Honour killing : ನ್ಯಾಯಲಯದಲ್ಲಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಪಾಕಿಸ್ತಾನ : ಪಾಕಿಸ್ತಾನದ ನ್ಯಾಯಲಯವೊಂದರಲ್ಲಿ ನವವಿವಾಹಿತ ಮಹಿಳೆಯನ್ನು ಆಕೆಯ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಈ ಕೊಲೆ ಪ್ರಕರಣವು ದೇಶದಲ್ಲಿ ಇತ್ತೀಚಿನ ಸ್ಪಷ್ಟವಾದ ಮರ್ಯಾದಾ ಹತ್ಯೆ (Honour killing) ಎಂದು ಪೊಲೀಸರು ತಿಳಿಸಿದ್ದಾರೆ.

ಕರಾಚಿಯ ಪಿರಾಬಾದ್‌ನ ನಿವಾಸಿಯಾಗಿರುವ ಮಹಿಳೆ ತಾನು ಸ್ವತಂತ್ರವಾಗಿ ವಿವಾಹ ಮಾಡಿಕೊಂಡಿರುವುದಾಗಿ ದೃಢೀಕರಿಸಲು ಕರಾಚಿ ಸಿಟಿ ಕೋರ್ಟ್‌ಗೆ ಹೇಳಿಕೆ ದಾಖಲಿಸಲು ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ಮಹಿಳೆ ಬುಡಕಟ್ಟು ಪ್ರದೇಶದ ವಜೀರಿಸ್ತಾನ್‌ಗೆ ಸೇರಿದವಳು ಮತ್ತು ಇತ್ತೀಚೆಗೆ ತನ್ನ ಪಕ್ಕದ ಮನೆಯ ವೈದ್ಯರನ್ನು ಮದುವೆಯಾಗಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆಕೆ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನಗರ ನ್ಯಾಯಾಲಯಕ್ಕೆ ಬಂದಾಗ, ಆಕೆಯ ತಂದೆ ಆಕೆಯ ಮೇಲೆ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆ ಸಂದರ್ಭದಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದು, ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಬ್ಬೀರ್ ಸೇಠಾರ್ ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.”ಪ್ರತಿಯೊಂದು ಪ್ರಕರಣದಲ್ಲಿ, ತಂದೆ, ಪತಿ, ಸಹೋದರ ಅಥವಾ ಯಾವುದೇ ಇತರ ಪುರುಷ ಸಂಬಂಧಿ ಮರ್ಯಾದಾ ಹತ್ಯೆಯ ಹಿಂದೆ ಇದ್ದಾರೆ” ಎಂದು ಸೇಥರ್ ಹೇಳಿದರು.

ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ಚಕಮಕಿ : 7 ಮಂದಿ ಸಾವು

ಇದನ್ನೂ ಓದಿ : Kannada flag in London: ಲಂಡನ್‌ನಲ್ಲೂ ರಾರಾಜಿಸಿದ ಕನ್ನಡದ ಬಾವುಟ

ಇದನ್ನೂ ಓದಿ : Covid outbreak China : ಕೋವಿಡ್ ಮಹಾಸ್ಟೋಟಕ್ಕೆ ಚೀನಾ ತತ್ತರ : ಶೇ.80ರಷ್ಟು ಜನರಿಗೆ ಸೋಂಕು, ಚೀನಾ ವಿಜ್ಞಾನಿಗಳು ಬಿಚ್ಚಿಟ್ಟ ಸ್ಪೋಟ ಸತ್ಯ

ಮದುವೆಯ ನಂತರ ಸಂತ್ರಸ್ತೆ ಮಹಿಳೆ ತನ್ನ ಮನೆಯನ್ನು ತೊರೆದಿದ್ದಳು. ಇದು ಆಕೆಯ ತಂದೆಯ ಕೋಪಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು. ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ನೂರಾರು ಮಹಿಳೆಯರನ್ನು ಮರ್ಯಾದೆ ಹೆಸರಿನಲ್ಲಿ ಕೊಲ್ಲಲಾಗುತ್ತದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ಕಳೆದ ಒಂದು ದಶಕದಲ್ಲಿ ವಾರ್ಷಿಕ ಸರಾಸರಿ 650 ಮರ್ಯಾದಾ ಹತ್ಯೆಗಳನ್ನು ವರದಿ ಮಾಡಿದೆ. ಆದರೆ ಹೆಚ್ಚಿನವು ವರದಿಯಾಗದ ಕಾರಣ, ನೈಜ ಸಂಖ್ಯೆಯು ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

Honor killing: Father shot dead his daughter in court

Comments are closed.