Hyderabad Fire accident: ಹೈದರಾಬಾದ್‌ ನ ಪೊಲೀಸ್‌ ಠಾಣೆ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ

ಹೈದರಾಬಾದ್:‌ (Hyderabad Fire accident) ರಾಮಗೋಪಾಲಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕಂದರಾಬಾದ್‌ನಲ್ಲಿರುವ ಡೆಕ್ಕನ್ ನಿಟ್‌ವೇರ್ ಅಂಗಡಿಯನ್ನು ಹೊಂದಿರುವ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಿನಿಸ್ಟರ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹೊಗೆಯನ್ನು ನಿಯಂತ್ರಣಕ್ಕೆ ತರುವಲ್ಲಿ ತೊಡಗಿದ್ದಾರೆ.

ಹೈದರಾಬಾದ್‌ ನ ರಾಮ್‌ಗೋಪಾಲ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕದಳದವರು ಹಾಗೂ ಇತರೆ ಅಧಿಕಾರಿಗಳು ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಜನವರಿ 19 ಗುರುವಾರದಂದು ಮಧ್ಯಾಹ್ನ 2.50ರ ಸುಮಾರಿಗೆ ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೈದರಾಬಾದ್ ಕೇಂದ್ರ ವಲಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಂ ರಾಜೇಶ್ ಚಂದ್ರ ಹೇಳಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಘಟನೆಯಲ್ಲಿ ಇದುವರೆಗೆ ಯಾರೂ ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಕಟ್ಟಡದೊಳಗೆ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಯಾವುದೇ ಮಾಹಿತಿಗಳು ಇನ್ನೂ ವರದಿಯಾಗಿಲ್ಲ.

ಇದನ್ನೂ ಓದಿ : Nagpura Railway accident: ಇಯರ್‌ ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ರೈಲು ಢಿಕ್ಕಿ: ಸಾವು

” ಇದು ವಾಣಿಜ್ಯ ಸಂಕೀರ್ಣವಾಗಿದೆ. ಒಳಗೆ ಬಹಳಷ್ಟು ವಸ್ತುಗಳಿದ್ದು, ವಿಶೇಷವಾಗಿ ನಿಟ್ಟೇರ್‌ ವಸ್ತುಗಳು ಇಲ್ಲಿವೆ. ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿ, ರಾಜ್ಯ ಅಗ್ನಿಶಾಮಕ ಇಲಾಖೆ, ಜಿಎಚ್‌ಎಂಸಿ ಅಧಿಕಾರಿಗಳು, ವಿಪತ್ತು ಸ್ಪಂದನಾ ಪಡೆಗಳು ಕಾರ್ಯಚರಣೆಯಲ್ಲಿ ತೊಡಗಿವೆ. ಈಗಾಗಲೇ ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳನ್ನು ತೆರವು ಮಾಡಿದ್ದೇವೆ.” ಎಂದು ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ವಿಕ್ರಮ್‌ ಸಿಂಗ್‌ ಮಾನ್‌ ತಿಳಿಸಿದ್ದಾರೆ.

ಇದನ್ನೂ ಓದಿ : Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

ಇದನ್ನೂ ಓದಿ : ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು

A huge fire accident in the police station building of Hyderabad

Comments are closed.