Jharkhand crime case: ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನ ತಲೆ ಕಡಿದ ಪತಿ

ಜಾರ್ಖಂಡ್:‌ (Jharkhand crime case) ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಅರಿತ ಪತಿ ಆಕೆಯ ಪ್ರಿಯಕರನನ್ನು ಮರಕ್ಕೆ ಕಟ್ಟಿ ಕೊಡಲಿಯಿಂದ ತಲೆ ಕಡಿದ ಭಯಾನಕ ಘಟನೆ ಜಾರ್ಖಂಡ್‌ ನ ಲೊಂಜೊದಲ್ಲಿ ನಡೆದಿದೆ. ಆರೋಪಿ ಪತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಹೆಂಬ್ರಮ್‌ ಎನ್ನುವಾತ ಕೊಲೆಯಾದ ವ್ಯಕ್ತಿ.

ಆರೋಪಿ (Jharkhand crime case) ವಿಶ್ವನಾಥ್‌ ಸುಂಡಿ ಎಂಬಾತ ತನ್ನ ಪತ್ನಿ ಬೇರೋಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ. ಆದರೆ ಸುಂಡಿಯ ಅನುಮಾನ ನಿಜವಾಗಿತ್ತು. ಸುಂಡಿಯ ಪತ್ನಿ ಹೆಂಬ್ರಮ್‌ ಎನ್ನುವಾತನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಅಲ್ಲದೇ ಆಕೆಯನ್ನು ಭೇಟಿಯಾಗಲು ಹೆಂಬ್ರಮ್‌ ಲೊಂಜೊಗೆ ಬಂದಿದ್ದನು. ಇದಾದ ಮೇಲೆ ನಡೆದಿದ್ದು ಮಾತ್ರ ಕೊಲೆ.

ಮೊದಲೇ ಹೆಂಡತಿಯ ಸಂಬಂಧದ ಬಗ್ಗೆ ಅನುಮಾನವಿದ್ದ ಸುಂಡಿ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ತನ್ನ ಪತ್ನಿ ಬೇರೊಬ್ಬನೊಂದಿಗೆ ಇರುವುದನ್ನು ಕಂಡ ಸುಂಡಿಗೆ ತೀವ್ರವಾಗಿ ಕೋಪ ನೆತ್ತಿಗೇರಿತ್ತು. ತೀವ್ರವಾಗಿ ಕೋಪಗೊಂಡಿದ್ದ ಸುಂಡಿ ತನ್ನ ಪತ್ನಿಯ ಪ್ರಿಯಕರ ಹೆಂಬ್ರಮ್‌ ಗೆ ಥಳಿಸಲು ಪ್ರಾರಂಭಿಸಿದ್ದಾನೆ. ನಂತರ ಆತನನ್ನು ಅಲ್ಲಿಂದ ಎಳೆದುಕೊಂಡು ಹೋಗಿ ತನ್ನ ಮನೆಯ ಹತ್ತಿರದ ಮರಕ್ಕೆ ಕಟ್ಟಿ ಹಾಕಿದ್ದಾನೆ. ನಂತರ ಕೊಡಲಿಯನ್ನು ಎತ್ತಿಕೊಂಡ ಸುಂಡಿ ಹೆಂಬ್ರಮ್‌ ನ ತಲೆಯನ್ನು ಕಡಿದು ಹಾಕಿದ್ದಾನೆ. ಹೆಂಬ್ರಮ್‌ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯನ್ನು ತಿಳಿದ ಸೋನುವ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಶ್ವನಾಥ್‌ ಸುಂಡಿಯನ್ನು ಬಂಧಿಸಿದ್ದಾರೆ. ಮೃತ ವ್ಯಕ್ತಿ ಹೆಂಬ್ರಮ್‌ ನ ಶವ ಹಾಗೂ ತಲೆ ಕಡಿಯಲು ಬಳಸಿದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ : Rajghat Car accident: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೆ ಕಾರು ಢಿಕ್ಕಿ: ಆರೋಪಿ ಅರೆಸ್ಟ್

ಇದನ್ನೂ ಓದಿ : Twin brothers death: ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ರೀತಿಯಲ್ಲಿ ಅವಳಿ ಸಹೋದರರ ಸಾವು

ಇದನ್ನೂ ಓದಿ : ಸ್ಯಾಂಟ್ರೋ ರವಿ ಬಂಧನ : ತಲೆಮರೆಸಿಕೊಂಡಿದ್ದ ಆರೋಪಿ ಗುಜರಾತ್‌ನಲ್ಲಿ ಸೆರೆ

Jharkhand crime: Illicit relationship: Husband beheaded wife’s lover

Comments are closed.