ಮೋದಿ ರಾಜ್ಯ ಭೇಟಿಗೆ ಕಾಂಗ್ರೆಸ್ ಟೀಕೆ: ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಸುರಿಮಳೆಗೈಯ್ದ ಕೈಪಾಳಯ

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಇದೊಂದು ಚುನಾವಣೆ ಉದ್ದೇಶಕ್ಕಾಗಿ ನಡೀತಿರೋ ದಂಡಯಾತ್ರೆ ಎಂಬರ್ಥದಲ್ಲಿ ಟೀಕಿಸಿರೋ ಕಾಂಗ್ರೆಸ್‌ ಪ್ರಧಾನಿ ಮೋದಿಗೆ (Prime Minister Modi’s state visit) ಹಲವು ಪ್ರಶ್ನೆಗಳನ್ನು ಕೇಳಿದೆ. ಅಲ್ಲದೇ ಮೋದಿ ಭೇಟಿಯನ್ನು ರಾಜಕೀಯ ಪ್ರೇರಿತ ಭೇಟಿ ಎಂದು ಟೀಕಿಸಿದೆ.

ಕರ್ನಾಟಕ ದಲ್ಲಿ ಈ ಹಿಂದೆ ನಡೆದ ಪಾಕೃತಿಕ ಹಾಗೂ ಇತರ ದುರಂತಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಆ ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಭೇಟಿ ನೀಡದೇ ಇರೋದನ್ನು ಈಗ ನೆನಪಿಸಿ ಸರಣಿ ಟ್ವೀಟ್ ಮಾಡಿದೆ.ಕರ್ನಾಟಕವು ಸತತ ಮೂರು ವರ್ಷಗಳ ಕಾಲ ಪ್ರವಾಹಕ್ಕೆ ಬಳಲಿತು. ಜನರು ಪ್ರವಾಹಕ್ಕೆ ತುತ್ತಾಗಿ ಆಸ್ತಿ ಪಾಸ್ತಿ ಕಳೆದುಕೊಂಡು ಕಣ್ಣೀರಿಟ್ಟರು. ಆಗ ನೆರೆ ಸಂತ್ರಸ್ತರ ಸಂಕಟ ಆಲಿಸಲು ಎಂದಾದರೂ ಕರ್ನಾಟಕಕ್ಕೆ ಬಂದಿದ್ದಾರೆಯೇ ನಮ್ಮ ಪ್ರಧಾನಿಗಳು? ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವನ್ನಾದರೂ ನೀಡಿದ್ದಾರೆಯೇ? ಈ ಪ್ರಶ್ನೆಗಳಿಗೆ ಅವರು ಉತ್ತರಿಸುವುದಿಲ್ಲ.

ಮಾತ್ರವಲ್ಲ ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದೆ.ಹುದ್ದೆಗಳಿಗೆ,‌ ಆಯಕಟ್ಟಿನ ಸ್ಥಳಗಳಿಗೆ ಇಂತಿಷ್ಟು ಎಂದು ರೇಟ್ ಕಾರ್ಡ್ ಫಿಕ್ಸಾಗಿದೆ.ಆದರೆ ರಾಜ್ಯಕ್ಕೆ ಆಗಮಿಸಿರುವ ಮೋದಿಯವರು ತಮ್ಮ ಡಬಲ್ ಎಂಜಿನ್ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ.ಆರೋಪಗಳಿಗೆ ಉತ್ತರಿಸುವುದಿಲ್ಲ ಎಂದು ಕಾಂಗ್ರೆಸ್ ಕುಟುಕಿದೆ.

ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಗಳಲ್ಲಿ ಸಾಲು ಸಾಲಾಗಿ ಹಗರಣಗಳು ನಡೆದಿದೆ.ಹುದ್ದೆಗಳಿಗೆ ತಕ್ಕಂತೆ 80 ಲಕ್ಷ, 70 ಲಕ್ಷ, 50 ಲಕ್ಷ, 1 ಕೋಟಿವರೆಗೂ ಫಿಕ್ಸ್ ಆಗಿದೆ
ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿಗಳು ಖಂಡಿತ ಈ ಹಗರಣದ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರವಿದೆ ಎಂದು ಯಾರಿಗೆ ಕೇಳಿದರೂ ಥಟ್ ಎಂದು ಉತ್ತರಿಸುತ್ತಾರೆ.ಆದರೆ ನಮಗೆ ಗ್ಯಾರಂಟಿ ಇದ ಈ ಪ್ರಶ್ನೆಗೆ ಡಬಲ್ ಎಂಜಿನ್ ಸರ್ಕಾರದ ಮುಖ್ಯಸ್ಥರಾದ ನಮ್ಮ ಪ್ರಧಾನಿಗಳು ಎಂದಿಗೂ ಉತ್ತರಿಸುವುದಿಲ್ಲ ಎಂದು ಸವಾಲು ಒಡ್ಡಿದೆ.

ಇದನ್ನೂ ಓದಿ : ಫ್ಯಾಮಿಲಿ ಪಾಲಿಟಿಕ್ಸ್ ಗೆ ಟ್ವಿಸ್ಟ್ : ದೇವೇಗೌಡರ ಅಂಗಳ ತಲುಪಿದ ಭವಾನಿ ಟಿಕೇಟ್ ಬೇಡಿಕೆ

ಇದನ್ನೂ ಓದಿ : ಎಚ್.ಡಿ. ಕುಮಾರಸ್ವಾಮಿ ಸಿಡಿಯೂ ಇದೆ: ಬಿಜೆಪಿ ರವಿಕುಮಾರ್ ಸ್ಪೋಟಕ ಹೇಳಿಕೆ

ಇದನ್ನೂ ಓದಿ : Former CM Siddaramaiah : ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಪಣ: ಕ್ಷೇತ್ರದಲ್ಲೇ ಬೀಡುಬಿಟ್ಟ ಪುತ್ರ ಯತೀಂದ್ರ

ಮೋದಿಯವರು ಗುತ್ತಿಗೆದಾರರ ಕಮಿಷನ್ ಆರೋಪದ ಬಗ್ಗೆಯೂ ಮಾತನಾಡುವುದಿಲ್ಲ ಎಂದಿರುವ ಕಾಂಗ್ರೆಸ್‌ ಸರಣಿ ಟ್ವೀಟ್ ಮೂಲಕ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದೆ. ಟ್ವೀಟ್ ಮಾತ್ರವಲ್ಲದೇ ಮಾಧ್ಯಮಗಳ ಬಳಿಯೂ ಮೋದಿ ಕಾರ್ಯಕ್ರಮವನ್ನು ಟೀಕಿಸಿರೋ ವಿರೋಧ ಪಕ್ಷದ ನಾಯಕ, ನಾವು ನಡೆಸಿದ ಅಭಿವೃದ್ಧಿ ಕಾರ್ಯ ಹಾಗೂ ಯೋಜನೆಗಳ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ. ನಾವು ಅಡುಗೆ ಮಾಡಿದ್ದೇವ.‌ಮೋದಿ ಬಂದು ಬಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Prime Minister Modi’s state visit: Congress criticizes Modi’s state visit: A barrage of questions through a series of tweets

Comments are closed.