ಉಡುಪಿ : ಫೇಸ್‌ಬುಕ್ ಜಾಹೀರಾತು ನಂಬಿ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Udupi Facebook Ad Scam : ಉಡುಪಿ : ಉಡುಪಿಯ ವ್ಯಕ್ತಿಯೋರ್ವರು ಫೇಸ್‌ಬುಕ್ ನಲ್ಲಿ ಬಂದಿದ್ದ ಜಾಹೀರಾತು ನಂಬಿ 3 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಉಡುಪಿಯ ದೊಡ್ಡಣಗುಡ್ಡೆಯ ನಿವಾಸಿ ಬಿ. ಎಂ. ಯಕ್ಕರನಾಳ (43) ಎಂಬುವರೇ ಹಣ ಕಳೆದುಕೊಂಡವರು.
ಯಕ್ಕರನಾಳ ಅವರು “360 one 12th Investment plan with an expected return of 800%” ಎಂಬ ಆಕರ್ಷಕ ಟ್ರೇಡಿಂಗ್ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ನೋಡಿದ್ದರು.
ಈ ಯೋಜನೆ ಕ್ಲಿಕ್ ಮಾಡಿದಾಗ, ಅವರ ಮೊಬೈಲ್ ಸಂಖ್ಯೆಗೆ (8769421125) ವಾಟ್ಸ್‌ಆ್ಯಪ್‌ನಿಂದ ಒಂದು ಲಿಂಕ್ ಬಂದಿದೆ. ಕೂಡಲೇ ಲಿಂಕ್ ಬಳಸಿಕೊಂಡು ಫಾರ್ಮ್ ಭರ್ತಿ ಮಾಡಿಡಿದ್ದರು.
Udupi Facebook Ad Scam : ವಾಟ್ಸ್ ಗ್ರೂಪ್ ರಚಿಸಿ ಪ್ರಚೋದನೆ
ನಂತರ ಅವರನ್ನು “360 one VIP K510” ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಯಿತು. ಗುಂಪಿನಲ್ಲಿದ್ದ ಅಪರಚಿತರು ಹಲವು ಫೋನ್ ನಂಬರ್‌ಗಳಿಂದ ಕರೆ ಮಾಡಿ ಆಸೆ ಹುಟ್ಟಿಸಿದ್ದಾರೆ.
ನಿರಂತರವಾಗಿ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡಿ ಯಕ್ಕರನಾಳ ಅವರನ್ನು ಹಣ ಹೂಡಿಕೆ ಮಾಡಲು ಪ್ರಚೋದಿಸಿದ್ದಾರೆ.
ಇದನ್ನೂ ಓದಿ : ಬೈಂದೂರಿನಲ್ಲಿ ಆನ್‌ಲೈನ್ ವಂಚನೆ: ಜಿಮ್ ಟ್ರೈನರ್‌ನಿಂದ 61,013 ರೂ. ಸುಲಿಗೆ !
ವಂಚಕರ ಮಾತನ್ನು ನಂಬಿದ ಯಕ್ಕರನಾಳ ಅವರು, ಜೂನ್ 27 ರಿಂದ ಜುಲೈ 16ರ ವರೆಗೆ ಒಟ್ಟು ಹಂತ ಹಂತವಾಗಿ ವಿವಿಧ ಬ್ಯಾಂಕ್‌ಗಳ ಮೂಲಕ ಒಟ್ಟು 3,00,000 ರೂಪಾಯಿ ಹಣವನ್ನು ವಂಚಿಸಿದ್ದಾರೆ.
ಇಲ್ಲಿಯವರೆಗೆ ಯಕ್ಕರನಾಳ ಅವರಿಗೆ ಹೂಡಿಕೆ ಮಾಡಿದ ಹಣವಾಗಲಿ ಅಥವಾ ಭರವಸೆ ನೀಡಿದ್ದ ಭಾರಿ ಲಾಭಾಂಶವಾಗಲಿ ವಾಪಸ್ ಬಂದಿಲ್ಲ. ಇದರಿಂದ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಅವರು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‌ಲೈನ್ ಹೂಡಿಕೆ ಯೋಜನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೇರಳ ನರ್ಸ್ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ರದ್ದು
Udupi Facebook Advertisement Scam 3Lakh Lost Kannada News



