Fire accident : ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ ; 15 ಸಾವು ,250 ಮಂದಿ ಸ್ಥಳಾಂತರ

ರಷ್ಯಾ : (Fire accident)ಕೆಫೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿರುವ ಘಟನೆ ರಷ್ಯಾದ ಕೊಸ್ಟ್ರೋಮಾದಲ್ಲಿ ನಡೆದಿದೆ . ಶನಿವಾರ ಬೆಳಗ್ಗಿನ ಜಾವ ಕೆಫೆಯೊಂದರಲ್ಲಿ ಬೆಂಕಿ(Fire accident) ಹೊತ್ತಿಕೊಂಡಿದ್ದು , ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ .ಇನ್ನೂ ಅವಘಡದಲ್ಲಿ ಸಿಲುಕಿದ್ದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ .

ಶನಿವಾರ ಬೆಳಗಿನ ಜಾವ ಕೆಫೆಯಲ್ಲಿ ಬೆಂಕಿ(Fire accident) ಹೊತ್ತಿಕೊಂಡಿದ್ದರಿಂದ ಕೆಫೆಯ ಮೇಲ್ಛಾವಣಿ ಕುಸಿದಿದ್ದು , ಸರಿಸುಮಾರು 265 ಮಂದಿ ಸಿಲುಕಿಕೊಂಡಿದ್ದರು .ಅವರಲ್ಲಿ 15 ಮಂದಿ ಸಾವನ್ನಪ್ಪಿದ್ದು , ಇನ್ನುಳಿದ 250 ಜನರನ್ನು ರಕ್ಷಣಾ ತಂಡದ ನೆರವಿನಿಂದ ಸ್ಥಳಾಂತರಿಸಲಾಯಿತು. ಈ ಘಟನೆಯಲ್ಲಿ ಕೊಸ್ಟ್ರೋಮಾ ಪ್ರದೇಶದ ಗವರ್ನರ್, ಸೆರ್ಗೆಯ್ ಸಿಟ್ನಿಕೋವ್ ಸೇರಿದಂತೆ ಐದು ಜನರು ಸ್ವಲ್ಪಮಟ್ಟಿಗೆ ಗಾಯಗೊಂಡಿದ್ದು , ಅವರಿಗೆ ಚಿಕಿತ್ಸೆಯನ್ನು ನೀಡಲಾಗಿದೆ .

ಇದನ್ನೂ ಓದಿ : Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಇಮ್ರಾನ್ ಕಾಲಿಗೆ ಗಾಯ

ಇದನ್ನೂ ಓದಿ : Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ

ಶನಿವಾರ ಬೆಳಗ್ಗಿನ ಜಾವ ನಡೆದ ಬೆಂಕಿ ದುರಂತಕ್ಕೆ 15 ಜನರು ಬಲಿಯಾಗಿದ್ದಾರೆ ಎಂಬುದು ಪ್ರಾಥಮಿಕ ವರದಿಗಳ ಮೂಲಕ ತಿಳಿದುಬಂದಿದೆ ಎಂದು ಸ್ಥಳೀಯ ಗವರ್ನರ್ ಸೆರ್ಗೆಯ್ ಸಿಟ್ನಿಕೋವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ನಗರದ ಕೆಫೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ಇದನ್ನೂ ಓದಿ : Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಘಟನೆಯಲ್ಲಿ ಕನಿಷ್ಠ ಐದು ಜನರು ಗಾಯಗೊಂಡಿದ್ದು , ಅವರಿಗೆ ಯಾವುದೇ ಹಾನಿಯಾಗಿಲ್ಲ . ಬೆಂಕಿಯು 3,500 ಚದರ ಮೀಟರ್‌ಗೆ ವ್ಯಾಪಿಸಿದ್ದು , ರಕ್ಷಣಾ ಪಡೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ ಎಂದು ಸಿಟ್ನಿಕೋವ್‌ ಮಾಹಿತಿ ನೀಡಿದ್ದಾರೆ.

ಬೆಂಕಿ ಅವಘಡ ಹೇಗೆ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ . ಈ ಕುರಿತು ರಕ್ಷಣಾ ತಂಡಗಳು ತನಿಖೆ ನಡೆಸುತ್ತಿದ್ದು , ಈ ಕುರಿತಾಗಿ ಮಾಹಿತಿ ಲಭ್ಯವಾಗಬೇಕಿದೆಯಷ್ಟೇ .

(Fire accident) A huge fire accident occurred in a cafe, 15 people died and 5 people were injured in Kostroma, Russia. A fire broke out in a cafe on Saturday morning and 15 people died in the accident. Local authorities said that 250 people who were still involved in the accident have been evacuated

Comments are closed.