Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಹೊಸದಿಲ್ಲಿ: (Road Accident)ಕಾಂಕ್ರೀಟ್‌ ರೇಲಿಂಗ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಮೃತಪಟ್ಟಿರುವ ಘಟನೆ ದಿಲ್ಲಿಯ ಸಿಗ್ನೇಚರ್‌ ಸೇತುವೆಯ ಬಳಿ ನಡೆದಿದೆ. ಘಟನೆ( Road Accident)ಯಲ್ಲಿ ಓರ್ವ ಸಾವನ್ನಪ್ಪಿದ್ದು , ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ . ಮೃತರನ್ನು ನಂಗ್ಲೋಯ್‌ನ ಚಂದನ್ ವಿಹಾರ್ ನಿವಾಸಿ ಆಕಾಶ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಆತನ ಸಹೋದರನನ್ನು ಬಾದಲ್ ಮತ್ತು ಅವರ ಸ್ನೇಹಿತ ಹರ್ಷಿತ್ ಎಂದು ಗುರುತಿಸಲಾಗಿದೆ.

20 ವರ್ಷದ ಆಕಾಶ್‌ ಎನ್ನುವ ಯುವಕ ಈ‍ ಘಟನೆ(Road Accident)ಯಲ್ಲಿ ಸಾವನ್ನಪ್ಪಿದ್ದು , ಆತನ ಕಿರಿಯ ಸಹೋದರ ಮತ್ತು ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ವೈ-ಪಾಯಿಂಟ್ ಸಿಗ್ನೇಚರ್ ಬ್ರಿಡ್ಜ್ ಬಳಿಯ ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಕರೆತರಲಾದ ಮೂವರು ವ್ಯಕ್ತಿಗಳ ಕುರಿತು ಗುರುವಾರ ಬೆಳಿಗ್ಗೆ ಸುಮಾರು 5:47 ಕ್ಕೆ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್)ಗೆ ಕರೆ ಬಂದಿತು, ನಂತರ ಪೊಲೀಸ್ ತಂಡ ಆಸ್ಪತ್ರೆಗೆ ಧಾವಿಸಿದ್ದು , ಅಪಘಾತ ನಡೆದ ಸ್ಥಳಕ್ಕೆ ಪೋಲೀಸ್‌ ಸಿಬ್ಬಂಧಿಗಳನ್ನು ಕಳುಹಿಸಲಾಗಿದೆ ಮತ್ತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಅಪಘಾತ ಸಂಭವಿಸಿದ ನಂತರ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದು , ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ . ಆದರೆ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ : Shyam Saran Negi:ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ನೆನಪು ಮಾತ್ರ

ತನಿಖೆಯ ವೇಳೆ ಘಟನೆ ನಡೆದ ಸ್ಥಳದಲ್ಲಿ ಅಪಘಾತದ ಸ್ಥಿತಿಯಲ್ಲಿ ಬೈಕ್ ಪತ್ತೆಯಾಗಿದ್ದು , ಈ ಕುರಿತು ಚಿಕಿತ್ಸೆಯಲ್ಲಿದ್ದ ಇಬ್ಬರು ವ್ಯಕ್ತಿಗಳಲ್ಲಿ ಹೇಳಿಕೆಯನ್ನು ಪಡೆದ ನಂತರವಷ್ಟೇ ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದು ಬರುವುದು .

ಇದನ್ನೂ ಓದಿ : Delhi Pollution:ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ : ವಾಹನ ಸಂಚಾರ ನಿಷೇಧ, ತಪ್ಪಿದ್ರೆ 20,000 ರೂ. ದಂಡ

ಈ ಘಟನೆಯ ಕುರಿತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ತಿಮಾರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : The big twist : ಚಂದ್ರಶೇಖರ್‌ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಕೊನೆಯ ಆ ಕರೆಯಲ್ಲಿತ್ತಾ ಸಾವಿನ ಸೀಕ್ರೆಟ್

“ಪ್ರಾಥಮಿಕ ತನಿಖೆಯಲ್ಲಿ, ಮೂವರು ಹೆಲ್ಮೆಟ್ ಧರಿಸದೆ, ಮುಂಜಾನೆ 3.30 ರ ಸುಮಾರಿಗೆ ಬೈಕ್‌ನಲ್ಲಿ ಸಿಗ್ನೇಚರ್ ಬ್ರಿಡ್ಜ್‌ಗೆ ತೆರಳಿದ್ದರು ಮತ್ತು 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ” ಎಂದು ತನಿಖೆಯ ಅಧಿಕೃತ ಗೌಪ್ಯ ಸಿಬ್ಬಂಧಿಗಳು ತಿಳಿಸಿದ್ದಾರೆ.

(Road Accident) A 20-year-old youth died as a result of his bike colliding with the concrete railing. The incident took place near Delhi’s signature bridge. One person died and two others were seriously injured in the road accident. The deceased has been identified as Akash, a resident of Nangloi’s Chandan Vihar, while the injured have been identified as his brother Badal and his friend Harshit.

Comments are closed.