Haryana car accident: ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ: 3 ಮಂದಿ ಸಾವು, 7 ಮಂದಿಗೆ ಗಾಯ

ಹರಿಯಾಣ: (Haryana car accident) ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಕಾರು ಚಾಲಕರು ಸೇರಿದಂತೆ ಪ್ರಯಾಣಿಕನೋರ್ವ ಸಾವನ್ನಪ್ಪಿದ್ದು, ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ರೆವಾರಿಯ ಗುಜರ್ವಾಸ್‌ ಗ್ರಾಮದಲ್ಲಿ ನಡೆದಿದೆ. ಗಾಯಗಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಕಾರಿನ ಚಾಲಕ ಎದುರಿನಿಂದ ಅತಿವೇಗದಲ್ಲಿ ಬಂದ ಕಾರನ್ನು ತಪ್ಪಿಸಲು ಹೋಗಿದ್ದಾನೆ. ಎದುರಿನಿಂದ ಬರುತ್ತಿದ್ದ ಕಾರು ಚಾಲಕ ಕೂಡ ಇದೇ ರೀತಿ ಮಾಡಿದ್ದಾನೆ. ಅಪಘಾತವನ್ನು ತಪ್ಪಿಸಲು ಮಾರ್ಗ ಬದಲಾಯಿಸುವ ಸಂದರ್ಭದಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಎರಡೂ ಕಾರಿನ ಚಾಲಕರು ಹಾಗೂ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ ಮೂವರು ಮಕ್ಕಳು ಸೇರಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ರೇವಾರಿ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

“ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ನಾವು ಫಂಕ್ಷನ್‌ ನಿಂದ ಹಿಂತಿರುಗುತ್ತಿದ್ದು, ವಿರುದ್ಧ ದಿಕ್ಕಿನಲ್ಲಿ ಅತಿವೇಗದಿಂದ ಬಂದ ಸ್ವಿಫ್ಟ್ ಡಿಜೈರ್ ಕಾರು ಬಂದಿತು. ಅಪಘಾತದಿಂದ ಪಾರಾಗಲು ನಮ್ಮ ಚಾಲಕ ಮಾರ್ಗ ಬದಲಿಸಲು ಯತ್ನಿಸಿದಾಗ ಆತನೂ ಅದೇ ರೀತಿ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ” ಎಂದು ಗಾಯಾಳು ವಿಕ್ರಮ್ ತಿಳಿಸಿದರು.

“ಗುಜಾರ್ವಾಸ್ ಗ್ರಾಮದ ಬಳಿ ಒಂದು ಎಕ್ಸೆಂಟ್ ಮತ್ತು ಇಕೋ ಕಾರಿನ ನಡುವೆ ಅಪಘಾತ ಸಂಭವಿಸಿದೆ ಎಂದು 1.30 ರ ಸುಮಾರಿಗೆ ನಮಗೆ ಮಾಹಿತಿ ಬಂದಿತು. ಅಪಘಾತದಲ್ಲಿ ಎರಡೂ ಕಾರುಗಳ ಚಾಲಕ ಹಾಗೂ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಾಳುಗಳ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ನಾವು ಶೀಘ್ರದಲ್ಲೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುತ್ತೇವೆ ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸುಭಾಷ್ ಚಂದ್ ಮಾಧ್ಯಮದವರಿಗೆ ತಿಳಿಸಿದರು.

ಇದನ್ನೂ ಓದಿ : Young woman committed suicide: ಜಾತ್ರೆಯಲ್ಲಿ ಯುವಕ ಕೈ ಹಿಡಿದು ಎಳೆದನೆಂದು ಆತ್ಮಹತ್ಯೆಗೆ ಶರಣಾದ ಯುವತಿ

ಇದನ್ನೂ ಓದಿ : ಕಾರಿಗೆ ಬೈಕ್‌ ಢಿಕ್ಕಿ: ಚಾಲಕನನ್ನು ಹಿಂಬಾಲಿಸಿ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನ, ರಾತ್ರಿ ಸಮಯದಲ್ಲಿ ಓಡಾಡುವ ಮುನ್ನ ಹುಷಾರ್‌!

Haryana car accident: Accident while returning from wedding: 3 killed, 7 injured

Comments are closed.