Crime News : ಕುಡಿದ ಅಮಲಿನಲ್ಲಿದ್ದ ಗಂಡನನ್ನು ಹತ್ಯೆಗೈದ ಪತ್ನಿ

ತಮಿಳುನಾಡು : ಮಹಿಳೆಯೊಬ್ಬಳು ಮದ್ಯವ್ಯಸನಿಯಾಗಿದ್ದ ಪತಿಯನ್ನು ಮಚ್ಚಿನಿಂದ ಕೊಲೆ ಮಾಡಿ (Crime News) ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯು ಪ್ರತಿದಿನ ಮದ್ಯಪಾನ ಮಾಡಿಕೊಂಡು ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ದುರಂತ ಘಟನೆಯು, ತಮಿಳುನಾಡಿನ ಈರೋಡ್‌ ನಾಮಕ್ಕಲ್ಪಾಳ್ಯಂ ಗ್ರಾಮದಲ್ಲಿ ನಡದಿದೆ. ಪೊಲೀಸರ ಪ್ರಕಾರ, ಬಾಲು (65) ಮತ್ತು ಅವರ ಪತ್ನಿ ಈಶ್ವರಿ ಕಳೆದ ಕೆಲವು ತಿಂಗಳುಗಳಿಂದ ನಾಮಕ್ಕಲ್ಪಾಳ್ಯಂ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಿಗೆ ವಿವಾಹವಾಗಿದೆ. ಬಾಲು ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಶನಿವಾರ ರಾತ್ರಿ, ಅಂತಹ ಒಂದು ಘಟನೆಯಲ್ಲಿ, ಈಶ್ವರಿ ತನ್ನ ಪತಿಯನ್ನು ಮಚ್ಚಿನಿಂದ ಇರಿದು ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಮನೆಯಿಂದ ಓಡಿ ಹೋಗಿದ್ದಾಳೆ.

ಇದನ್ನೂ ಓದಿ : West Bengal Crime : ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯ ಹತ್ಯೆಗೈದ ಟಿಎಂಸಿ ಕಾರ್ಯಕರ್ತ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಈರೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಈಶ್ವರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Crime News : Wife killed her drunk husband

Comments are closed.