ಕುಂದಾಪುರ: ಚಿನ್ನದ ಉಂಗುರ ಖರೀದಿಸಿ ವ್ಯಾಪಾರಿಗೆ 30 ಸಾವಿರ ರೂ. ವಂಚನೆ

ಕುಂದಾಪುರ: ಚಿನ್ನದ ಅಂಗಡಿ ಮಾಲೀಕನೋರ್ವನಿಂದ ಚಿನ್ನದ ಉಂಗುರ ಖರೀದಿಸಿ ಹಣ ನೀಡದೇ ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿರುವ ಶ್ರೀಕೃಷ್ಣ ಜ್ಯುವೆಲರಿ ಅಂಗಡಿ ಮಾಲೀಕರಾದ ಮಂಜುನಾಥ್ ಎಂಬವರೇ ವಂಚನೆಗೆ ಒಳಗಾದವರು.
ಸಂತೋಷ್ ಎಂಬವರು ಮಂಜುನಾಥ್ ಅವರಿಂದ ₹30,000 ಮೌಲ್ಯದ ಚಿನ್ನದ ಉಂಗುರಗಳನ್ನು ಖರೀದಿಸಿ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
2024ರ ನವೆಂಬರ್ 3ರಂದು ಸಂತೋಷ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ KA-15-N-5697 ನೋಂದಣಿ ಸಂಖ್ಯೆಯ ವಾಹನದಲ್ಲಿ ಅಂಗಡಿಗೆ ಬಂದಿದ್ದ. ಗಿಫ್ಟ್ ನೀಡುವ ಉದ್ದೇಶದಿಂದ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿ, NEFT ಮೂಲಕ ₹30,000 ಹಣ ಪಾವತಿಸಿರುವುದಾಗಿ ತನ್ನ ಮೊಬೈಲ್‌ನಲ್ಲಿ ತೋರಿಸಿದ್ದ.
ಈತನ ಮಾತನ್ನು ನಂಬಿದ ಮಂಜುನಾಥ ಅವರು ಉಂಗುರಗಳನ್ನು ನೀಡಿದ್ದರು. ಆದರೆ, ಹಣ ಖಾತೆಗೆ ಜಮಾ ಆಗದಿದ್ದಾಗ ಮಂಜುನಾಥ್ ಅವರು ಆ ವ್ಯಕ್ತಿಗೆ ಕರೆ ಮಾಡಿದ್ದು, ಆಗ ನೆಟ್‌ವರ್ಕ್ ಸಮಸ್ಯೆ ಎಂದು ನೆಪ ಹೇಳಿ ನಂತರ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದ.
ಇದನ್ನೂ ಓದಿ : ಫೇಸ್‌ಬುಕ್ ನಂಬಿ 3 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ
ನಂತರ ಪದೇ ಪದೇ ಸಂಪರ್ಕಿಸಿದಾಗ ನಾಳೆ, ನಾಡಿದ್ದು ಎಂದು ಸತಾಯಿಸಿ ವಂಚಿಸಿದ್ದಾನೆ. ಈ ನಡುವೆ, ವಿಚಾರಣೆ ನಡೆಸಿದಾಗ ವಂಚಕನ ಹೆಸರು ಪ್ರವೀಣ ಎಂದು ತಿಳಿದುಬಂದಿದೆ.
ಮೋಸ ಮಾಡುವ ಉದ್ದೇಶದಿಂದಲೇ ಚಿನ್ನ ಖರೀದಿಸಿ, ಹಣ ಪಾವತಿಸದೆ ವಂಚನೆ ಮಾಡಿರುವುದಾಗಿ ಮಂಜುನಾಥ್ ಅವರು ಅಮಾಸೆಬೈಲು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಅಮಾಸೆಬೈಲು ಠಾಣೆಯ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅಪರಿಚಿತರ ಜೊತೆಗೆ ವ್ಯವಹಾರ ಮಾಡಿದ್ರೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ ಎಕ್ಸಾಂಪಲ್.
ಇದನ್ನೂ ಓದಿ : ಮನೆ ಕಲಸದಾಕೆಯಿಂದ ಲಕ್ಷಾಂತರ ರೂಪಾಯಿ ವಂಚನೆ
Kundapur businessman was cheated of Rs 30000 after buying a gold ring Udupi Crime Report



