲ್ಲ ನೆರೆಹೊರೆಯವರಿಗೆ ತೊಂದರೆ ಆಗುತ್ತಿದೆ ಎಂದು ಟ್ವೀಟರ್‌ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ನೆಮೊ ಎಂಬ ಟ್ವೀಟರ್‌ ಖಾತೆಯ ಮೂಲಕ ಹುಂಜಾ ಕೂಗುವ ವಿಡಿಯೋವನ್ನು ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ.

ನೆಮೊ ಟ್ವೀಟರ್‌ ತಮ್ಮ ಟ್ವೀಟ್‌ನಲ್ಲಿ ನಮ್ಮ ಪಕ್ಕದ ಮನೆಯವರು ಹುಂಜಾ ಮತ್ತು ಬಾತುಕೋಳಿಯನ್ನು ಸಾಕಿದ್ದು, ಅವುಗಳು ಬೆಳಿಗ್ಗೆ ರಾತ್ರಿ ಎನ್ನದೇ ಕೂಗುತ್ತಾ ಇರುವುತ್ತದೆ. ಇದರಿಂದಾಗಿ ನಮ್ಮ ಮನೆಯಲ್ಲಿ ಇರುವ ಎರಡು ವರ್ಷದ ಮಗುವಿಗೆ ನಿದ್ದೆ ಮಾಡಲು ಕಷ್ಟವಾಗುತ್ತಿದೆ. ಹಾಗಾಗಿ ಅವುಗಳನ್ನು ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Jharkhand crime: ಪತ್ನಿಯನ್ನು ಕೊಲೆಗೈದು ದೇಹವನ್ನು 12 ತುಂಡುಗಳಾಗಿ ಕತ್ತರಿಸಿದ ಪತಿ

ಇದನ್ನೂ ಓದಿ : Annual Sports Event : ಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ಬಾಲಕನ ಕತ್ತು ಸೀಳಿದ ಈಟಿ

ಇದನ್ನೂ ಓದಿ : Assault on merchant: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ: ಹಫ್ತಾ ಕೊಡದಿದ್ದಕ್ಕೆ ವ್ಯಾಪಾರಿ ಮೇಲೆ ಹಲ್ಲೆ

ಇದನ್ನೂ ಓದಿ : Dehli bus accident: ಬಸ್‌ ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ

ಹಿರಿಯರು ಹೇಳಿರುವ ಹಾಗೆ ಮಕ್ಕಳು ಮತ್ತು ಮೂಕ ಪ್ರಾಣಿ, ಪಕ್ಷಿಗಳಿಗೆ ಬೇಲಿ ಹಾಕುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಆದರೆ ಕೋಳಿ ಕೂಗಿದಕ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದು ವಿಚಿತ್ರವಾಗಿದೆ. ಸದ್ಯ ಈ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Chicken crowing : Chicken is shouting, can’t sleep: Complaint to police through tweet against chicken in Bengaluru

Comments are closed.