India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್ ನಿರ್ಮಿಸಿ ಕಾಂಗರೂಗಳು

ಸಿಡ್ನಿ: ಇಡೀ ಕ್ರಿಕೆಟ್ ಜಗತ್ತಿನ ಕಣ್ಣೀಗ ಭಾರತ ಮತ್ತು ಆಸ್ಟ್ರೇಲಿಯಾ (India Vs Australia test ) ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar test series) ಮೇಲೆ ನಿಂತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ.

ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಭಾರತ ಸ್ಪಿನ್ ಪಿಚ್ ನಿರ್ಮಿಸುವುದು ಖಚಿತ. ಹೀಗಾಗಿ ಭಾರತದಲ್ಲಿ ಎದುರಾಗಲಿರುವ ಸ್ಪಿನ್ ಚಾಲೆಂಜ್ ಮೆಟ್ಟಿ ನಿಲ್ಲಲು ಕಾಂಗರೂಗಳು ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ.ಭಾರತ ಪ್ರವಾಸಕ್ಕೆ ಪೂರ್ವಭಾವಿಯಾಗಿ ಆಸ್ಟ್ರೇಲಿಯಾ ತಂಡದ (Australia cricket team) ಪೂರ್ವಸಿದ್ಧತಾ ಶಿಬಿರ ಆರಂಭಗೊಂಡಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ ಪಕ್ಕದಲ್ಲಿ ಸ್ಪಿನ್ ಪಿಚ್ ನಿರ್ಮಿಸಿ ಅಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ.

2016-17ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತಕ್ಕೆ ಶಾಕ್ ಕೊಟ್ಟಿತ್ತು. ನಂತರದ ಮೂರೂ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಭಾರತ ಸರಣಿ ಕೈವಶ ಮಾಡಿಕೊಂಡಿತ್ತು.

ಇದನ್ನೂ ಓದಿ : MS Dhoni bike craze : RX100 ಬೈಕ್’ಗೆ ಹೊಸ ಲುಕ್ ಕೊಟ್ಟ ಎಂ.ಎಸ್ ಧೋನಿ; ಹೇಗಿದೆ ಗೊತ್ತಾ ಮಾಹಿ ಆರ್.ಎಕ್ಸ್ 100 ?

ಇದನ್ನೂ ಓದಿ : India won : U19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಮ್ ಇಂಡಿಯಾ ಹುಡುಗಿಯರು

ಇದನ್ನೂ ಓದಿ : U-19 Women’s WC FINAL : ನಾಳೆ ಇಂಡಿಯಾ Vs ಇಂಗ್ಲೆಂಡ್ ಫೈನಲ್; ಚಾಂಪಿಯನ್ ಪಟ್ಟಕ್ಕೆ ಭಾರತವೇ ಫೇವರಿಟ್

ಈ ಬಾರಿಯ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ (India Vs Australia test series) ಭಾರತಕ್ಕೆ ಮಹತ್ವದ್ದಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ (ICC world test championship final) ಪ್ರವೇಶಿಸಬೇಕಾದರೆ ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ಈಗಾಗಲೇ ವರ್ಲ್ಡ್ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಿದೆ.

ಇದನ್ನೂ ಓದಿ : Mahendra Singh Dhoni : ಭಾರತ Vs ನ್ಯೂಜಿಲೆಂಡ್ ಟಿ20 ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ

India Vs Australia test : Aussies master plan to defeat India; Kangaroos built a spin pitch in Australia

Comments are closed.