Annual Sports Event : ಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ಬಾಲಕನ ಕತ್ತು ಸೀಳಿದ ಈಟಿ

ಒಡಿಶಾ : ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ (Annual Sports Event) ತಯಾರಿಯಲ್ಲಿ ಬಾರಿ ದುರಂತವೊಂದು ನಡೆದಿದೆ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಹಲವಾರು ಆಟೋಟವನ್ನು ಆಯೋಜಿಸಲಾಗುತ್ತದೆ. ಅದರಂತೆ ಈಟಿ ಎಸೆತದ ಅಭ್ಯಾಸದ ವೇಳೆಯಲ್ಲಿ ಸ್ಪರ್ಧಾಳು ಒಬ್ಬ ಎಸೆದ ಈಟಿಯಿಂದಾಗಿ ವಿದ್ಯಾರ್ಥಿನೊಬ್ಬನ ಕತ್ತು ಸೀಳಿದ ದುರಂತ ನಡೆದಿದೆ.

ಒಡಿಶಾದ ಬಲಂಗೀರ್‌ ಜಿಲ್ಲೆಯ ಅಗಲ್ಪುರದ ಬಾಲಕರ ಪ್ರೌಢಶಾಲೆಯಲ್ಲಿ ಈ ಅವಘಡ ಸಂಬಂವಿಸಿದ್ದು, ಬಾಲಕ ಜೀವಾಪಾಯದಿಂದ ಪಾರಾಗಿದ್ದಾನೆ. ವಾರ್ಷಿಕ ಕ್ರೀಡಾಕೂಟದ ಸಲುವಾಗಿ ವಿದ್ಯಾರ್ಥಿಗಳು ಮೈದಾನದಲ್ಲಿ ತಾಲೀಮೂ ನಡೆಸುತ್ತಿರುವಾಗ, ಅದೇ ವೇಳೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅದನ್ನು ನೋಡುತ್ತಿರುವಾಗ ಆತನ ಕತ್ತನ್ನು ಸೀಳಿ ಗಾಯಗೊಳಿಸಿದೆ. ಗಾಯಗೊಂಡ ವಿದ್ಯಾರ್ಥಿ 14 ವರ್ಷದ ಸದಾನಂದ ಮೆಹರ್‌ನ್ನು ಕೂಡಲೇ ಹತ್ತಿರದ ಭೀಮಾ ಬೊಯಿ ಮೆಡಿಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Assault on girl: ಅಪ್ರಾಪ್ತ ಬಾಲಕಿ ಜೊತೆ ಅಸಭ್ಯ ವರ್ತನೆ: ಆರೋಪಿ ಯುವಕನ ಮೇಲೆ ಹಲ್ಲೆ ನಡೆಸಿದ ಪೋಷಕರು

ಇದನ್ನೂ ಓದಿ : Car overturned- 3 died: ಬ್ಲೂಬಕ್‌ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿ: ಮೂವರು ಸಾವು, ನಾಲ್ವರಿಗೆ ಗಾಯ

ಇದನ್ನೂ ಓದಿ : HIV Positive Injection‌ : ಪತ್ನಿಗೆ ಎಚ್ ಐವಿ ಚುಚ್ಚುಮದ್ದು ಹಾಕಿಸಿ ವಿಚ್ಚೇದನ ಕೊಟ್ಟ ಪಾಪಿ ಪತಿ

ಇದನ್ನೂ ಓದಿ : Dehli bus accident: ಬಸ್‌ ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ

ಸದ್ಯ ಗಾಯಗೊಂಡ ಬಾಲಕನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ತಿಳಿದ ಜಿಲ್ಲಾಧಿಕಾರಿ ಬಾಲಕನ ಕುಟುಂಬಕ್ಕೆ ಮೂವತ್ತು ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಹಾಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಾಕ್‌ ಸರಕಾರದಿಂದ ಬಾಲಕನ ಚಿಕಿತ್ಸೆಯ ಖರ್ಜನ್ನು ಭರಿಸುತ್ತದೆ ಎಂದು ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ರದ್ದುಗೊಳಿಸಿದ್ದಾರೆ.

A spear slit the boy’s throat during the school’s annual sports event

Comments are closed.