Jharkhand crime: ಪತ್ನಿಯನ್ನು ಕೊಲೆಗೈದು ದೇಹವನ್ನು 12 ತುಂಡುಗಳಾಗಿ ಕತ್ತರಿಸಿದ ಪತಿ

ಜಾರ್ಖಂಡ್:‌ (Jharkhand crime) ದೆಹಲಿಯಲ್ಲಿ ನಡೆದ ಶ್ರದ್ಧಾವಾಕರ್‌ ಹತ್ಯೆ ಘಟನೆಯಂತೆ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತಿಯೋರ್ವ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು 12 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದಾನೆ. ಜಾರ್ಖಂಡ್‌ ನ ಸಾಹೇಬ್‌ ಜಂಗ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬೋರಿಯೊ ಪೊಲೀಸ್‌ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ರೂಬಿಕಾ ಪಹಾಡಿನ್‌ ಎಂದು ಗುರುತಿಸಲಾಗಿದೆ.

ಆರೋಪಿ ಪತಿ ದಿಲ್ದಾರ್‌ ಅನ್ಸಾರಿ ಕೊಲೆ ಮಾಡಿ ಆಕೆಯ ದೇಹವನ್ನು 12 ಭಾಗಗಳಾಗಿ ಕತ್ತರಿಸಿದ್ದಾನೆ. ಮೃತ (Jharkhand crime) ಮಹಿಳೆಯ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿದಾಗ ಶ್ರದ್ಧಾ ಕೊಲೆ ಪ್ರಕರಣದಂತೆಯೇ ಈ ಪ್ರಕರಣವೂ ಬೆಳಕಿಗೆ ಬಂದಿದೆ.

ತನಿಖೆಯ ವೇಳೆ ಸಂತಾಲಿ ವೊಮಿನ್‌ ಟೋಲ್‌ ಬಳಿಯ ಹಳೆಯ ಮನೆಯೊಂದರಲ್ಲಿ ಕೊಳೆತ ದೇಹದ ಭಾಗಗಳು ದೊರೆತಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಮೃತ ರೂಬಿಕಾ ಪಹಾಡಿನ್ ರೂಬಿಕಾ ದಿಲ್ದಾರ್‌ ನ ಎರಡನೇ ಪತ್ನಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಜೊತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ”ಸಾಹಿಬ್‌ಗಂಜ್‌ನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ದೇಹದ 12 ಭಾಗಗಳು ಪತ್ತೆಯಾಗಿವೆ. ದೇಹದ ಕೆಲವು ಭಾಗಗಳು ಇನ್ನೂ ಕಾಣೆಯಾಗಿವೆ ಮತ್ತು ಅವುಗಳನ್ನು ಹುಡುಕಲಾಗುತ್ತಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಾಹೇಬ್‌ಗಂಜ್ ಎಸ್‌ಪಿ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Car overturned- 3 died: ಬ್ಲೂಬಕ್‌ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿ: ಮೂವರು ಸಾವು, ನಾಲ್ವರಿಗೆ ಗಾಯ

ಇದನ್ನೂ ಓದಿ : HIV Positive Injection‌ : ಪತ್ನಿಗೆ ಎಚ್ ಐವಿ ಚುಚ್ಚುಮದ್ದು ಹಾಕಿಸಿ ವಿಚ್ಚೇದನ ಕೊಟ್ಟ ಪಾಪಿ ಪತಿ

ಇನ್ನೂ ಈ ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಇದರ ಕುರಿತಾಗಿ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

(Jharkhand crime) Another case has come to light like the Shraddhawakar murder incident in Delhi, where a husband killed his wife and cut her body into 12 pieces. The incident took place in Saheb Jung district of Jharkhand and the accused was arrested by Borio police station. The deceased woman has been identified as Rubika Pahadin.

Comments are closed.