COVID TEST GOALMAAL :ಪ್ರಧಾನಿ ಮೋದಿ, ಅಮಿತ್​ ಶಾ, ಪ್ರಿಯಾಂಕಾ ಚೋಪ್ರಾ… ಅಬ್ಬಬ್ಬಾ..! ತಲೆ ತಿರುಗಿಸುತ್ತೆ ಈ ಗ್ರಾಮದ ಕೋವಿಡ್​ ಪರೀಕ್ಷಾ ಪಟ್ಟಿ ವಿವರ

ಕೋವಿಡ್​ ಸಾಂಕ್ರಾಮಿಕ ದೇಶಕ್ಕೆ ಬಂದು ಅಪ್ಪಳಿಸಿದಾಗಿನಿಂದ ಆರೋಗ್ಯ ಇಲಾಖೆ ಕೋವಿಡ್​ ಪರೀಕ್ಷೆಯ ಪಟ್ಟಿಯನ್ನು ದಾಖಲಿಸುತ್ತಿದೆ. ಆಯಾ ರಾಜ್ಯಗಳಲ್ಲಿ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಗ್ರಾಮದ ಕೋವಿಡ್​ ಪರೀಕ್ಷೆಯ ಪಟ್ಟಿಯನ್ನು ದಾಖಲಿಸುತ್ತಿದ್ದಾರೆ. ಆದರೆ ಇಲ್ಲೊಂದು ಗ್ರಾಮದ ಕೋವಿಡ್​ ಪರೀಕ್ಷೆಯ ಲಿಸ್ಟ್​ನ್ನು(COVID TEST GOALMAAL) ನೀವು ಒಮ್ಮೆ ಚೆಕ್​ ಮಾಡಿದ್ರೆ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ಪ್ರಧಾನಿ ನರೇಂದ್ರ ಮೋದಿ (PM Modi), ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah), ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಇವರಷ್ಟೇ ಅಲ್ಲದೇ ಬಾಲಿವುಡ್​ ತಾರೆಯರಾದ ಪ್ರಿಯಾಂಕ ಚೋಪ್ರಾ (Priyanka Chopra) ಹಾಗೂ ಅಕ್ಷಯ್​ ಕುಮಾರ್​ ಕೂಡ ಈ ಗ್ರಾಮದಲ್ಲಿ ಕೋವಿಡ್ ಪರೀಕ್ಷೆಗೆ ( COVID TEST GOALMAAL) ಒಳಗಾಗಿದ್ದಾರಂತೆ..!

ಬಿಹಾರದ ಅರ್ವಾಲ್​ ಜಿಲ್ಲೆಯ ಕಪ್ಲಿ ಬ್ಲಾಕ್​ನಲ್ಲಿ ಇಂತಹದ್ದೊಂದು ಕೋವಿಡ್​ ಪರೀಕ್ಷೆಯ ವರದಿ ದೊರಕಿದೆ. ಅಕ್ಟೋಬರ್​ 27ರಂದು ನಡೆಸಲಾದ ಕೋವಿಡ್​ ಪರೀಕ್ಷೆಗಳ ವರದಿಯಲ್ಲಿ ಈ ಎಲ್ಲಾ ಗಣ್ಯರ ಹೆಸರನ್ನು ನಮೂದಿಸಲಾಗಿದೆ. ಎಲ್ಲರ ಪರೀಕ್ಷಾ ವರದಿಯೂ ನೆಗೆಟಿವ್​ ಎಂದು ನಮೂದಿಸಲಾಗಿದೆ.

ಅಂದಹಾಗೆ ಈ ಹೆಸರಿನ ಯಾರೊಬ್ಬರೂ ಕೂಡ ಈ ಗ್ರಾಮದ ನಿವಾಸಿಗಳಲ್ಲ. ಆದರೂ ಸಹ ಇವರೆಲ್ಲರ ವಿಳಾಸದಲ್ಲಿ ಅರ್ವಾಲ್​ ಜಿಲ್ಲೆ ಎಂದು ಬರೆಯಲಾಗಿದೆ. ಪ್ರಧಾನಿ ಮೋದಿ ಮೂರು ಬಾರಿ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಎರಡು ಬಾರಿ ಪರೀಕ್ಷೆ ಮಾಡಿಸಿದ್ದಾರಂತೆ. ಅಕ್ಷಯ್​ ಕುಮಾರ್​ ಹೆಸರು ಈ ಪಟ್ಟಿಯಲ್ಲಿ ನಾಲ್ಕು ಬಾರಿ ನಮೂದಾಗಿದ್ದರೆ ಪ್ರಿಯಾಂಕಾ ಚೋಪ್ರಾ ಹೆಸರು ಎಲ್ಲರಿಗಿಂತ ಅಧಿಕ ಅಂದರೆ ಬರೋಬ್ಬರಿ ಆರು ಬಾರಿ ಬರೆಯಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಡೇಟಾ ಆಪರೇಟರ್​ಗಳನ್ನು ಬಿಹಾರ ಆರೋಗ್ಯ ಇಲಾಖೆ ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್​ ಕುಮಾರ್​ ಸಿಂಗ್​ ಅಮಾನತುಗೊಳಿಸಿದ್ದಾರೆ. ಹಾಗೂ ಪ್ರಕರಣ ಸಂಬಂಧ ತನಿಖೆಗೂ ಆದೇಶ ನೀಡಿದ್ದಾರೆ.

ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಫೈನ್

ರಾಜ್ಯದಲ್ಲಿ ನಿಧಾನಗತಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಕ್ಕೆ ಆತಂಕ ಹೆಚ್ಚಿದೆ.ರಾಜಕೀಯ ಕಾರ್ಯಕ್ರ‌ಮ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶದಲ್ಲಿ ಜನರು ಕಡ್ಡಾಯ ಮಾಸ್ಕ್ ನಿಯಮ ಪಾಲಿಸದೇ ಓಡಾಡಲಾರಂಭಿಸಿದ್ದು ಕೊರೋನಾ ಆತಂಕದ ಭಯವೇ ಮಾಯವಾದಂತಿದೆ. ಆದರೆ ರಾಜ್ಯ ರಾಜಧಾನಿ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮೆರೆಯುವವರಿಗೆ ಬಿಸಿ ಮುಟ್ಟಿಸಲಾರಂಭಿಸಿದ್ದು ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ನಿಯಮ ಉಲ್ಲಂಘಿಸುವವರಿಂದ 250 ರೂಪಾಯಿ ದಂಡ ವಸೂಲಿ ಮಾಡಲಾರಂಭಿಸಿದ್ದಾರೆ. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಯಶ್ವಂತಪುರ ಮಾರ್ಕೆಟ್, ಎಪಿಎಂಸಿ ಮಾರ್ಕೆಟ್ ,ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದ ಹೊರಭಾಗಗಳಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದು, ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿ ಹಣ ಸಂಗ್ರಹಿಸಲಾಗುತ್ತಿದೆ.

250 ರೂ. ದಂಡದಂತೆ ಬಿಬಿಎಂಪಿ 4 ದಿನದಲ್ಲಿ ಸುಮಾರು 6 ಲಕ್ಷ 31 ಸಾವಿರದ 500 ರೂಪಾಯಿ ಹಣ ಸಂಗ್ರಹಿಸಿದೆ. ಅಂತರ ಪಾಲಿಸದವರಿಂದ 1,17,750 ರೂ. ಹಣ ದಂಡ ವಸೂಲಿ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲ ನಿಯಮಗಳಿಂದ ಒಟ್ಟು 7,49,250 ರೂಪಾಯಿ ದಂಡ ವಸೂಲಿಯಾಗಿದೆ. ಕೊರೋನಾ ನಿಯಮಗಳ ಉಲ್ಲಂಘನೆ ಮಾಡಿದವರಿಂದಲೇ ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಒಟ್ಟು 14,82,75,211 ರೂ. ವಸೂಲಿ ಮಾಡಿದ್ದಾರೆ.

ಕೇವಲ ದಂಡ ವಸೂಲಿ ಮಾತ್ರವಲ್ಲದೇ ಕೊರೋನಾ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಸರ್ಕಾರ ಮತ್ತೊಮ್ಮೆ ನೈಟ್ ಕರ್ಪ್ಯೂ ಪದ್ಧತಿ ಜಾರಿಗೆ ತರಲು ಚಿಂತನೆ ನಡೆಸಿದ್ದು ಇದಲ್ಲದೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಮೇಲೂ‌ ನಿರ್ಬಂಧ ಹೇರುವ ಸಾಧ್ಯತೆ ಇದೆ. ಇಂದು ಕೂಡಾ ಬೆಂಗಳೂರಿನ ಮಾರುಕಟ್ಟೆಗಳಿಗೆ ಮಾಸ್ಕ್ ಹಾಕದೆ ಬರುವ ಜನರಿಗೆ ಬಿಬಿಎಂಪಿ ದಂಡ ವಿಧಿಸುತ್ತಿದೆ. ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್​ ಧರಿಸದವರಿಗೆ 250 ರೂ. ದಂಡ ಹಾಕುತ್ತಿದ್ದಾರೆ.

ಇದನ್ನು ಓದಿ :Nursing Students corona : 9 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ : ಕರಾವಳಿಯಲ್ಲಿ ಕೊರೊನಾ ಆತಂಕ

ಇದನ್ನು ಓದಿ :School Close Karnataka : ಶಾಲೆಗಳ ಮೇಲೆ‌ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲು‌ಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!

PM Modi ‘Tested’ Thrice For Covid, Amit Shah Twice And Priyanka Chopra 6 Times in Bihar’s Arwal

Comments are closed.