ಸೋಮವಾರ, ಜೂನ್ 16, 2025
HomeCrimeGas Cylinder Blast : ಸಿಲಿಂಡರ್‌ ಬ್ಲಾಸ್ಟ್‌ಗೆ ಮೂವರು ಹೆಣ್ಣು ಮಕ್ಕಳು ಬಲಿ : ಕರಳು...

Gas Cylinder Blast : ಸಿಲಿಂಡರ್‌ ಬ್ಲಾಸ್ಟ್‌ಗೆ ಮೂವರು ಹೆಣ್ಣು ಮಕ್ಕಳು ಬಲಿ : ಕರಳು ಹಿಂಡುತ್ತಿದೆ ದುರಂತ ಘಟನೆ

- Advertisement -

ಉತ್ತರ ಪ್ರದೇಶ : ತಾಯಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮೂವರು ಹೆಣ್ಣು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಜಂಗಡದ ಆಹ್ರೌಲಾದ ಇಮಾಮ್‌ಗಡದಲ್ಲಿ ನಡೆದಿದೆ.

ದೀಪಾಂಜಲಿ (11 ವರ್ಷ), ಶಿವಾಂಶಿ (6 ವರ್ಷ) ಹಾಗೂ ಶ್ರೇಜಲ್‌ ( 4 ವರ್ಷ) ಎಂಬ ಹಣ್ಣು ಮಕ್ಕಳೇ ಸಾವನ್ನಪ್ಪಿದವರು. ತಾಯಿ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ನೀರು ತರಲು ಆಚೆಗೆ ತೆರಳಿದ್ದರು. ಈ ವೇಳೆಯಲ್ಲಿ ಗ್ಯಾಸ್‌ ಸಿಲಿಂಡರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಡುಗೆ ಮನೆಯಲ್ಲಿಯೇ ಇದ್ದ ಮೂವರು ಮಕ್ಕಳು ಬೆಂಕಿಯ ಜ್ವಾಲೆಯಲ್ಲಿ ಸಿಕ್ಕಿ ಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮಕ್ಕಳನ್ನು ಉಳಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರು ಮಕ್ಕಳು ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿದ್ದರು. ಕೊನೆಗೂ ಮೂವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮೋದಲೇ ದೀಪಾಂಜಲಿ ಹಾಗೂ ಶಿವಾಂಶಿ ಸಾವನ್ನಪ್ಪಿದ್ದರೆ, ಶ್ರೇಜಲ್‌ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

(Death of 3 girls by gas cylinder explosion in UP )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular