gang rape on girl: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅರೆಸ್ಟ್

ಹಾಸನ: (gang rape on girl) ಕೂಲಿ ಕೆಲಸಕ್ಕೆಂದು ಪೋಷಕರ ಜೊತೆ ಹಾಸನಕ್ಕೆ ಬಂದಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತೋಟದ ಮಾಲೀಕ ಹಾಗೂ ಆತನ ಸಂಬಂಧಿಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದು, ಇದೀಗ ಬಾಲಕಿ ಗರ್ಭಿಣಿಯಾದ ಪ್ರಕರಣ ಬೆಳಕಿಗೆ ಬಂದಿದೆ.

ಕೂಲಿ ಕೆಲಸಕ್ಕೆಂದು ಪೋಷಕರ ಜೊತೆಯಲ್ಲಿ ಬಂದಿದ್ದ ಬಾಲಕಿಯನ್ನು ತೋಟದ ಮಾಲಿಕ ಹಾಗೂ ಆತನ ಸಂಬಂಧಿಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ (gang rape on girl) ನಡೆಸಿದ್ದಾರೆ ಎನ್ನಲಾಗಿದೆ. ನಂತರದಲ್ಲಿ ಬಾಲಕಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಆಕೆ ಆಸ್ಪತ್ರೆಗೆ ಹೋಗಿದ್ದಳು. ಚಿಕಿತ್ಸೆ ನೀಡುವಾಗ ಆಕೆ ಗರ್ಭಿಣಿಯಾಗಿರುವುದು ವೈದ್ಯರಿಗೆ ತಿಳಿದುಬಂದಿದೆ. ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಗೆ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ರಕ್ಷಣೆ ನೀಡಿ, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರು ಪ್ರಕರಣದ ಕುರಿತಾಗಿ ಸಕಲೇಶಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ದೂರನ್ನು ಆಧರಿಸಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Anekal accident case: ಕಾರ್ಮಿಕರಿಗೆ ಈಚರ್ ವಾಹನ ಡಿಕ್ಕಿ: ಮೂವರು ಸಾವು

ಇದನ್ನೂ ಓದಿ : Australia’s Queenland : ಇಬ್ಬರು ಪೊಲೀಸರು ಸೇರಿ ಗುಂಡಿಕ್ಕಿ 6 ಮಂದಿಯ ಹತ್ಯೆ

ಇದನ್ನೂ ಓದಿ : Japanese encephalitis: ಮೆದುಳು ಜ್ವರದ ಲಸಿಕೆ ಪಡೆದ ಬಾಲಕ ಸಾವು

A girl who had come to Hassan with her parents for labor was gang-raped and three accused were arrested by the police. An incident took place in Sakleshpur rural police station, the plantation owner and his relatives gang-raped her, and now the case of the girl becoming pregnant has come to light.

Comments are closed.