CSK Fielding Coach : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಫೀಲ್ಡಿಂಗ್ ಕೋಚ್?

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ (Suresh Raina) ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸಿಎಸ್’ಕೆ (CSK) ತಂಡದ ಫೀಲ್ಡಿಂಗ್ ಕೋಚ್ (CSK Fielding Coach) ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಸುರೇಶ್ ರೈನಾ (Suresh Raina ) ಅವರ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ಹೊರ ಬೀಳಲಿದೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ (Suresh Raina) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈ ಬಿಡಲಾಗಿತ್ತು. ನಂತರ ನಡೆದ ಆಟಗಾರರ ಹರಾಜಿನಲ್ಲಿ ರೈನಾ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. 35 ವರ್ಷದ ಸುರೇಶ್ ರೈನಾ ಇತ್ತೀಚೆಗಷ್ಟೇ ಐಪಿಎಲ್ ಕ್ರಿಕೆಟ್’ಗೆ ವಿದಾಯ ಘೋಷಿಸಿ ವಿದೇಶಿ ಟಿ20 ಲೀಗ್’ಗಳತ್ತ ಗಮನ ಹರಿಸಿದ್ದರು.

ಸುರೇಶ್ ರೈನಾ 2008ರಿಂದ 2021ರವರೆಗೆ ಒಟ್ಟು 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ. ಸಿಎಸ್’ಕೆ ತಂಡ 2016 ಮತ್ತು 2017ರ ಟೂರ್ನಿಯಲ್ಲಿ ಐಪಿಎಲ್’ನಿಂದ ನಿಷೇಧಕ್ಕೊಳಗಾದಾಗ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕತ್ವ ವಹಿಸಿದ್ದರು. 2018ರಲ್ಲಿ ಮತ್ತೆ ಸಿಎಸ್’ಕೆ ಪಾಳೆಯಕ್ಕೆ ಮರಳಿದ್ದ ರೈನಾ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟು ನಾಲ್ಕು ಬಾರಿ ಐಪಿಎಲ್ ಫೈನಲ್ ಪ್ರವೇಶಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ : India Vs new Zealand T20: ನಾಳೆ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20, ಭಾರತಕ್ಕೆ ಸರಣಿ ಮುನ್ನಡೆಯ ನಿರೀಕ್ಷೆ

ಇದನ್ನೂ ಓದಿ : Virat Kohli : ಪತ್ನಿ, ಪುತ್ರಿಯೊಂದಿಗೆ ಉತ್ತರಾಖಂಡ್ ಪ್ರವಾಸದಲ್ಲಿ ಕಿಂಗ್ ಕೊಹ್ಲಿ, ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ವಿರಾಟ್

ಇದನ್ನೂ ಓದಿ : KL Rahul Or Rishabh Panth : 2023ರ ವಿಶ್ವಕಪ್ ನಂತರ ಏಕದಿನ, ಟೆಸ್ಟ್ ತಂಡಕ್ಕೆ ಕೆ ಎಲ್ ರಾಹುಲ್ ಅಥವಾ ರಿಷಭ್ ಪಂತ್ ಕ್ಯಾಪ್ಟನ್

ಐಪಿಎಲ್’ನಲ್ಲಿ ಸುರೇಶ್ ರೈನಾ ಒಟ್ಟು 205 ಪಂದ್ಯಗಳನ್ನಾಡಿದ್ದು, 32.52ರ ಸರಾಸರಿಯಲ್ಲಿ 136.76ರ ಉತ್ತರ ಸ್ಟ್ರೈಕ್’ರೇಟ್’ನೊಂದಿಗೆ ಒಂದು ಶತಕ ಹಾಗೂ 39 ಅರ್ಧಶತಕಗಳ ಸಹಿತ 5528 ರನ್ ಕಲೆ ಹಾಕಿದ್ದಾರೆ. ಚುರುಕಿನ ಫೀಲ್ಡರ್ ಕೂಡ ಆಗಿರುವ ಸುರೇಶ್ ರೈನಾ ಐಪಿಎಲ್’ನಲ್ಲಿ ಒಟ್ಟು 108 ಕ್ಯಾಚ್’ಗಳನ್ನೂ ಪಡೆದಿದ್ದಾರೆ. ಸುರೇಶ್ ರೈನಾ ಅವರ ಅನುಭವವನ್ನು ಬಳಸಿಕೊಳ್ಳಲು ಮುಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

CSK Fielding Coach: Suresh Raina Fielding Coach for Chennai Super Kings?

Comments are closed.