Crime News: ಪತಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದ ಪತ್ನಿ ಮತ್ತು ಪ್ರಿಯಕರ

ಬೆಂಗಳೂರು: (Crime News) ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಮದ್ಯ ಕುಡಿಸಿ ಮತ್ತಿನಲ್ಲಿದ್ದಾಗ ಪತ್ನಿ ಮತ್ತು ಪ್ರಿಯಕರ ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಡೇರಹಳ್ಳಿಯ ರಾಕೇಶ್‌ ತೋಮಾಂಗ್‌ ಎಂಬಾತನೇ ಕೊಲೆಯಾದ ವ್ಯಕ್ತಿ.

ಮೃತ ರಾಕೇಶ್‌ ತೋಮಾಂಗ್‌ ಮೂವತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೃತ(Crime News)ರಾಕೇಶ್‌ ಸೆಕ್ಯೂರಿಟಿಗಾರ್ಡ್‌ ಕೆಲಸ ಮಾಡಿಕೊಂಡಿದ್ದು, ಪತ್ನಿ ದೇವಿ ತೋಮಾಂಗ್‌ ಮನೆಗೆಲಸ ಮಾಡಿಕೊಂಡಿದ್ದಳು. ಪತಿಗೆ ಊಟ ಕೊಡಲು ಹೋದಾಗ ದೇವಿಗೆ ಜೈನುಲ್‌ ಅಲಿ ಎನ್ನುವಾತ ಪರಿಚಯವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.ಈ ವಿಚಾರ ರಾಕೇಶ್‌ ಗೂ ಗೊತ್ತಾಗಿ ಎಚ್ಚರಿಕೆಯನ್ನೂ ಸಹ ನೀಡಿದ್ದ. ದೇವಿ ಮತ್ತು ಪ್ರಿಯಕರ ಜೈನುಲ್‌ ಜುಲೈ ತಿಂಗಳಲ್ಲಿ ಒಂದು ವಾರಗಳ ಕಾಲ ಓಡಿ ಹೋಗಿದ್ದು, ಒಂದು ವಾರದ ನಂತರ ಮನೆಗೆ ಮರಳಿದ ದೇವಿಗೆ ಬೈದು ಸಂಬಂಧ ಮುರಿದುಕೊಳ್ಳುವಂತೆ ರಾಕೇಶ್‌ ಹೇಳಿದ್ದ. ಹಾಗಿದ್ದರೂ ಕೂಡ ದೇವಿ ಜೈನುಲ್‌ ಜೊತೆಗಿನ ಅಕ್ರಮ ಸಂಬಂಧ ಮುಂದುವರೆಸಿದ್ದಳು.

ತನ್ನ ಪತಿ ರಾಕೇಶ್‌ ಗೆ ಲೈಂಗಿಕಾಸಕ್ತಿ ಕಡಿಮೆ ಇತ್ತು ಎನ್ನುವ ಕಾರಣಕ್ಕೆ ದೇವಿ ಜೈನುಲ್‌ ಜೊತೆಗೆ ಅಕ್ರಮ ಸಂಬಂಧ ಇರಸಿಕೊಂಡಿದ್ದಳು. ರಾಕೇಶ್‌ ಗೆ ಮದ್ಯ ಸೇವನೆಯ ಅಭ್ಯಾಸವಿತ್ತು. ಕುಡಿದು ಆಗಾಗ ದೇವಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತು ದೇವಿ ಜೈನುಲ್‌ ಗೆ ಕೊಲ್ಲುವಂತೆ ಸುಪಾರಿ ನೀಡಿದ್ದಳು. ಆತನ ಕುಡಿತದ ಚಟವನ್ನೇ ಬಂಡವಾಳವಾಗಿಸಿಕೊಂಡ ಪತ್ನಿ ರಾತ್ರಿ ಕೆಲಸ ಮುಗಿಸಿ ಬಂದ ಪತಿ ರಾಕೇಶ್‌ ಗೆ ಕಂಠಪೂರ್ತಿ ಕುಡಿಸಿ, ಕಬಾಬ್‌ ತಿನ್ನಿಸಿದ್ದಳು. ಅದೇ ಅಮಲಿನಲ್ಲಿ ರಾಕೇಶ್‌ ಮಲಗಿದ್ದಾಗ ಪತ್ನಿ ದೇವಿ ಮತ್ತು ಪ್ರಿಯಕರ ಜೈನುಲ್‌ ಇಬ್ಬರೂ ಸೇರಿ ಅವನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮದ್ಯ ಸೇವಿಸಿ ಪತಿ ಸಾವನ್ನಪ್ಪಿದ್ದಾರೆ ಎಂದು ಮಾರನೆಯ ದಿನ ದೇವಿ ನಾಟಕವಾಡಿದ್ದಾಳೆ. ಆದರೇ ಮರಣೋತ್ತರ ಪರೀಕ್ಷೆಯ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ದೃಡಪಟ್ಟಿದೆ.

ಇದನ್ನೂ ಓದಿ : Rajiv Gandhi assassination: 3 ದಶಕಗಳ ಬಳಿಕ ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯ: ನಳಿನಿ ಶ್ರೀಹರನ್ ಏನಂದ್ರು ಗೊತ್ತಾ

ಆರೋಪಿ ದೇವಿ ರಾಕೇಶ್‌ ಕೊಲೆಗೆ ಅಕ್ಟೋಬರ್‌ 29 ರ ರಾತ್ರಿಯೇ ಜೈನುಲ್‌ ನನ್ನು ಮನೆಗೆ ಕರೆಸಿಕೊಂಡು ಸ್ಟೋರ್‌ ರೂಮ್‌ ನಲ್ಲಿ ಬಚ್ಚಿಟ್ಟಿದ್ದಳು. ಅದೇ ದಿನ ರಾಕೇಶ್‌ ನನ್ನು ಕೊಲ್ಲಲು ಸ್ಕೆಚ್‌ ಹಾಕಿದ್ದು, ಅದು ವಿಫಲವಾಗಿತ್ತು. ನಂತರದಲ್ಲಿ ಸತತ ಒಂಬತ್ತು ದಿನಗಳ ಕಾಲ ಅದೇ ಮನೆಯಲ್ಲಿ ಬಚ್ಚಿಟ್ಟುಕೊಂಡು ಕೊನೆಯಲ್ಲಿ ಆರೋಪಿಗಳು ರಾಕೇಶ್‌ ನನ್ನು ನವೆಂಬರ್‌ ಆರರಂದು ಕೊಲೆ ಮಾಡುವಲ್ಲಿ ಸಫಲರಾಗಿರುವುದು ತನಿಖೆ ನಡೆಸಿದ ವೇಳೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ : Youtube medicine: ಯೂಟ್ಯೂಬ್ ನೋಡಿ ಮನೆಯಲ್ಲೇ ಔಷಧಿ ಮಾಡಿ ಕುಡಿಯುವ ಮುನ್ನ ಈ ಸ್ಟೋರಿ ಓದಲೇಬೇಕು..

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಾಕೇಶ್‌ ನನ್ನು ಕೊಲೆ ಮಾಡಿದರೇ ಮಾತ್ರವೇ ತನ್ನ ಜೊತೆ ಸಂಬಂಧ ಇರಿಸಲು ಅವಕಾಶ ನೀಡುತ್ತೇನೆ. ನೀನೊಬ್ಬ ಗಂಡಸಾಗಿದ್ದರೇ ಆತನನ್ನು ಕೊಲೆ ಮಾಡು ಎಂಬುದಾಗಿ ಜೈನುಲ್‌ ಗೆ ದೇವಿ ಸವಾಲು ಹಾಕಿದ್ದಳು. ಇದರಿಂದ ರೊಚ್ಚಿಗೆದ್ದ ಜೈನುಲ್‌ ಕುಡಿದ ಅಮಲಿನಲ್ಲಿ ಮಲಗಿದ್ದ ರಾಕೇಶ್‌ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೋಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಕೊಲೆ ಮಾಡಿದ ನಂತರದಲ್ಲಿ ರಾಕೇಶ್‌ ಅಕೌಂಟ್‌ ನಲ್ಲಿದ್ದ ಹಣವನ್ನು ಫೋನ್‌ ಪೇ ಮೂಲಕ ಜೈನುಲ್‌ ಗೆ ಕಳಿಸಿದ್ದಳು.ಅಲ್ಲದೇ ತನ್ನದೇ ಹೆಸರಿನಲ್ಲಿ ಹೊಸ ಸಿಮ್‌ ಕಾರ್ಡ್‌ ಅನ್ನು ಕೂಡ ಕೊಡಿಸಿದ್ದಳು

ಇದನ್ನೂ ಓದಿ : The teacher committed suicide : ಆನ್ ಲೈನ್‌ ನಲ್ಲಿ ಹಣ ಕಳೆದುಕೊಂಡು ಶಿಕ್ಷಕಿ ಆತ್ಮಹತ್ಯೆಗೆ ಶರಣು

ಈ ಘಟನೆಯ ಕುರಿತು ವಿದ್ಯಾರಣ್ಯಪುರದ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ವೇಳೆ ದೇವಿಯ ಫೋನ್‌ ಕರೆಗಳು ಮತ್ತು ಬ್ಯಾಂಕ್‌ ಅಕೌಂಟ್‌ ಮಾಹಿತಿಯನ್ನು ಪಡೆದು ಪರಿಶೀಲನೇ ನಡೆಸಿದಾಗ ಆರೋಪಿ ಜೈನುಲ್‌ ಕುರಿತಾಗಿ ಮಾಹಿತಿಗಳು ದೊರೆತಿವೆ.

(Crime News) The incident in which the husband, who questioned his illicit relationship, strangled his wife and lover while he was drunk, was in the jurisdiction of Vidyaranyapur police station in Bangalore. The murdered person is Rakesh Thomang of Vaderahalli.

Comments are closed.