Karkala : ನೀರು ಎಂದು ಆಸಿಡ್‌ ಕುಡಿದ ಯುವತಿ ! ಕ್ಯಾಶ್ಯೂ ಫಾಕ್ಟರಿ ಮಾಲೀಕನ ವಿರುದ್ದ ದಾಖಲಾಯ್ತು ದೂರು

ಕಾರ್ಕಳ : ಯುವತಿಯೋರ್ವಳು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆಯಲ್ಲಿ ಬಾಯಾರಿಕೆ ತಣಿಸಲು ನೀರೆಂದು ಆಸಿಡ್‌ ಕುಡಿದಿದ್ದಾಳೆ. ಇದರಿಂದಾಗಿ ಯುವತಿ ಅಸ್ವಸ್ಥಗೊಂಡಿದ್ದು, ಫ್ಯಾಕ್ಟರಿ ಮಾಲೀಕನ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ. ಜಜರ್ಕಳ ದರ್ಕಾಸು ಮನೆಯ ತೇಜಸ್ವಿನಿ ( ೨೦ ವರ್ಷ) ಎಂಬಾಕೆಯೇ ಆಸಿಡ್‌ ಕುಡಿದ ಯುವತಿ. ತೇಜಸ್ವಿನಿ ಕಳೆದ ಒಂದು ವರ್ಷದಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಧ್ಯಾಹ್ನದ ಹೊತ್ತಲ್ಲಿ ಬಾಯಾರಿಕೆಯಾಗಿದೆ ಎಂದು ಬಾಟಲಿ ಹಿಡಿದುಕೊಂಡಿದ್ದಾಳೆ. ತಣ್ಣೀರು ಎಂದು ಬಾವಿಸಿಕೊಂಡು ಆಸಿಡ್‌ ಕುಡಿದಿದ್ದಾಳೆ. ಕೂಡಲೇ ಇತರ ಕಾರ್ಮಿಕರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕಾರ್ಕಳ ಆಸ್ಪತ್ರೆಗೆ ದಾಖಲು ಮಾಡಲಾಯಿತಾದ್ರೂ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫ್ಯಾಕ್ಟರಿ ಮಾಲೀಕ ಗಣೇಶ್‌ ಕಾಮತ್‌ ಎಂಬವರು ಯುವತಿಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆಯನ್ನು ನೀಡಿದ್ದರು. ಇದೇ ಕಾರಣಕ್ಕೆ ಯುವತಿ ಮಾಲೀಕರ ವಿರುದ್ದ ದೂರು ನೀಡಿರಲಿಲ್ಲ.

ಆದರೆ ಫ್ಯಾಕ್ಟರಿ ಮಾಲೀಕ ಗಣೇಶ್‌ ಕಾಮತ್‌ ಆಸ್ಪತ್ರೆಯ ಬಿಲ್‌ ಪಾವತಿಸುವುದನ್ನು ಬಿಡಿ, ಆಸ್ಪತ್ರೆಗೆ ಆಗಮಿಸಿ ಆರೋಗ್ಯವನ್ನೂ ವಿಚಾರಿಸಿರಲಿಲ್ಲ. ಇದರಿಂದಾಗಿ ಬೇಸತ್ತ ಯುವತಿ ಇದೀಗ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತೆ ಗೊತ್ತಾ ?

ಇದನ್ನೂ ಓದಿ : ಹೊತ್ತಿ ಉರಿಯಿತು ಚಲಿಸುತ್ತಿದ್ದ ಕಾರು : ತಪ್ಪಿತು ಬಾರೀ ಅನಾಹುತ

( Young woman drank acid as water! Complaint filed against owner of Cashew Factory )

Comments are closed.