Chandrasekhar Guruji : ಗುರೂಜಿ ಇನ್ನಿಲ್ಲದ ಕಿರುಕುಳ ನೀಡಿದ್ದರು,ಸಾಯಿಸದೇ ಬೇರೆ ವಿಧಿಯಿರಲಿಲ್ಲ :ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಹಂತಕರು

ಹುಬ್ಬಳ್ಳಿ : Chandrasekhar Guruji : ಸರಳ ವಾಸ್ತು ಮೂಲಕ ರಾಜ್ಯದ ಜನತೆಗೆ ಚಿರಪರಿಚಿತ ಎನಿಸಿದ್ದ ಚಂದ್ರಶೇಖರ್​ ಗುರೂಜಿ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಚಂದ್ರಶೇಖರ್​ ಗುರೂಜಿಯನ್ನು ಕೊಲೆ ಮಾಡಿದ ಸಿಸಿ ಟಿವಿ ದೃಶ್ಯಾವಳಿಗಳು ವೈರಲ್ ಆದ ಬಳಿಕ ಎಲ್ಲರಲ್ಲೂ ಮೂಡಿದ್ದ ಪ್ರಶ್ನೆ ಏನೆಂದರೆ ಅಷ್ಟೊಂದು ಕ್ರೂರವಾಗಿ ಗುರೂಜಿ ಕೊಲೆ ಮಾಡುವಂತಹ ದ್ವೇಷ ಈ ಕೊಲೆಗಾರರಿಗೆ ಏನಿತ್ತು..? ಅಲ್ಲದೇ ಇವರು ಒಂದು ಕಾಲದಲ್ಲಿ ಗುರೂಜಿ ಆಪ್ತರೇ ಆಗಿದ್ದರಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈಮನಸ್ಯ ಮೂಡೋಕೆ ಕಾರಣವಾದರೂ (Chandrasekhar Guruji killer) ಏನು ಎಂಬ ಪ್ರಶ್ನೆ ಕೂಡ ಹಲವರಲ್ಲಿತ್ತು.

ಕೊಲೆ ನಡೆದ ದಿನವೇ ಆರೋಪಿಗಳನ್ನು ಬಾಗಲಕೋಟೆಯಲ್ಲಿ ಹೆಡೆಮುರಿ ಕಟ್ಟಿದ್ದ ಹುಬ್ಬಳ್ಳಿ ಹಾಗೂ ರಾಮದುರ್ಗ ಠಾಣೆಯ ಪೊಲೀಸರು ಆರೋಪಿಗಳಾದ ಮಹಂತೇಶ್​ ಶಿರೋಳ್​ ಹಾಗೂ ಮಂಜುನಾಥ್​​ ದುಮ್ಮೆವಾಡನನ್ನು ನಿರಂತರ ವಿಚಾರಣೆಗೆ ಒಳಪಡಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾ ನಗರ ಠಾಣೆಯಲ್ಲಿ ವಿಚಾರಣೆಗೆ ಒಳಗಾಗಿರುವ ಈ ಆರೋಪಿಗಳು ಪೊಲೀಸರ ತನಿಖೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದು ಗುರೂಜಿಯನ್ನು ಅಷ್ಟೊಂದು ಬರ್ಬರವಾಗಿ ಕೊಲೆ ಮಾಡುವ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಚಂದ್ರಶೇಖರ್​ ಗುರೂಜಿ ಜೊತೆ ನಾವು ಬರೋಬ್ಬರಿ 12 ವರ್ಷಗಳ ಕಾಲ ಕೆಲಸ ಮಾಡಿದ್ದೆವು. 2016ರಲ್ಲಿ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಬಿಟ್ಟು ನಮ್ಮಷ್ಟಕ್ಕೆ ನಾವು ಜೀವನ ನಡೆಸುತ್ತಿದ್ದೆವು. ಆದರೆ ಗುರೂಜಿ ನಮಗೆ ನೆಮ್ಮದಿಯಿಂದ ಬದುಕಲು ಬಿಡಲೇ ಇಲ್ಲ. ನಾವು ಯಾವುದೇ ಕೆಲಸ ಮಾಡಲು ಚಂದ್ರಶೇಖರ್​ ಗುರೂಜಿ ನಮಗೆ ಅವಕಾಶ ಮಾಡಿ ಕೊಡಲೇ ಇಲ್ಲ. ಉದ್ಯಮ ಆರಂಭಿಸೋಣ ಎಂದು ಹೊರಟಾಗಲೂ ಇದೇ ಗುರೂಜಿ ಅದಕ್ಕೆ ಅಡ್ಡಗಾಲು ಹಾಕಿದ್ದರು. ನಮಗೆ ಬದುಕೋದೇ ಕಷ್ಟ ಎಂಬಂತಾಗಿತ್ತು. ಚಂದ್ರಶೇಖರ್​ ಗುರೂಜಿಯ ಕಿರುಕುಳ ತಾಳಲಾರದೇ ನಾವು ಈ ಕೆಲಸ ಮಾಡಿದ್ದೇವೆ ಎಂದು ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸರಳ ವಾಸ್ತು ಸಂಸ್ಥೆಯನ್ನು ತೊರೆದ ಬಳಿಕ ನಾವು ರಿಯಲ್​ ಎಸ್ಟೇಟ್​ ಉದ್ಯಮಕ್ಕೆ ಕೈ ಹಾಕಿದ್ದೆವು. ಆದರೆ ಗುರೂಜಿ ನಮಗೆ ನಿರಂತರ ಬೆದರಿಕೆಯೊಡ್ಡುತ್ತಿದ್ದರು. ನಮ್ಮ ಉದ್ಯಮಕ್ಕೆ ಇನ್ನಿಲ್ಲದ ಕಿರಿಕಿರಿ ತಂದಿಡುತ್ತಿದ್ದರು. ಈ ಕಿರುಕುಳಗಳನ್ನು ತಡೆದುಕೊಂಡು ನಮಗೂ ರೋಸಿ ಹೋಗಿತ್ತು. ಹೀಗಾಗಿ ಎಲ್ಲಾ ದ್ವೇಷವನ್ನು ಕೊಲೆಯ ಮೂಲಕ ತೀರಿಸಿಕೊಂಡೆವು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Confession from Chandrasekhar Guruji killer

Comments are closed.