export tax on petrol : ಪೆಟ್ರೋಲ್​, ಡೀಸೆಲ್​ ಮೇಲಿನ ರಫ್ತು ತೆರಿಗೆಯಲ್ಲಿ ಭಾರೀ ಏರಿಕೆ : ಕುಸಿದ ರಿಲಯನ್ಸ್​ ಷೇರು

export tax on petrol : ದೇಶಿಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಇಂಧನ ಕೊರತೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಪ್ಲಾನ್​ವೊಂದನ್ನು ರೂಪಿಸಿದೆ. ವಿದೇಶಗಳಿಗೆ ತೈಲ ರಫ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್​, ಡೀಸೆಲ್​ ಹಾಗೂ ವಿಮಾನ ಇಂಧನ ರಫ್ತಿನ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗಿದೆ. ಈ ಮೂಲಕ ಇಂಧನ ಅಭಾವವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.


ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಪ್ರತಿ ಲೀಟರ್​ ಪೆಟ್ರೋಲ್​ ಹಾಗೂ ವಿಮಾನ ಇಂಧನಗಳ ರಫ್ತಿನ ಮೇಲೆ ಆರು ರೂಪಾಯಿ ಹಾಗೂ ಡೀಸೆಲ್​ ರಫ್ತಿನ ಮೇಲೆ 13 ರೂಪಾಯಿ ತೆರಿಗೆ ನಿಗದಿಪಡಿಸಲಾಗಿದೆ. ಪ್ರತಿ ಟನ್​ ಇಂಧನ ರಫ್ತಿಗೆ 23,230 ರೂಪಾಯಿ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ದೇಶಿ ತೈಲೋತ್ಪನ್ನಗಳನ್ನು ವಿದೇಶಿಗಳಿಗೆ ಕಳುಹಿಸಿ ಭಾರೀ ಮೊತ್ತದ ಲಾಭವನ್ನು ಪಡೆಯುತ್ತಿದ್ದ ಖಾಸಗಿ ಕಂಪನಿಗಳಿಗೆ ಮೂಗು ದಾರವನ್ನು ಹಾಕಿದೆ.


ಕೇಂದ್ರ ಸರ್ಕಾರದ ಈ ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ರಿಲಯನ್ಸ್​ ಇಂಡಸ್ಟ್ರೀಸ್​, ಎನ್​ಜಿಸಿ ಷೇರುಗಳಿಗೆ ಭಾರೀ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸರ್ಕಾರಿ ಸ್ವಾಮ್ಯದ ಎನ್​ಸಿಜಿ ಷೇರು ಶೇಕಡಾ 10ರಷ್ಟು ಕುಸಿತ ಕಂಡಿದ್ದರೆ ಒತ್ತೆ ರಿಲಯನ್ಸ್​ ಇಂಡಸ್ಟ್ರೀಸ್​​​ ಲಿಮಿಟೆಡ್​ ಕಳೆದ 18 ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಐದು ಪ್ರತಿಶತ ಷೇರು ಕುಸಿತ ದಾಖಲಿಸಿದೆ.

ಕನ್ಹಯ್ಯಲಾಲ್​ ಶಿರಚ್ಛೇದ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್​ ಕನ್ಹಯ್ಯಲಾಲ್​ ಶಿರಚ್ಛೇಧ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾದಿ ಮುಹಮ್ಮದ್​ ವಿರುದ್ಧ ಮಾತನಾಡಿ ಭಾರೀ ವಿವಾದದ ಸುಳಿಯಲ್ಲಿ ಸಿಲುಕಿರುವ ನೂಪುರ್​ ಶರ್ಮಾ ಪರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಕನ್ಹಯ್ಯಲಾಲ್​ ಪೋಸ್ಟ್​ ಹಾಕಿದ್ದಾರೆ ಎಂಬ ಕಾರಣಕ್ಕೆ ಈ ಕೊಲೆ ನಡೆದಿತ್ತು . ಈ ಪ್ರಕರಣದಲ್ಲಿ ಇದೀಗ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಇವರು ಇಡೀ ಪ್ರಕರಣದ ಸಂಚು ಹಾಗೂ ಸಿದ್ಧತೆಯ ಮಾಸ್ಟರ್​ ಮೈಂಡ್​ ಆಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್​ ಮಾಹಿತಿ ನೀಡಿದ್ದಾರೆ.


ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಅಂಗಡಿಯಲ್ಲಿ ಬಟ್ಟೆ ಹೊಲಿಯುತ್ತಿದ್ದ ಕನ್ಹಯ್ಯಲಾಲ್​ ಬಳಿಗೆ ಬಂದ ಇಬ್ಬರು ದುಷ್ಕರ್ಮಿಗಳು ಬಟ್ಟೆ ಹೊಲಿದುಕೊಡುವಂತೆ ಹೇಳಿದ್ದರು, ಕನ್ಹಯ್ಯಲಾಲ್​ ಇವರು ಗ್ರಾಹಕರು ಎಂದುಕೊಂಡು ಮಾತನಾಡಲು ಮುಂದಾಗುತ್ತಿದ್ದಂತೆಯೇ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯಲಾಲ್​​ ಕತ್ತನ್ನು ಸೀಳಿದ್ದರು. ಬರೋಬ್ಬರಿ 27 ಬಾರಿ ಕನ್ಹಯ್ಯಲಾಲ್ ಭುಜದಿಂದ ಕುತ್ತಿಗೆಯವರೆಗೆ ಇರಿದು ಆತನ ಶಿರಚ್ಛೇಧ ಮಾಡಿದ್ದರು. ಮಾತ್ರವಲ್ಲದೇ ಈ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವ ಮೂಲಕ ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರಿಗೂ ಜೀವ ಬೆದರಿಕೆಯೊಡ್ಡಿದ್ದರು. ಈ ಘಟನೆ ಬಳಿಕ ಅಲರ್ಟ್ ಆದ ಪೊಲೀಸರು ಮಾರನೇ ದಿನವೇ ಕೊಲೆ ಎಸಗಿದ ರಿಯಾಜ್​ ಅಖ್ತರಿ ಹಾಗೂ ಘೌಸ್​ ಮೊಹಮ್ಮದ್​ರನ್ನು ಬಂಧಿಸಿದ್ದರು.


ಸೋಶಿಯಲ್​ ಮೀಡಿಯಾದಲ್ಲಿ ನೂಪುರ್​ ಶರ್ಮಾ ಪರವಾಗಿ ಪೋಸ್ಟ್​ ಹಾಕುತ್ತಿದ್ದಂತೆಯೇ ಜೂನ್​ 17ರಂದು ಮೃತ ಕನ್ಹಯ್ಯಲಾಲ್​ಗೆ ಜೀವ ಬೆದರಿಕೆಯೊಡ್ಡಲಾಗಿತ್ತು. ಇದರಿಂದ ಭಯಗೊಂಡಿದ್ದ ಕನ್ಹಯ್ಯ ಲಾಲ್​ ಪೊಲೀಸ್​ ಠಾಣೆಗೂ ತೆರಳಿ ತಮಗೆ ಜೀವ ಭಯ ಇದೆ ಎಂದು ಹೇಳಿದ್ದರು. ಆದರೆ ಅಂದು ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.

ಇದನ್ನು ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

government hikes export tax on petrol by 6 rupees and diesel by 13 rupees

Comments are closed.