ಆಸ್ತಿ ಮುಟ್ಟುಗೋಲಿಗೆ ನ್ಯಾಯಾಲಯದ ಆದೇಶ : ಪೆಟ್ರೋಲ್ ಸುರಿದು ಕೊಂಡು ವ್ಯಕ್ತಿ ಆತ್ಮಹತ್ಯೆ

ನವದೆಹಲಿ: (Man SUICIDE) ರಾಷ್ಟ್ರ ರಾಜಧಾನಿಯ ಗೋಕಲ್ಪುರಿ ಗ್ರಾಮದಲ್ಲಿ ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಆಸ್ತಿಯ ಮಾಲೀಕ ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ವ್ಯಾನ್‌ಶಿಕಾ ಸಂಗ್ರಹಗಳ ಮಾಲೀಕರಾದ ಕಪಿಲ್ ಕುಮಾರ್ (33 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕೆಲವು ಅಧಿಕಾರಿಗಳು ಗೋಕಲ್‌ ಪುರಿ ಪೊಲೀಸ್‌ ಠಾಣೆಗೆ ಹೋಗಿದ್ದು, ಗ್ರಾಮದಲ್ಲಿ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಪೊಲೀಸರ ನೆರವು ಕೋರಿ ನ್ಯಾಯಾಲಯದ ಆದೇಶವನ್ನು ವ್ಯಾನ್‌ಶಿಕಾ ಸಂಗ್ರಹಗಳ ಮಾಲೀಕ ಹಾಗೂ ಆಸ್ತಿಯ ಮಾಲೀಕರಾದ ಕಪಿಲ್ ಕುಮಾರ್ ಗೆ ನೀಡಿದ್ದಾರೆ. ಮಾಹಿತಿಯನ್ನು ಸ್ವೀಕರಿಸಿದ ನಂತರ ವ್ಯಕ್ತಿಯು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಬೆಂಕಿ ಹಚ್ಚಿಕೊಂಡ ನಂತರ ಸ್ಥಳೀಯರು ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಬೆಂಕಿಯನ್ನು ನಂದಿಸಿ ಅವರನ್ನು ತಕ್ಷಣವೇ ಪೊಲೀಸ್ ಸಿಬ್ಬಂದಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಚಿಕಿತ್ಸೆಯ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪ್ರಕರಣವನ್ನು ಗೋಕಲ್ ಪುರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Hyderabad Murder: ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಗೆಳೆಯ ನನ್ನೇ ಕೊಲೆಗೈದು, ಖಾಸಗಿ ಅಂಗಳನ್ನು ಕತ್ತರಿಸಿದ ಭೂಪ

ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕಾಗಿ ಸ್ನೇಹಿತನನ್ನು ಕೊಂದು ಖಾಸಗಿ ಭಾಗಗಳನ್ನು ಕತ್ತರಿಸಿದ ವ್ಯಕ್ತಿ

ಹೈದರಾಬಾದ್‌: ತನ್ನ ಗೆಳತಿಯೊಂದಿಗೆ ಮಾತನಾಡಿ, ಸಂದೇಶ ಕಳುಹಿಸಿದ್ದಕ್ಕಾಗಿ ತನ್ನ ಸ್ನೇಹಿತನನ್ನೇ ಕೊಂದು ಆತನ ಶಿರಛ್ಚೇದ ಮಾಡಿದ್ದಾನೆ. ನಂತರ ಆತನ ಹೃದಯ ಹಾಗೂ ಖಾಸಗಿ ಭಾಗಗಳನ್ನು ದೇಹದಿಂದ ಬೇರ್ಪಡಿಸಿ, ಆತನ ಬೆರಳುಗಳನ್ನು ಕತ್ತರಿಸಿ ನಂತರ ತಾನೇ ಸ್ವತಃ ಪೊಲೀಸರ ಮುಂದೆ ಹಾಜರಾದ ಭಯಾನಕ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನವೀನ್‌ (22 ವರ್ಷ) ಎಂದು ಗುರುತಿಸಲಾಗಿದ್ದು , ಆರೋಪಿಯನ್ನು ಹರಿಹರ ಕೃಷ್ಣ (22 ವರ್ಷ) ಎಂದು ಗುರುತಿಸಲಾಗಿದೆ. ಕೃಷ್ಣ ಹಾಗೂ ನವೀನ್‌ ಇಬ್ಬರೂ ಸ್ನೇಹಿತರಾಗಿದ್ದು, ದಿಲ್ಸುಖ್ನಗರದ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು. ಇಬ್ಬರು ಕೂಡ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೂ ನವೀನ್‌ ಮೊದಲು ಹುಡುಗಿಯ ಬಳಿ ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದು, ಇದಕ್ಕೆ ಅಕೆ ಸಮ್ಮತಿ ನೀಡಿದ್ದಳು. ಒಂದೆರಡು ವರ್ಷಗಳ ನಂತರ ಕಾರಣಾಂತರದಿಂದ ಇಬ್ಬರು ಬೇರ್ಪಟ್ಟಿದ್ದು, ನಂತರ ಹುಡುಗಿ ಕೃಷ್ಣನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು.

ಇದನ್ನೂ ಓದಿ : NEET Aspirants suicide: NEET ಆಕಾಂಕ್ಷಿತ ವಿದ್ಯಾರ್ಥಿ ಆತ್ಮಹತ್ಯೆ: ಹಾಸ್ಟೆಲ್‌ ಕೊಠಡಿಯಲ್ಲಿ ಸೂಸೈಡ್ ನೋಟ್ ಪತ್ತೆ

ನವೀನ್‌ ಹಾಗೂ ಹುಡುಗಿ ಬೇರ್ಪಟ್ಟಿದ್ದರು ಕೂಡ ಇಬ್ಬರು ಸಂಪರ್ಕದಲ್ಲಿದ್ದರು. ಪ್ರತಿದಿನ ಸಂದೇಶ ಕಳುಹಿಸುವುದು, ಕರೆ ಮಾಡುವುದು ಮಾಡುತ್ತಿದ್ದರು. ಇದರಿಂದ ಕುಪಿತನಾದ ಕೃಷ್ಣ ಅಸಮಧಾನಗೊಂಡಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದನು. ಇದಾದ ಬಳಿಕ ಸರಿಯಾದ ಸಮಯವನ್ನು ನೋಡಿಕೊಂಡ ಕೃಷ್ಣ ನವೀನ್‌ ಗೆ ಕಂಠಪೂರ್ತಿ ಕುಡಿಸಿ, ನಂತರ ಗಲಾಟೆಗೆ ಇಳಿದಿದ್ದಾನೆ. ಇದರ ನಂತರ ನವೀನ್‌ ನನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ನವೀನ್‌ ದೇಹ ಹಾಗೂ ಬತಲೆಯನ್ನು ಬೇರ್ಪಡಿಸಿ, ಹೃದಯ ಹಾಗೂ ಖಾಸಗಿ ಭಾಗಗಳನ್ನು ದೇಹದಿಂದ ಬೇರ್ಪಡಿಸಿದ್ದಾನೆ. ಬಳಿಕ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದ ಕೈಬೆರಳನ್ನು ಕೂಡ ಕತ್ತರಿಸಿದ್ದಾನೆ. ನಂತರ ಇದರ ಫೋಟೋವನ್ನು ತೆಗೆದು ವಾಟ್ಸಾಪ್‌ ನಲ್ಲಿ ಗೆಳತಿಗೆ ಕಳುಹಿಸಿದ್ದಾನೆ. ಇದೆಲ್ಲಾ ಆದ ಮೇಲೆ ಕೃಷ್ಣ ಸ್ವತಃ ತಾನೇ ಪೊಲೀಸರ ಮುಂದೆ ಹೋಗಿ ಕೃತ್ಯವನ್ನು ಒಪ್ಪಿಕೊಂಡಿದ್ದು, ಆರೋಪಿಯ ಹೇಳಿಕೆ ಮೇಲೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನೂ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : Dehli road accident: ವಲಸೆ ಕಾರ್ಮಿಕರ ಮೇಲೆ ಟ್ರಕ್ ಪಲ್ಟಿ : 4 ವರ್ಷದ ಬಾಲಕ ಸೇರಿ 4 ಮಂದಿ ಸಾವು

Man SUICIDE: Court order for Property Skip: Petrol poured suicide

Comments are closed.