Hassan Murder Case : ಗಂಡನ ಬಿಟ್ಟು ಪ್ರಿಯಕರನೊಂದಿಗೆ ಅಕ್ರಮ ಸಂಬಂಧ : ಕಬ್ಬಿನಗದ್ದೆಯಲ್ಲಿ ಶವ ಪತ್ತೆ

ಹಾಸನ : ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಮಹಿಳೆ ಗಂಡನೊಂದಿಗೆ ಸುಖವಾಗಿ ಸಂಸಾರ ನಡೆಸುವುದನ್ನು ಬಿಟ್ಟು ಅಕ್ರಮ ಸಂಬಂಧವನ್ನು ಹೊಂದಿ ತನ್ನ ಬದುಕನ್ನು ಸರ್ವನಾಶ (Hassan Murder Case) ಮಾಡಿಕೊಂಡಿದ್ದಾಳೆ. ಈ ಮಹಿಳೆ ಅಕ್ರಮ ಸಂಬಂಧಕ್ಕೆ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯ ಪ್ರಿಯಕರನೇ ಅವಳನ್ನು ಕೊಂದು ಕಬ್ಬಿನಗದ್ದೆಯಲ್ಲಿ ಹೂತಿಟ್ಟಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಪರಸಹಳ್ಳಿ ಗ್ರಾಮದ ನಿವಾಸಿ ಮೃತ ಮಹಿಳೆ ಕಾವ್ಯ (23ವರ್ಷ) ಎಂದು ಗುರುತಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಹಾಸನದ ಮೂಲದ ಯವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮದುವೆ ಆದ ಮೂರು ನಾಲ್ಕು ತಿಂಗಳಲ್ಲಿ ಕಾವ್ಯ ತನ್ನ ಗಂಡನನ್ನು ಬಿಟ್ಟು ಬಂದಿದ್ದಳು. ಅಷ್ಟೇ ಅಲ್ಲದೇ ಮದುವೆ ನಂತರ ತನ್ನ ಪೋಷಕರ ಸಂಪರ್ಕವನ್ನು ಸಹ ಕಡಿದುಕೊಂಡಿದ್ದಳು. ಆದರೆ ನಂತರ ದಿನಗಳಲ್ಲಿ ಪೋಷಕರ ಸಂಪರ್ಕ ಮಾಡಿದ ಕಾವ್ಯ ತಾನು ಬೆಂಗಳೂರಿನಲ್ಲಿ ಒಂಟಿಯಾಗಿ ಪಿಜಿಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು.

ಗಂಡನಿಂದ ದೂರವಿದ್ದ ಕಾವ್ಯ ಅವಿನಾಶ್‌ ಪರಿಚಯವಾಗಿ ಅಕ್ರಮ ಸಂಬಂಧವನ್ನು ಹೊಂದಿದ್ದಳು. ನಂತರ ಪರಸನಹಳ್ಳಿ ಗ್ರಾಮದಲ್ಲಿ ಅವಿನಾಶ್‌ ಜೊತೆ ಕಾವ್ಯ ಲಿವಿಂಗ್‌ ಟುಗೆದರ್‌ನಲ್ಲಿದ್ದಳು. ಆದರೆ ಈಗ ಮಗಳು ಶವವಾಗಿ ಪತ್ತೆಯಾಗಿದ್ದು, ಆಕೆಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟುರುವುದು ಅವಿನಾಶ್‌ ಎಂದು ಪೋಷಕರು ಆರೋಪಿಸಿದ್ದಾರೆ. ಆರೋಪಿ ತಾನು ಹೂತಿಟ್ಟ ಜಾಗದಲ್ಲಿ ನಿಂತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸದ್ಯ ಹೊಳೆನರಸೀಪುರ ತಹಶೀಲ್ದಾರ್‌ ಕೃಷ್ಣಮೂರ್ತಿ ನೇತೃತ್ವದಲ್ಲಿ ಮೃತ ದೇಹವನ್ನು ಹೊರ ತೆಗೆಯುವ ಕಾರ್ಯವನ್ನು ನಡೆಸಲಾಗಿದ್ದು, ಮೃತ ದೇಹವನ್ನು ಹೊರ ತೆಗೆದ ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಇದನ್ನೂ ಓದಿ : Japanese encephalitis: ಮೆದುಳು ಜ್ವರದ ಲಸಿಕೆ ಪಡೆದ ಬಾಲಕ ಸಾವು

ಇದನ್ನೂ ಓದಿ : gang rape on girl: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅರೆಸ್ಟ್

ಇದನ್ನೂ ಓದಿ : Anekal accident case: ಕಾರ್ಮಿಕರಿಗೆ ಈಚರ್ ವಾಹನ ಡಿಕ್ಕಿ: ಮೂವರು ಸಾವು

ಈಗ ಆಕೆಯ ಪೋಷಕರು ಅವಿನಾಶ್‌ ಮಗಳನ್ನು ಕೊಂದು, ಶವವನ್ನು ಹೂತು ಹಾಕಿದ್ದಾನೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಾರೆ ಕಾವ್ಯ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳ ಹೆಚ್ಚಿನ ತನಿಖೆಯ ನಂತರ ನಿಖರವಾದ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

Hassan Murder Case: Illicit relationship with lover left by husband: Body found in sugarcane field

Comments are closed.