Thieves arrested: ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರು ಅರೆಸ್ಟ್‌

ಬಿಹಾರ: (Thieves arrested) ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರನ್ನು ಮಹಿಳಾ ಕಾನ್ಸ್ಟೆಬಲ್‌ ಗಳು ಹೊಡೆದುರುಳಿಸಿ ದರೋಡೆಯನ್ನು ತಪ್ಪಿಸಿದ ಬಳಿಕ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಜೂಹಿ ಕುಮಾರಿ ಹಾಗೂ ಶಾಂತಿ ಎನ್ನುವ ಇಬ್ಬರು ಮಹಿಳಾ ಕಾನ್ಸ್ಟೆಬಲ್‌ ಗಳು ಬ್ಯಾಂಕ್‌ ಗೆ ಕಾವಲು ಕಾಯುತ್ತಿರುವಾಗ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ಬ್ಯಾಂಕ್‌ ಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದ್ದಾರೆ. ದರೋಡೆಕೋರರು ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದು, ಬ್ಯಾಂಕಿನಲ್ಲಿ ಕಾಣಿಸಿಕೊಂಡಾಗ ಸಿಬ್ಬಂದಿಯೊಬ್ಬರು ತಮ್ಮ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ.

ಆ ಸಂದರ್ಭ ಓರ್ವ ದರೋಡೆಕೋರ ತನ್ನಲ್ಲಿರುವ ಪಿಸ್ತೂಲ್‌ ಅನ್ನು ಹೊರತೆಗೆದನು. ನಂತರ ಮಹಿಳಾ ಕಾನ್ಸ್ಟೆಬಲ್‌ ಹತ್ತಿರವಿದ್ದ ರೈಫಲ್‌ ಗಳನ್ನು ಸಹ ದರೋಡೆಕೋರರು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಮಹಿಳಾ ಕಾನ್ಸ್ಟೆಬಲ್‌ ಗಳು ಹೆದರದೆ ದರೋಡೆಕೋರರೊಂದಿಗೆ ಹೋರಾಟ ನಡೆಸಿ ಯಶಸ್ವಿಯಾಗುತ್ತಾರೆ.

ಇದಾದ ಬಳಿಕ ದರೋಡೆಕೋರರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಜೂಹಿ ಕುಮಾರಿ ಎನ್ನುವ ಕಾನ್ಸ್ಟೆಬಲ್‌ ಕಳ್ಳರ ಮೇಲೆ ಗುಂಡು ಹಾರಿಸಿ ದರೋಡೆ ಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೂ ಈ ಹೋರಾಟದಲ್ಲಿ ಇಬ್ಬರು ಮಹಿಳಾ ಕಾನ್ಸ್ಟೆಬಲ್‌ ಗಳಿಗೂ ಗಾಯಗಳಾಗಿವೆ.

ಇದನ್ನೂ ಓದಿ : Hyderabad Fire accident: ಹೈದರಾಬಾದ್‌ ನ ಪೊಲೀಸ್‌ ಠಾಣೆ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ

ಇದನ್ನೂ ಓದಿ : Nagpura Railway accident: ಇಯರ್‌ ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ರೈಲು ಢಿಕ್ಕಿ: ಸಾವು

ಇದನ್ನೂ ಓದಿ : Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ದರೋಡೆಕೋರರು ಬ್ಯಾಂಕ್‌ ಗೆ ಪ್ರವೇಶಿಸಿದ್ದು, ಬ್ಯಾಂಕಿನಲ್ಲಿ ಕಾವಲುಗಾರರಾಗಿದ್ದ ಮಹಿಳಾ ಕಾನ್ಸ್ಟೆಬಲ್‌ ಗಳು ಯಾವುದೇ ಹಿಂಜರಿಕೆಯಿಲ್ಲದೇ ಧೈರ್ಯದಿಂದ ದರೋಡೆಕೋರರೊಂದಿಗೆ ಹೋರಾಟ ನಡೆಸಿದ್ದಾರೆ. ಇದೀಗ ದರೋಡೆಗೆ ಯತ್ನಿಸಿ ನಂತರದಲ್ಲಿ ಮಹಿಳಾ ಕಾನ್ಸ್ಟೆಬಲ್‌ ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

Thieves arrested: Three robbers who had come to rob a bank were arrested

Comments are closed.