Bridge collapsed: ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 13 ಕೋಟಿ ವೆಚ್ಚದ ಸೇತುವೆ

ಬಿಹಾರ: (Bridge collapsed) ಬಿಹಾರ್‌ ಬೇಗುಸರಾಯ್‌ ನಲ್ಲಿನ ಗಂಡಕ್‌ ನದಿಗೆ ಅಡ್ಡಲಾಗಿ ಸೇತುವೆ ಒಂದನ್ನು ನಿರ್ಮಿಸಿದ್ದು, 206 ಮೀಟರ್ ಉದ್ದದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. 13 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ನಬಾರ್ಡ್‌ ಯೋಜನೆಯಡಿಯಲ್ಲಿ ಸೇತುವೆ (Bridge collapsed) ನಿರ್ಮಾಣ ಕಾರ್ಯ ನಡೆದಿದ್ದರು ಕೂಡ ಸಂಪರ್ಕ ರಸ್ತೆ ಇಲ್ಲದ ಕಾರಣ ಉದ್ಘಾಟನೆ ಮಾಡಿರಲಿಲ್ಲ. ಕೆಲ ದಿನಗಳ ಹಿಂದೆ ಸೇತುವೆಯ ಮುಂಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನಂತರ ಡಿಸೆಂಬರ್ 15ರಂದು ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇಂದು (ಭಾನುವಾರ) ಬೆಳಗ್ಗೆ ಸೇತುವೆಯ ಮುಂಭಾಗ ಕುಸಿದು ಮುಂಭಾಗದಲ್ಲಿರುವ ಗಂಡಕ್‌ ನದಿಗೆ ಬಿದ್ದಿದೆ.

ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‌ಪುರ ನಡುವೆ 206 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿತ್ತು. ನಿರ್ಮಾಣ ಕಾರ್ಯವು 2016 ರಲ್ಲಿ ಪ್ರಾರಂಭವಾಯಿತು ಮತ್ತು 2017 ರಲ್ಲಿ ಪೂರ್ಣಗೊಂಡಿತು. ಆದರೆ ಸಂಪರ್ಕ ರಸ್ತೆ ಇಲ್ಲ ಎಂಬ ಕಾರಣಕ್ಕೆ ಸೇತುವೆ ಉದ್ಘಾಟನೆ ನಡೆದಿರಲಿಲ್ಲ.

ಇದನ್ನೂ ಓದಿ : Annual Sports Event : ಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ಬಾಲಕನ ಕತ್ತು ಸೀಳಿದ ಈಟಿ

ಇದನ್ನೂ ಓದಿ : Jharkhand crime: ಪತ್ನಿಯನ್ನು ಕೊಲೆಗೈದು ದೇಹವನ್ನು 12 ತುಂಡುಗಳಾಗಿ ಕತ್ತರಿಸಿದ ಪತಿ

ಇದನ್ನೂ ಓದಿ : HIV Positive Injection‌ : ಪತ್ನಿಗೆ ಎಚ್ ಐವಿ ಚುಚ್ಚುಮದ್ದು ಹಾಕಿಸಿ ವಿಚ್ಚೇದನ ಕೊಟ್ಟ ಪಾಪಿ ಪತಿ

ಇದನ್ನೂ ಓದಿ : Car overturned- 3 died: ಬ್ಲೂಬಕ್‌ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿ: ಮೂವರು ಸಾವು, ನಾಲ್ವರಿಗೆ ಗಾಯ

(Bridge collapsed) A bridge was constructed across the Gandak River in Begusarai, Bihar, and the 206 meter long bridge collapsed before its inauguration on Sunday morning. It is said that the bridge was built at a cost of 13 crores.

Comments are closed.