KSRTC conductor Death:ಬಸ್ಸಿನಲ್ಲೇ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಹೃದಯಾಘಾತದಿಂದ ಸಾವು

ಹುಬ್ಬಳ್ಳಿ: (KSRTC conductor Death)ಕರ್ತವ್ಯದಲ್ಲಿ ನಿರತರಾಗಿದ್ದ ಹುಬ್ಬಳಿ ನಗರ ಸಾರಿಗೆ ಬಸ್‌ ಕಂಡಕ್ಟರ್‌ ಹೃದಯಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹುಬ್ಬಳಿಯ ವಿದ್ಯಾನಗರದಲ್ಲಿ ನಡೆದಿದೆ. ಮಹೇಶ್ವರ್‌ ಹೂಗಾರ ( 40 ವರ್ಷ ) ಎಂಬವರೇ ಮೃತಪಟ್ಟವರು. ಹುಬ್ಬಳ್ಳಿ ನಗರ ಸಾರಿಗೆ ವಿಭಾಗದ ಸಿಟಿ-1 ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು.

(KSRTC conductor Death)ಮಹೇಶ್ವರ್‌ ಹೂಗಾರ್‌ ಸಿಬಿಟಿಯಿಂದ ಗಾಮನಗಟ್ಟಿ ಕಡೆಗೆ ಹೋಗುವ ಬಸ್‌ ನಲ್ಲಿ ನಿರ್ವಾಹಕರಾಗಿದ್ದರು. ಹುಬ್ಬಳ್ಳಿಯ ಸಿಬಿಟಿಯಿಂದ ಗಾಮನಗಟ್ಟಿಗೆ ಹೋಗುವ ವೇಳೆಯಲ್ಲಿ ಚೆಕ್ಕಿಂಗ್‌ ಇನ್ಸ್‌ ಪೆಕ್ಟರ್‌ ಮಂಗಲಾ ಹೊಸಮನಿ ಬಸ್‌ ಹತ್ತಿದ್ದಾರೆ. ಚೆಕ್ಕಿಂಗ್‌ ಇನ್ಸ್‌ ಪೆಕ್ಟರ್‌ ಕಂಡು ಗಾಬರಿಗೊಂಡ ಮಹೇಶ್ವರ್‌ ಹೂಗಾರ ಅವರಿಗೆ ಹೃದಯಾಘಾತವಾಗಿದೆ. ಕಂಡಕ್ಟರ್‌ ಗೆ ಹಾರ್ಟ್‌ ಅಟ್ಯಾಕ್‌ ಆಗುತ್ತಿದ್ದಂತೆ ಚೆಕ್ಕಿಂಗ್‌ ಇನ್ಸ್‌ ಪೆಕ್ಟರ್‌ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಬಸ್‌ ಚಾಲಕ ಕಂಡಕ್ಟರ್‌ ಮಹೇಶ್ವರ್‌ ಹೂಗಾರ ಅವರನ್ನು ಹತ್ತಿರದ ಕಿಮ್ಸ್‌ ಆಸ್ಫತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:MLA Renukacharya : ಶಾಸಕ ರೇಣುಕಾಚಾರ್ಯ ಸೋದರನ ಮಗ ನಾಪತ್ತೆ ಪ್ರಕರಣ ; ಕಣ್ಣೀರಿಟ್ಟ ಶಾಸಕ

ಇದನ್ನೂ ಓದಿ:Yellow Alert declared : ಕರಾವಳಿಯಲ್ಲಿ ಇಂದಿನಿಂದ ಬಾರೀ ಮಳೆ ; ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ:Rajyotsava award: ಇನ್ನು ಮುಂದೆ 60 ವಯಸ್ಸಿನ ಮಿತಿ ಇಲ್ಲ; ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಸಿಎಂ ಘೋಷಣೆ

ಮಹೇಶ್ವರ್‌ ಹೂಗಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನವರು ಎಂದು ತಿಳಿದು ಬಂದಿದೆ.ಕಳೆದ ಎಂಟು ವರ್ಷಗಳಿಂದಲೂ ಹುಬ್ಬಳಿ ಸಾರಿಗೆ ಸಂಸ್ಥೆಯಲ್ಲಿ ಕೆಲಸವನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ ಎಂದು ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ತಿಳಿಸಿದ್ದಾರೆ.ತಪಾಸಣಾ ಅಧಿಕಾರಿಗಳು ಬಸ್‌ ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ ನಲ್ಲಿ ಕಳುಹಿಸು ವ್ಯವಸ್ಥೆ ಮಾಡಿದ್ದಾರೆ. ಚೆಕ್ಕಿಂಗ್‌ ಇನ್ಸ್‌ ಪೆಕ್ಟರ್‌ ಬಂದಿರೋ ಕಾರಣದಿಂದ ಹೃದಯಾಘಾತವಾಗಿದೆ ಎನ್ನಲಾಗುತ್ತಿದೆ. ಸದ್ಯ ನಗರ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌ ವಿರುದ್ದ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

KSRTC conductor died of heart attack in the bus

Comments are closed.