LPG Blast : ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಎಲ್‌ಪಿಜಿ ಸೋರಿಕೆ 31 ಮಂದಿ ಸಾವು

ಚೀನಾ : ವಾಯುವ್ಯ ಚೀನಾದ ಯಿಂಚುವಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಎಲ್‌ಪಿಜಿ ಸ್ಫೋಟ (LPG Blast) ಸಂಭವಿಸಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಬಾರ್ಬೆಕ್ಯೂ ರೆಸ್ಟೋರೆಂಟ್ ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆಯಲ್ಲಿಯೇ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ರೆಸ್ಟೋರೆಂಟ್‌ನಲ್ಲಿ ದೊಡ್ಡಮಟ್ಟದಲ್ಲಿ ಸ್ಪೋಟ ಸಂಭವಿಸಿದ್ದು, ನಂತರ ರೆಸ್ಟೋರೆಂಟ್‌ ಮುಂಭಾಗದಲ್ಲಿರುವ ರಂಧ್ರದಿಂದ ಹೊಗೆ ಬರಲು ಆರಂಭವಾಗಿತ್ತು. ಘಟನೆಯ ಕುರಿತು ಮಾಹಿತಿ ಪಡೆದ ಹತ್ತಕ್ಕೂ ಅಗ್ನಿಶಾಮಕ ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಹಾಗೂ ತೆರವು ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸ್ಪೋಟದ ತೀವ್ರತೆಗೆ ಗಾಜು ಪುಡಿ ಪುಡಿಯಾಗಿದ್ದು, ರಸ್ತೆಯ ತುಂಬೆಲ್ಲಾ ಗಾಜಿನ ತುಂಡುಗಳೇ ಬಿದ್ದಿವೆ. ಅಲ್ಲದೇ ಕೆಲಸ ಮಾಡುತ್ತಿದ್ದವರು ಕೂಡ ಗಾಜು ಚುಚ್ಚಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ರಾತ್ರಿ 8:40 ಗಂಟೆಗೆ (1240 GMT) ಸ್ಫೋಟವು ನಿಂಗ್ಕ್ಸಿಯಾ ಸ್ವಾಯತ್ತ ಪ್ರದೇಶದ ರಾಜಧಾನಿಯಾದ ಯಿಂಚುವಾನ್ ಡೌನ್‌ಟೌನ್‌ನ ವಸತಿ ಪ್ರದೇಶದಲ್ಲಿರುವ ಫ್ಯೂಯಾಂಗ್ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದೆ. ಡ್ರ್ಯಾಗನ್ ಬೋಟ್ ಫೆಸ್ಟಿವಲ್ ರಜೆಯ ಮುನ್ನಾದಿನದಂದು ಈ ದುರಂತ ಸಂಭವಿಸಿದೆ. ಹೀಗಾಗಿ ಸಾಕಷ್ಟು ಮಂದಿ ಈ ವೇಳೆಯಲ್ಲಿ ರೆಸ್ಟೋರೆಂಟ್‌ನಲ್ಲಿ ಇದ್ದರು.

ಇದನ್ನೂ ಓದಿ : Mass shooting in US : ಯುಎಸ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ಒಬ್ಬನ ಹತ್ಯೆ, 9 ಮಂದಿ ಗಾಯ

ಇದನ್ನೂ ಓದಿ : Earthquake : ಸೆಂಟ್ರಲ್ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭೂಕಂಪ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಎಲ್ಲಾ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ ಎಂದು ಸಿಸಿಟಿವಿ ವರದಿ ಮಾಡಿದೆ. ಸ್ಫೋಟದ ಹಿನ್ನೆಲೆಯಲ್ಲಿ ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು 100 ಕ್ಕೂ ಹೆಚ್ಚು ಜನರನ್ನು ಮತ್ತು 20 ವಾಹನಗಳನ್ನು ಘಟನಾ ಸ್ಥಳಕ್ಕೆ ರವಾನಿಸಿವೆ ಎಂದು ತುರ್ತು ನಿರ್ವಹಣಾ ಸಚಿವಾಲಯದ ಹೇಳಿಕೆ ಉಲ್ಲೇಖಿಸ ಚೀನಾ ಮಾಧ್ಯಮಗಳು ವರದಿ ಮಾಡಿವೆ.

LPG Blast 31 killed in China Restaurant

Comments are closed.