Indore crime news: ಮದುವೆಯಾಗಲು ಒಪ್ಪದ ಯುವತಿಗೆ ಗನ್‌ ತೋರಿಸಿದ: ಮಧ್ಯ ಪ್ರವೇಶಿಸಿದವನನ್ನು ಕೊಲೆಗೈದ

ಇಂದೋರ್:‌ (Indore crime news) ಮದುವೆಯಾಗಲು ತಿರಸ್ಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಯುವತಿಯ ಹಣೆಗೆ ಗನ್‌ ಇಟ್ಟು ಬೆದರಿಕೆ ಹಾಕುತ್ತಿದ್ದ ಸಂದರ್ಭ ಮಧ್ಯ ಪ್ರವೇಶಿಸಿದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಇಂದೋರ್‌ ನಲ್ಲಿ ನಡೆದಿದೆ. ಯುವತಿಯ ಸಹೋದ್ಯೋಗಿ ಸಂಸ್ಕಾರ್‌ ವರ್ಮಾ(20 ವರ್ಷ) ಕೊಲೆಯಾದ ಯುವಕ.

ಇಂದೋರ್‌ನ ರೈಲ್ವೇ ನಿಲ್ದಾಣದ ಹೊರಗೆ ರಾಹುಲ್‌ ಯಾದವ್‌ ಎನ್ನುವಾತ ತಾನು ಪ್ರೀತಿಸುತ್ತಿದ್ದ ಯುವತಿಯ ಮುಂದೆ ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾನೆ. ಇದಕ್ಕೆ ಯುವತಿ ತಿರಸ್ಕರಿಸಿದ್ದು, ಕೋಪಗೊಂಡ ರಾಹುಲ್‌ ಯುವತಿಯ ಹಣೆಗೆ ಗನ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಸಹೋದ್ಯೋಗಿ ಸಂಸ್ಕಾರ್‌ ವರ್ಮಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಯಾದವ್‌ ವರ್ಮಾ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇನ್ನೂ ಗುಂಡೇಟು ತಗುಲಿದ ವರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಆದರೆ ವರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನೂ ಆರೋಪಿ ಯಾದವ್‌ ಹಾಗೇ ಅವನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಘಟನೆಯ ಕುರಿತು ಇಂದೋರ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ವರ್ಮಾ ಅವರ ಸಾವಿನ ನಂತರ ಪೊಲೀಸ್‌ ನಿಯಂತ್ರಣ ಕೊಠಡಿಯ ಹೊರಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು. ಸದ್ಯ ನಾಪತ್ತೆಯಾದ ಆರೋಪಿ ಹಾಗೂ ಆತನ ಕುಟುಂಬಸ್ಥರ ಶೋಧ ಕಾರ್ಯ ಮುಂದುವರೆದಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Palghar crime: ದಂಪತಿ ಜಗಳ ಬಿಡಿಸಲು ಬಂದ ಸಹೋದರನಿಂದಲೇ ಸಹೋದರಿಯ ಗಂಡನ ಹತ್ಯೆ

ಇದನ್ನೂ ಓದಿ : Drug trafficking-11 arrested: ಆಹಾರ ಡೆಲಿವರಿ ನೆಪದಲ್ಲಿ ಡ್ರಗ್ಸ್ ಸಾಗಾಟ : ಬೆಂಗಳೂರಲ್ಲಿ 11 ಮಂದಿ ಅರೆಸ್ಟ್

ಇದನ್ನೂ ಓದಿ : 7 workers died: ಆಯಿಲ್ ಟ್ಯಾಂಕ್ ಸ್ವಚ್ಷಗೊಳಿಸುವ ವೇಳೆ ದುರಂತ : ವಿಷ ಅನಿಲ ಸೇವಿಸಿ 7 ಕಾರ್ಮಿಕರ ಸಾವು

Indore crime news: Gun pointed at young woman who did not agree to marry: Intervenor killed

Comments are closed.