Five men gang-rape : ಬಾಯ್​ಫ್ರೆಂಡ್​ ಎದುರಲ್ಲೇ ಮಹಿಳೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಗುಜರಾತ್​ : Five men gang-rape : ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಹೋಲುವಂತಹ ಕರಾಳ ಘಟನೆಯೊಂದು ಗುಜರಾತ್​​ನ ಸೂರತ್​​ನಲ್ಲಿ ಭಾನುವಾರ ನಡೆದಿದೆ. 27 ವರ್ಷದ ಯುವತಿಯ ಪ್ರಿಯಕರನ ಎದುರಲ್ಲೇ ಆಕೆಯನ್ನು ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಈ ಸಾಮೂಹಿಕ ಅತ್ಯಾಚಾರವನ್ನು ಎಸಗಿ ಮೊಬೈಲ್​ಗಳ ಸಮೇತ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.


ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಮಹಿಳೆಯು ತನ್ನ ಬಾಯ್​ಫ್ರೆಂಡ್​ ಜೊತೆಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾತನಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಕಾಮುಕರು ಇವರಿಬ್ಬರಿಗೆ ತಮ್ಮೊಂದಿಗೆ ಬರುವಂತೆ ಹೇಳಿದ್ದಾರೆ. ಆದರೆ ಅದಕ್ಕೆ ಯುವಕ ಹಾಗೂ ಯುವತಿ ಒಪ್ಪಿಗೆ ನೀಡಿಲ್ಲ. ಇದಾದ ಬಳಿಕ ಕಾಮುಕರು ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಮಾತ್ರವಲ್ಲದೇ ಆತನನ್ನು ಮೈದಾನದಲ್ಲಿ ಕಟ್ಟಿ ಹಾಕಿದ್ದಾರೆ. ಬಾಯ್​ಫ್ರೆಂಡ್​ನ ಎದುರಲ್ಲೇ ಯುವತಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಸಾಮೂಹಿಕ ಅತ್ಯಾಚಾರದ ಬಳಿಕ ಸಂತ್ರಸ್ತೆಯು ತನ್ನ ಸಹೋದರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ . ಬಳಿಕ ಪೊಲೀಸ್​ ಠಾಣೆಗೆ ತೆರಳಿ ಕೃತ್ಯದ ಬಗ್ಗೆ ದೂರನ್ನು ನೀಡಲಾಗಿದೆ. ಐವರು ಅಪರಿಚಿತರ ವಿರುದ್ಧ ಪೊಲೀಸರು ಸೋಮವಾರ ಸಂಜೆ ಸುಮಾರಿಗೆ ಪ್ರಕರಣ ದಾಖಲಿಸಿದ್ದಾರೆ .


ಈ ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಐವರು ಕಾಮುಕರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್​ ಇನ್​ಸ್ಪೆಕ್ಟರ್​ ಮಾಹಿತಿ ನೀಡಿದ್ದಾರೆ. ಮಹಿಳೆಯ ಗೆಳೆಯನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಬಿಹಾರಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸ್​ ತಿಳಿಸಿದ್ದಾರೆ . ಐವರು ಸಾಮೂಹಿಕ ಅತ್ಯಾಚಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 376 (ಡಿ) (ಗ್ಯಾಂಗ್ ರೇಪ್), 284 (ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪರಾಧಗಳು) ಮತ್ತು 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನು ಓದಿ : Rohit Sharma century Phobia : ವಿರಾಟ್ ಬಳಿಕ ರೋಹಿತ್‌ಗೆ ಸೆಂಚುರಿ ಫೋಬಿಯಾ.. ಶತಕವಿಲ್ಲದೆ 1 ವರ್ಷ, ಏಕದಿನ ಶತಕವಿಲ್ಲದೆ 2.8 ವರ್ಷ

ಇದನ್ನೂ ಓದಿ : Six girls escaped :ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಎಸ್ಕೇಪ್

Gujarat: Five men gang-rape woman in front of her boyfriend in Surat; probe on

Comments are closed.