ಪಟಾಕಿ ಸಾಗಿಸುತ್ತಿದ್ದ ಇ-ರಿಕ್ಷಾದಲ್ಲಿ ಸ್ಫೋಟ: ಓರ್ವ ವ್ಯಕ್ತಿ ಸಾವು, ಇನ್ನೋರ್ವನಿಗೆ ಗಾಯ

ನೋಯ್ಡಾ: (Explosion in e-rickshaw) ಜಗನ್ನಾಥ ಯಾತ್ರೆ ವೇಳೆ ಪಟಾಕಿಗಳನ್ನು ಹೊತ್ತೊಯ್ಯುತ್ತಿದ್ದ ಇ -ರಿಕ್ಷಾ ಸ್ಫೋಟಗೊಂಡಿದ್ದು, ಇದರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಂಗಡಿಯೊಂದರ ಸಿಸಿಟಿವಿಯಲ್ಲಿ ಘಟನಾ ದೃಶ್ಯ ಸೆರೆಯಾಗಿದ್ದು, ಜಗನ್ನಾಥ ಯಾತ್ರೆಯ ವೇಳೆ ಸಿಡಿಸಲಾಗಿದ್ದ ಪಟಾಕಿ ಕಿಡಿಗಳು ಬಿದ್ದ ನಂತರ ರಿಕ್ಷಾದಲ್ಲಿದ್ದ ಪಟಾಕಿಗಳಿಗೂ ಬೆಂಕಿ ಹೊತ್ತಿಕೊಂಡು ಸ್ಪೋಟ ಸಂಭವಿಸಿದೆ ಎನ್ನಲಾಗಿದೆ.

ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ದಾದ್ರಿ ಪಟ್ಟಣದಲ್ಲಿ ಜಗನ್ನಾಥ ಶೋಭಾ ಯಾತ್ರೆ ಸಾಂಪ್ರದಾಯಿಕವಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಒಂದು ಪಟಾಕಿ ಇ- ಮೇಲೆ ಬಿದ್ದಿದೆ. ಇ- ರಿಕ್ಷಾದಲ್ಲಿ ಇತರೆ ಪಟಾಕಿಗಳನ್ನು ಸಹ ಇರಿಸಲಾಗಿತ್ತು. ಹೀಗಾಗಿ ರಿಕ್ಷಾ ಮೇಲೆ ಪಟಾಕಿ ಬಿದ್ದ ಕಾರಣ ಇತರೆ ಪಟಾಕಿಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಎಲೆಕ್ಟ್ರಿಕ್ ವಾಹನದಲ್ಲಿದ್ದ ಪಟಾಕಿಗಳೆಲ್ಲವೂ ಒಟ್ಟೊಟ್ಟಿಗೆ ಸುಟ್ಟು ಹೋಗುತ್ತಿದ್ದಂತೆ ರಸ್ತೆಯಲ್ಲಿ ದಟ್ಟ ಹೊಗೆ ಆವರಿಸಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಪೊಲೀಸರು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಒಬ್ಬರು ಮಂಗಳವಾರ ನಿಧನರಾದರು ಎಂದು ಅವರು ಹೇಳಿದರು.

ಘಟನೆಯ ವಿಡಿಯೋ ರಸ್ತೆಯ ಪಕ್ಕದಲ್ಲಿದ್ದ ಅಂಗಡಿಯೊಂದರ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಇ-ರಿಕ್ಷಾದಲ್ಲಿ ಇರಿಸಲಾದ ಪಟಾಕಿ ತುಂಬಿದ ಪೆಟ್ಟಿಗೆಗಳಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಒಂದೇ ಸಮನೆ ದಟ್ಟ ಹೊಗೆ ಆವರಿಸಿದೆ. ಸ್ಫೋಟದ ಪ್ರಭಾವದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳದಲ್ಲಿ ನಿಂತಿದ್ದ ಕೆಲವರು ಬೇರೆ ಬೇರೆ ದಿಕ್ಕುಗಳಲ್ಲಿ ಓಡಿದರೆ ಕೆಲವರು ಅಂಗಡಿಯೊಳಗೆ ನುಗ್ಗುತ್ತಾರೆ. ಕೆಲವು ನಿಮಿಷಗಳ ನಂತರ, ಸ್ಥಳದಲ್ಲಿದ್ದ ಸ್ಥಳೀಯರು ಇ-ರಿಕ್ಷಾದ ಬೆಂಕಿಯನ್ನು ನಂದಿಸಿದರು.

ಗ್ರೇಟರ್ ನೋಯ್ಡಾ ಎಡಿಸಿಪಿ ಘಟನೆಯ ಬಗ್ಗೆ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “27.02.2023 ರಂದು ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ದಾದ್ರಿ ಪಟ್ಟಣದಲ್ಲಿ ಜಗನ್ನಾಥ ಶೋಭಾ ಯಾತ್ರೆ ಸಾಂಪ್ರದಾಯಿಕವಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಒಂದು ಪಟಾಕಿ ಇ- ಮೇಲೆ ಬಿದ್ದಿದೆ. ಅದರಲ್ಲಿ ಇತರ ಪಟಾಕಿಗಳನ್ನು ಇರಿಸಲಾಗಿತ್ತು, ಇದರಿಂದಾಗಿ ಉಳಿದವುಗಳಿಗೆ ಬೆಂಕಿ ತಗುಲಿದೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Bidar murder: ಜನನಿಬೀಡ ಪ್ರದೇಶದಲ್ಲಿ ಹಾಡಹಗಲೇ ವ್ಯಕ್ತಿಯನ್ನು ಕಡಿದು ಬರ್ಬರ ಹತ್ಯೆ

ಇದನ್ನೂ ಓದಿ : shooting attack: ಚಂಚಲ್ ಪಾರ್ಕ್ ಪ್ರದೇಶದ ಕೇಬಲ್ ಕಚೇರಿಯೊಳಗೆ ಗುಂಡಿನ ದಾಳಿ: ಓರ್ವನಿಗೆ ಗಾಯ

ಅಪಘಾತದಲ್ಲಿ ಪಟಾಕಿ ಹಚ್ಚುತ್ತಿದ್ದ ಸಲ್ಮಾನ್ ಮತ್ತು ಇ-ರಿಕ್ಷಾ ಚಾಲಕ ಪಪ್ಪು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಇಂದು, 28.02.2023 ರಂದು, ಗಾಯಾಳು ಸಲ್ಮಾನ್ ದೆಹಲಿ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ, ಇತರ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

Explosion in e-rickshaw: Explosion in e-rickshaw carrying firecrackers: One person killed, another injured

Comments are closed.