Old man disoriented on flight: ವಿಮಾನದಲ್ಲಿ ಅಸ್ತವ್ಯಸ್ತಗೊಂಡ 60 ವರ್ಷದ ವ್ಯಕ್ತಿ: ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶ

ಇಂದೋರ್:(Old man disoriented on flight) ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಶನಿವಾರ ಸಂಜೆ 60 ವರ್ಷದ ಪ್ರಯಾಣಿಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಇಂದೋರ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂಡಿಗೋ ಏರ್‌ಲೈನ್ಸ್ 6E-2088 ವಿಮಾನದಲ್ಲಿದ್ದ ಅತುಲ್ ಗುಪ್ತಾ (60) ಅವರ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಪ್ರಯಾಣದ ಮಧ್ಯದಲ್ಲಿ ಅವರ ಸ್ಥಿತಿ ಹದಗೆಟ್ಟಿದೆ. ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಕಾರಣ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮಧುರೈ-ದೆಹಲಿ ವಿಮಾನವನ್ನು ಇಂದೋರ್‌ಗೆ ತಿರುಗಿಸಲಾಯಿತು ಮತ್ತು ಸಂಜೆ 5:30 ರ ಸುಮಾರಿಗೆ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಕೂಡಲೇ ಭೂಸ್ಪರ್ಶ ಮಾಡಲಾಯಿತು.

ವಿಮಾನವು ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶವಾಗಿದ್ದು, ಅಸ್ವಸ್ಥಗೊಂಡ ಪ್ರಯಾಣಿಕರನ್ನು ಕೂಡಲೆ ವಿಮಾನ ನಿಲ್ದಾಣದ ಸಮೀಪವಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಪೊಲೀಸ್‌ ಅಧಿಕಾರಿಗಳು, ” ವಿಮಾನ ಪ್ರಯಾಣದ ನಡುವೆ ವ್ಯಕ್ತಿಯಬ್ಬರಿಗೆ ಬಾಯಿಯಲ್ಲಿ ರಕ್ತಸ್ರಾವವಾಗಲು ಪ್ರಾರಂಭವಾಯಿತು. ಕೂಡಲೇ ವಿಮಾನವನ್ನು ಇಂದೋರ್‌ ಗೆ ತಿರುಗಿದಿ ತುರ್ತು ಭೂಸ್ಪರ್ಶ ಮಾಡಿ ವ್ಯಕ್ತಿಯನ್ನು ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಅವರು ಅಷ್ಟರೊಳಗಾಗಿ ಸಾವನ್ನಪ್ಪಿದ್ದರು.” ಎಂದು ಹೇಳಿದ್ದಾರೆ.

ವೈದ್ಯರ ಪ್ರಕಾರ, ಮೃತ ವ್ಯಕ್ತಿ ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತ ಗುಪ್ತಾ ಅವರು ನೋಯ್ಡಾದ ನಿವಾಸಿ ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪ್ರಭಾರಿ ನಿರ್ದೇಶಕ ಪ್ರಬೋಧ್ ಚಂದ್ರ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : Jharkhand crime case: ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನ ತಲೆ ಕಡಿದ ಪತಿ

ಇದನ್ನೂ ಓದಿ : Rajghat Car accident: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೆ ಕಾರು ಢಿಕ್ಕಿ: ಆರೋಪಿ ಅರೆಸ್ಟ್

ಇದನ್ನೂ ಓದಿ : Twin brothers death: ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ರೀತಿಯಲ್ಲಿ ಅವಳಿ ಸಹೋದರರ ಸಾವು

Old man disoriented on flight: 60-year-old man disoriented on flight: Emergency landing in Indore

Comments are closed.