CA Day 2022 : ಇಂದು ಲೆಕ್ಕ ಪರಿಶೋಧಕರನ್ನು ಸ್ಮರಿಸುವ ದಿನ ! ಈ ಪರಿಕಲ್ಪನೆ ಪ್ರಾರಂಭವಾದದ್ದು ಯಾವಾಗ ಗೊತ್ತಾ?

ಪ್ರತಿ ವರ್ಷ ಜುಲೈ 1 ರಂದು ಚಾರ್ಟೆಡ್‌ ಅಕೌಂಟೆಂಟ್ಸ್‌ (CA Day 2022) ದಿನ ಎಂದು ಆಚರಿಸಲಾಗುವುದು. ಇದರ ಉದ್ದೇಶ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ICAI) ಸಂಶೋಧನೆಗಳನ್ನು ಸ್ಮರಿಸುವುದಾಗಿದೆ. ಅದರಂತೆ ಜುಲೈ 1 ಅನ್ನು CA ಸಂಸ್ಥಾಪನಾ ದಿನ ಎಂದೂ ಕರೆಯಲಾಗುವುದು.

ಭಾರತದಲ್ಲಿ ICAI ಮಾತ್ರ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಲೆಕ್ಕ ಪರಿಶೋಧನೆಯ ವೃತ್ತಿಗೆ ಪರವಾನಿಗೆ ನೀಡುವ ಮತ್ತು ನಿಯಂತ್ರಣ ಮಾಡುವ ಸಂಸ್ಥೆಯಾಗಿದೆ. ನ್ಯಾಷನಲ್‌ ಫೈನಾನ್ಶಿಯಲ್‌ ರಿಪೋರ್ಟಿಂಗ್‌ ಅಥಾರಿಟಿ(NFRA) ಸೇರಿದಂತೆ ಎಲ್ಲಾ ಹಣಕಾಸು ಮತ್ತು ಲೆಕ್ಕಪತ್ರ ಸಂಸ್ಥೆಗಳು ICAI ಶಿಫಾರಸು ಮಾಡಿದ ಮಾನದಂಡಗಳನ್ನು ಅಗತ್ಯವಾಗಿ ಅನುಸರಿಸಬೇಕಾಗಿದೆ.

ಇತಿಹಾಸ :

ಭಾರತ ಸ್ವತಂತ್ರವಾಗುವ ಮೊದಲು ಬ್ರಿಟಿಷ್‌ ಸರ್ಕಾರ ತನ್ನ ಕಂಪನಿಯ ಕಾಯಿದೆಯಂತೆ ಭಾರತದಲ್ಲಿ ಲೆಕ್ಕಪತ್ರಗಳನ್ನು ನಿಯಂತ್ರಿಸುತ್ತಿತ್ತು. ಇದಕ್ಕಾಗಿ ಆಡಿಟರ್ ಗಳನ್ನು ನೇಮಿಸುತ್ತಿತ್ತು . ವರ್ಷ ಕಳೆದಂತೆ ಅವರಲ್ಲಿ ಅರ್ಹತೆಯ ವಿಷಯಕ್ಕೆ ಗೊಂದಲಗಳು ಕಾಣಿಸಿದವು.

ಭಾರತ ಸ್ವಾತಂತ್ರ್ಯ ಪಡೆದ ನಂತರ 1948 ರಲ್ಲಿ ತಜ್ಞರ ಸಮಿತಿಯು ದೇಶದ ಲೆಕ್ಕ ಪತ್ರಗಳನ್ನು ನಿರ್ವಹಿಸಲು ಪ್ರತ್ಯೇಕ ಸಂಸ್ಥೆಯ ಶಿಫಾರಸ್ಸು ಮಾಡಿತು. ಅದರಂತೆ ಭಾರತ ಸರ್ಕಾರ ಸಂಸತ್ತಿನಲ್ಲಿ ಶಿಫಾರಸ್ಸು ಮಾಡಿದ ಮಸೂದೆಯನ್ನು ಅಂಗೀಕರಿಸಿತು. ನಂತರ ಅದನ್ನು ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಎಂದು ಹೆಸರಿಸಲಾಯಿತು.

CA ದಿನದ ಮಹತ್ವ :
ನಮ್ಮ ದೇಶದ ಅಭಿವೃದ್ಧಿಯಲ್ಲಿ CA ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ICAI ಭಾರತದಲ್ಲಿ ಲೆಕ್ಕ ಪತ್ರಗಳನ್ನು ನಿಯಂತ್ರಿಸುವ ಸಂಸ್ಥೆಯಾಗಿದೆ. ಅವರ ಕೆಲಸ ಅತ್ಯಂತ ಕಠಿಣ ಕೆಲಸವಾಗಿದೆ. ಅದಕ್ಕಾಗಿಯೇ ಅವರ ಪರಿಶ್ರಮವನ್ನು ಸ್ಮರಿಸುವ ಸಲುವಾಗಿ ಜುಲೈ 1 ಅನ್ನು CA ಡೇ ಅಥವಾ ICAI ಸಂಸ್ಥಾಪನಾ ದಿನ ಎಂದು ಆಚರಿಸಲಾಗುವುದು.

ಇದನ್ನೂ ಓದಿ : Salary Slip Details : ನಿಮಗಿದು ಗೊತ್ತೇ? ಸ್ಯಾಲರಿ ಸ್ಲಿಪ್‌ ಏನೆಲ್ಲಾ ಒಳಗೊಂಡಿರುತ್ತದೆ ಎಂದು !!

ಇದನ್ನೂ ಓದಿ : Email Password : ನಿಮ್ಮ ಇಮೇಲ್‌ನ ಪಾಸ್‌ವರ್ಡ್‌ ಬದಲಿಸುವುದು ಹೇಗೆ ಗೊತ್ತೇ?

(CA Day 2022 know the history and significance of the day)

Comments are closed.