LLB student suicide: ಪ್ರಿನ್ಸಿಪಾಲ್‌ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಲ್.ಎಲ್‌.ಬಿ ವಿದ್ಯಾರ್ಥಿ ಅತ್ಮಹತ್ಯೆ

ಬೆಂಗಳೂರು: (LLB student suicide) ಪ್ರಿನ್ಸಿಪಾಲ್‌ ಬೈದಿದ್ದಾರೆ ಎಂದು ಮನನೊಂದ ಎಲ್‌.ಎಲ್‌.ಬಿ. ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಜಿ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಿಜ್ವಾನ್‌ ಜೈದ್‌ (25 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.

ಮೃತ ರಿಜ್ವಾನ್‌ ಜೈದ್‌ ಅಲ್‌ ಅಮೀನ್‌ ಕಾಲೇಜಿನಲ್ಲಿ ಎಲ್‌.ಎಲ್‌.ಬಿ. ಫೈನಲ್‌ ಇಯರ್‌ (LLB student suicide) ಓದುತ್ತಿದ್ದ. ಯಾವುದೋ ಒಂದು ಕಾರಣಕ್ಕೆ ಪ್ರಿನ್ಸಿಪಾಲ್‌ ಈತನನ್ನು ಕರೆದು ಬೈದಿದ್ದರು. ಇದೇ ಕಾರಣಕ್ಕೆ ಮನನೊಂದ ವಿದ್ಯಾರ್ಥಿ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿಯ ಆತ್ಮಹತ್ಯೆಗೆ ಇದೇ ನಿಖರವಾದ ಕಾರಣ ಎಂದು ಹೇಳಲಾಗದು.

ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಕೆ.ಜಿ. ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರವಷ್ಟೇ ವಿದ್ಯಾರ್ಥಿಯ ಆತ್ಮಹತ್ಯೆಗೆ ನಿಖರವಾದ ಕಾರಣಗಳು ಏನೆಂಬುದು ತಿಳಿದು ಬರಲಿದೆ.

ಬಾಡಿ ಬಿಲ್ಡರ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಹಲವು ಅನುಮಾನ

ಬೆಂಗಳೂರು: ಬಾಡಿ ಬಿಲ್ಡರ್‌ ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆ.ಆರ್.ಪುರಂ ಬಳಿಯಲ್ಲಿ ನಡೆದಿದೆ. ಕೋಲಾರದ ಶ್ರೀನಿವಾಸಪುರದ ನಿವಾಸಿ ಶ್ರೀನಾಥ್‌ ಮೃತ ವ್ಯಕ್ತಿ.

ಈತ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದು, ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ. ಆದರೆ ನಿನ್ನೆಯ ದಿನ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.

ಇದನ್ನೂ ಓದಿ : Metro pillar collapse: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಂಭೀರ ಗಾಯ

ಇದನ್ನೂ ಓದಿ : Auto-truck collision: ಆಟೋ ಟ್ರಕ್‌ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ 8ಮಂದಿ ಸಾವು

ಇದನ್ನೂ ಓದಿ : Noida Lift collapse: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಕುಸಿತ: ಇಂಜಿನಿಯರ್‌ ಸಾವು

ಘಟನಾ ಸ್ಥಳಕ್ಕೆ ಅವಲಹಳ್ಳಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LLB student suicide: An LLB student committed suicide because of what Principal Buddi said.

Comments are closed.