Haryana Accident : ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ, ಹಲವು ವಾಹನಗಳು ಜಖಂ : 4 ಮಂದಿಗೆ ತೀವ್ರ ಗಾಯ

ಹರಿಯಾಣ : ಹರಿಯಾಣದ ಅಂಬಾಲಾ ಯಮುನಾನಗರ ಸಹಾರನ್‌ಪುರ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ದಟ್ಟ ಮಂಜಿನಿಂದಾಗಿ (Haryana Accident ) ಹತ್ತಾರು ವಾಹನಗಳು ಒಂದಕ್ಕೊಂದು ಮುಖಾಮುಖಿಯಾಗಿ ಢಿಕ್ಕಿ ಹೊಡೆದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೆದ್ದಾರಿಯಲ್ಲಿ 10 ರಿಂದ 15 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿ ಲೋಕೇಶ್ ರಾಣಾ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ತಂಡಗಳು ದೌಡಾಯಿಸಿದ್ದು, ಸಂಚಾರವನ್ನು ಪರ್ಯಾಯ ಮಾರ್ಗದಲ್ಲಿ ಬದಲಾಯಿಸಲಾಗಿದೆ. ಪೊಲೀಸ್ ತಂಡಗಳು ವಾಹನಗಳಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದು, ಹಾನಿಗೊಳಗಾದ ವಾಹನಗಳನ್ನು ಕ್ರೇನ್‌ಗಳ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Assault on merchant: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ: ಹಫ್ತಾ ಕೊಡದಿದ್ದಕ್ಕೆ ವ್ಯಾಪಾರಿ ಮೇಲೆ ಹಲ್ಲೆ

ಇದನ್ನೂ ಓದಿ : Madhyapradesh fire accident: ಗುಡಿಸಲಿಗೆ ಬೆಂಕಿ: ವೃದ್ದ ದಂಪತಿ ಸಜೀವ ದಹನ

ಇದನ್ನೂ ಓದಿ : Nelamangala car accident: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ : ಪಾದಚಾರಿ ಸಾವು

ಇದನ್ನೂ ಓದಿ : Chicken crowing : ಕೋಳಿ ಕೂಗುತ್ತಿದೆ, ನಿದ್ದೆ ಬರುತ್ತಿಲ್ಲ : ಬೆಂಗಳೂರಲ್ಲಿ ಕೋಳಿ ವಿರುದ್ದ ಟ್ವೀಟ್ ಮೂಲಕ ಪೊಲೀಸರಿಗೆ ದೂರು

ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಆದರೆ ಪೊಲೀಸರು ಮತ್ತು ಸಂಚಾರ ಸಿಬ್ಬಂದಿ ಟ್ರಾಫಿಕ್ ಕ್ಲಿಯರ್ ಮಾಡಿಸಿ ವಾಹನ ಸಂಚಾರ ಸುಗಮಗೊಳಿಸುತ್ತಿರುವುದು ಕಂಡು ಬಂದಿದೆ. ಇದು ಎರಡನೇ ದಿನ ದಟ್ಟವಾದ ಮಂಜು ಯಮುನಾ ನಗರದಲ್ಲಿ ಆವರಿಸಿದ್ದು, ಗೋಚರತೆಯನ್ನು ಕಡಿಮೆ ಮಾಡಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಮಂಜಿನ ನಡುವೆ ವಾಹನ ಚಲಾಯಿಸುವಾಗ ಚಾಲಕರು ತಮ್ಮ ವಾಹನದ ಡಿಪ್ಪರ್ ಮತ್ತು ಫಾಗ್ ಲೈಟ್‌ಗಳನ್ನು ಆನ್ ಮಾಡುವಂತೆ ಲೋಕೇಶ್ ರಾಣಾ ಮನವಿ ಮಾಡಿದರು.

ಇದನ್ನೂ ಓದಿ : Annual Sports Event : ಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ಬಾಲಕನ ಕತ್ತು ಸೀಳಿದ ಈಟಿ

Haryana Accident : Serial accident due to dense fog, many vehicles injured: 4 seriously injured

Comments are closed.