Annual day celebration: “ಹೇರಾಡಿ -ಬಾರಕೂರು ಶ್ರೀ ವಿದ್ಯೇಶ ವಿದ್ಯಾ ಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ “

ಬ್ರಹ್ಮಾವರ: (Annual day celebration) “ಶಿಕ್ಷಣ ದ ಜೊತೆಗೆ ಸಂಸ್ಕೃತಿಯನ್ನು ಬೆಳೆಸಿ, ಉಳಿಸಿ ಕೊಂಡು ಹೋಗಿ” ಎಂದು ಎಂ.ಜಿ.ಎಂ ಕಾಲೇಜು ನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎಂ.ಎಲ್.ಸಾಮಗರವರು ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ತಮ್ಮ ಮಾತುಗಳನ್ನಾಡಿದರು.

ಕಾರ್ಯಕ್ರಮ (Annual day celebration)ದ ಅಧ್ಯಕ್ಷತೆ ಯನ್ನು ಬಾರಕೂರು ವಿದ್ಯಾಭೀ ವರ್ದಿನಿ ಸಂಘ ಬಾರಕೂರ್ ನ ಅಧ್ಯಕ್ಷ ರಾದ ಶ್ರೀ ಬಿ.ಶಾಂತಾರಾಮ ಶೆಟ್ಟಿ ರವರು ವಹಿಸಿದ್ದರು.ವೇದಿಕೆ ಯಲ್ಲಿ ಉಪಾಧ್ಯಕ್ಷರಾದ ಶ್ರೀ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ, ಶಾಲೆಯ ಸಂಚಾಲಕರಾದ ಡಾ !ಬಿ.ಎಂ ಸೋಮಯಾಜಿ,ರಕ್ಷಕ, ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಲಲಿತಾ, ಶಾಲಾ ಮುಖ್ಯಸ್ಥ ರಾದ ಶ್ರೀಮತಿ ಪ್ರೀತಿರೇಖ,ಶಾಲಾ ವಿದ್ಯಾರ್ಥಿ ನಾಯಕ ನಾದ ಸಮರ್ಥ್, ಉಪಸ್ಥಿತರಿದ್ದರು.

ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ ಬಾರಕೂರು ಕೆನರಾ ಬ್ಯಾಂಕ ನ ಸೀನಿಯರ್ ಮ್ಯಾನೇಜರ್ ಆಗಿರುವ ಶ್ರೀ ವಿಶಾಲ್ ಕುಮಾರ್ ಸಿಂಗ್ ರವರು ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾರಕೂರು ವಿದ್ಯಾಭೀವರ್ಧಿನಿ ಸಂಘದ ಕೋಶಾಧಿಕಾರಿ ಯಾಗಿರುವ ಶ್ರೀ ಕೃಷ್ಣ ಹೆಬ್ಬಾರ ಎಲ್ಲರನ್ನು ಸ್ವಾಗತಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸುದರ್ಶನ್ ಉಡುಪ ರವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Annual day celebration: "Heradi-Barakuru Shree Vidyesh Vidya Manya National English Medium School Anniversary"

ಶಾಲಾ ವಾರ್ಷಿಕೋತ್ಸವದಲ್ಲಿ ಡಾನ್ಸ್ ಮಾಸ್ಟರ್ ರಾದ ಶ್ರೀ ಲೋಕೇಶ್ ಮತ್ತು ಭರತನಾಟ್ಯ ಶಿಕ್ಷಕಿ ಶ್ರೀಮತಿ ಸ್ಮಿತಾ ಶಾಸ್ತ್ರೀ ರವರ ನೃತ್ಯ ನಿರ್ದೇಶನ ದಲ್ಲಿ ಶಾಲಾ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮ ದಲ್ಲಿ ಬಾರಕೂರು ವಿದ್ಯಾಭೀವರ್ದಿನಿ ಸಂಘದ ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿ ಗಳು, ಪೋಷಕರು, ಊರವರು ಉಪಸ್ಥಿತರಿದ್ದರು.

ಇದನ್ನೂ ಓದಿ : Call for college bandh: ಸರಕಾರದ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳ : ರಾಜ್ಯದಾದ್ಯಂತ ಕಾಲೇಜು ಬಂದ್ ಗೆ ಕರೆ

ಶಾಲಾ ಶಿಕ್ಷಕಿ ಲಿಖಿತಾ ಕೊಠಾರಿ ರವರು ಸ್ವಾಗತಿಸಿ, ಶ್ರೀ ನಾಗೇಂದ್ರ ಆಚಾರ್ ಮತ್ತು ಶ್ರೀಮತಿ ಜ್ಯೋತಿ ಶೆಟ್ಟಿ ವಂದಿಸಿದರು, ಈ ಕಾರ್ಯಕ್ರಮವನ್ನು ಲಿಖಿತಾ ಕೊಠಾರಿ, ಬ್ರಿಜಿತ್ ಗೊನ್ಸಾಲ್ವಿಸ್, ಸಬಿತಾ ಮಸ್ಕರೇನಸ್, ಮಧುಶ್ರೀ ರವರು ನಿರೂಪಿಸಿದರು, ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.

Annual day celebration: "Heradi-Barakuru Shree Vidyesh Vidya Manya National English Medium School Anniversary"

(Annual day celebration) Shri M.L.Samagar, the retired principal of MGM College, spoke as the chief guest of the school’s anniversary saying, “Culture along with education and preserve it.”

Comments are closed.