Mangaluru crime: ಮಂಗಳೂರಿನ ಲಾಡ್ಜ್ ನಲ್ಲಿ ನಗ್ನ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ

ಮಂಗಳೂರು: (Mangaluru crime) ಲಾಡ್ಜ್‌ ಒಂದರಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಶವದ ಬಳಿ ಪತ್ತೆಯಾದ ಮಾತ್ರೆಗಳು ಅನುಮಾನಕ್ಕೆ ಎಡೆ ಮಾಡಿವೆ. ಮೃತ ವ್ಯಕ್ತಿಯನ್ನು ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್‌ ಕರೀಮ್‌ ಎಂದು ಗುರುತಿಸಲಾಗಿದ್ದು, ಮಂಗಳೂರಿನ ಪಂಪ್‌ ವೆಲ್‌ ಬಳಿ ಇರುವ ಪದ್ಮಶ್ರೀ ಲಾಡ್ಜ್‌ ನಲ್ಲಿ ಶವ ಪತ್ತೆಯಾಗಿದೆ.

ನಿನ್ನೆಯ ದಿನ ಕರೀಮ್‌ ಅವರು ಪಂಪ್‌ ವೆಲ್‌ (Mangaluru crime) ಬಳಿ ರೂಮ್‌ ಬಾಡಿಗೆ ಪಡೆದಿದ್ದರು. ಮಧ್ಯಾಹ್ನದ ಸಮಯದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕರೀಮ್‌ ಇದ್ದ ರೂಮಿಗೆ ಬಂದು ಹೋಗಿದ್ದರು ಎಂದು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ತಿಳಿದುಬಂದಿದೆ. ಮಹಿಳೆ ರೂಮ್‌ ಗೆ ಬಂದು ಹೋದ ನಂತರ ಕರೀಮ್‌ ರೂಮ್‌ ನಿಂದ ಹೊರ ಬಂದಿಲ್ಲ. ಇಂದು ಬೆಳಿಗ್ಗೆ ಕರೀಮ್‌ ಮೊಬೈಲ್‌ ಸಾಕಷ್ಟು ಬಾರಿ ರಿಂಗ್‌ ಆಗಿದ್ದು, ಲಾಡ್ಜ್‌ ನ ರೂಮ್‌ ಬಾಯ್‌ ಗಮನಕ್ಕೆ ಬಂದಿದೆ. ರೂಮ್‌ ಬಾಯ್‌ ಬಾಗಿಲು ಬಡಿದರು ಕರೀಮ್‌ ಬಾಗಿಲು ತೆರೆಯಲಿಲ್ಲ. ಈ ಹಿನ್ನಲೆಯಲ್ಲಿ ಅನುಮಾನ ಬಂದ ರೂಮ್‌ ಬಾಯ್‌ ಪೊಲೀಸರಿಗೆ ಮಾಹಿತಿ ನೀಡಿ ರೂಮ್‌ ನ ಬಾಗಿಲು ತೆರೆಸಿದ್ದಾರೆ. ಈ ವೇಳೆ ಕರೀಮ್‌ ನ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಕ್ಕದಲ್ಲಿ ಇದ್ದ ಮಾತ್ರೆಗಳು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿವೆ.

ಕರೀಮ್‌ ಫೋನ್‌ ರಿಸೀವ್‌ ಮಾಡದ ಕಾರಣ ಆತನ ಪತ್ನಿಯ ಸಹೋದರ ಮಂಗಳೂರಿಗೆ ಬಂದು ಹುಡುಕಾಟ ನಡೆಸಿದ್ದರು. ಕಂಕನಾಡಿ ಠಾಣೆಗೆ ಕರೀಮ್‌ ನಾಪತ್ತೆ ದೂರು ನೀಡಲು ಹೋದಾಗ ಲಾಡ್ಜ್‌ ನಲ್ಲಿ ಸಿಕ್ಕ ಶವ ಅವರದ್ದೇ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಮೃತ ಕರೀಮ್‌ ಗೆ ಮಂಗಳೂರಿನ ಪಡಿಲ್‌ ನಲ್ಲಿ ಹೋಟೆಲ್‌ ಒಂದು ನಡೆಸುತ್ತಿದ್ದು, ಅದರ ಜೊತೆಗೆ ಬಂಟ್ವಾಳದಲ್ಲಿ ಇಂಟರ್‌ ಲಾಕ್‌ ಫ್ಯಾಕ್ಟರಿ ಕೂಡ ಇದೆ ಎನ್ನಲಾಗಿದೆ. ಲಾಕ್‌ ಡೌನ್‌ಗೂ ಮೊದಲು ಕರೀಮ್‌ ಇದೇ ಲಾಡ್ಜ್‌ ನಲ್ಲಿ ಉಳಿದುಕೊಂಡಿದ್ದರು ಎಂದು ಲಾಡ್ಜ್‌ ನ ಸಿಬ್ಬಂದಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : gang rape on girl: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅರೆಸ್ಟ್

ಇದನ್ನೂ ಓದಿ : Anekal accident case: ಕಾರ್ಮಿಕರಿಗೆ ಈಚರ್ ವಾಹನ ಡಿಕ್ಕಿ: ಮೂವರು ಸಾವು

(Mangaluru crime) A dead body of a person was found naked in a lodge and pills found near the dead body raised suspicion. The deceased person has been identified as Abdul Karim, a resident of Uppal, Kasaragod, and the body was found at Padmasree Lodge near Pump Well, Mangalore.

Comments are closed.