gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

ಬೆಂಗಳೂರು : ದೇಶದಲ್ಲಿ ಮಹಿಳೆಗೆ(gang rape on girl child) ಸುರಕ್ಷತೆ ಒದಗಿಸಬೇಕು ಎಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪೊಲೀಸ್​ ಇಲಾಖೆ ಕೂಡ ಎಲ್ಲಾ ರೀತಿಯಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಸರ್ಕಾರ ಹಾಗೂ ಪೊಲೀಸ್​ ಇಲಾಖೆಯ ಈ ಎಲ್ಲಾ ಪ್ರಯತ್ನಗಳ ನಡುವೆಯೇ ಅಲ್ಲಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು ಆತಂಕ ಹೆಚ್ಚಾಗಿದೆ.

16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಲಕಿಯ ಮೇಲೆ 8 ಮಂದಿ ಕಾಮಿಕರು ನಿರಂತರ ಅತ್ಯಾಚಾರವೆಸಗಿದ್ದು ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಯಲಹಂಕ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


ಈ ಪ್ರಕರಣ ಪ್ರಮುಖ ಆರೋಪಿಯು ಮೊದಲು ತಾನು ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.ಬಳಿಕ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ.ಬಳಿಕ ಸ್ನೇಹಿತರ ಜೊತೆ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕೂಡಲೇ ಅಲರ್ಟ್ ಆದ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು ಕಣ್ಮರೆಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನು ಓದಿ : COVID-19 Booster Dose ನೋಂದಣಿ ಹೇಗೆ, ಲಸಿಕೆಯ ಬೆಲೆ ಎಷ್ಟು : ಬೂಸ್ಟರ್ ಡೋಸ್ ಪಡೆಯಲು ನೀವು ಅರ್ಹರೆ : ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇದನ್ನೂ ಓದಿ : Wedding Dance : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್‌ : ವೈರಲ್‌ ಆಯ್ತು ಉಡುಪಿಯ ಮದುವೆ ವಿಡಿಯೋ

gang rape on girl child of 16 years in bengaluru by 8 people 7 men arrested by police

Comments are closed.