ಬಹುಕೋಟಿ ವಂಚನೆ ಪ್ರಕರಣ : ಮಂಗಳೂರಿನ ರೋಷನ್​ ಸಲ್ಡಾನರ ₹2.85 ಕೋಟಿ ಆಸ್ತಿ ಮುಟ್ಟುಗೋಲು

ಮಂಗಳೂರು : ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನಿಸಿರುವ ಮಂಗಳೂರಿನ ರೋಷನ್​ ಸಲ್ಡಾನ ಮನೆ ಹಾಗೂ ಬ್ಯಾಂಕ್​ ಖಾತೆಗಳೂ ಸೇರಿದಂತೆ ಒಟ್ಟೂ 2.85 ಕೋಟಿ ರೂಪಾಯಿ ಆಸ್ತಿಯನ್ನು ಜಾರಿ ನಿರ್ದೇನಾಲಯ ತಾತ್ಕಾಲಿಕ ಮುಟ್ಟುಗೋಲು ಮಾಡಿಕೊಂಡಿದೆ.

ಜಾರಿ ನಿರ್ದೇಶನಾಲಯದ ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ಇಂದು ರೋಷನ್​ ಸಲ್ಡಾನ ಹಾಗೂ ಆತನ ಪತ್ನಿ ಡಫ್ನಿ ನೀತು ಮತ್ತು ಇತರರ ಮೇಲೆ ದಾಖಲಾಗಿದ್ದ ಎಫ್​ಐಆರ್​ ಆಧರಿಸಿ ರೋಷನ್​ರ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.

ಏನಿದು ಪ್ರಕರಣ?

ಕೋಟಿಗಟ್ಟಲೇ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ದೇಶದ ಶ್ರೀಮಂತ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಮೋಸ ಮಾಡುತ್ತಿದ್ದ ರೋಷನ್​ ಸಲ್ಡಾನ 200 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವಂಚಿಸಿದ್ದ ಎನ್ನಲಾಗಿದೆ.

ನಿಮಗೆ ನೂರಾರು ಕೋಟಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಬಳಿಕ ಅವರಿಂದ ಮುಂಗಡ ಹಣದ ರೂಪದಲ್ಲಿ ಐದರಿಂದ ಹತ್ತು ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.

ಬಳಿಕ ಅವರಿಗೆ ಸಾಲವನ್ನೂ ಕೊಡಿಸದೇ, ಮುಂಗಡ ಹಣವನ್ನೂ ನೀಡದೇ ರೋಷನ್​ ಮೋಸಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಉದ್ಯಮಿಗಳು ನೀಡಿದ್ದ ದೂರು ಆಧರಿಸಿದ ಮಂಗಳೂರು ಪೊಲೀಸರು ಕಳೆದ ಜುಲೈ 17ರಂದು ರೋಷನ್​ ಸಲ್ಡಾನನನ್ನು ಬಂಧಿಸಿದ್ದರು.

ಇಂದು ಇದೇ ಪ್ರಕರಣದ ಮುಂದುವರಿದ ಭಾಗವಾಗಿ ರೋಷನ್​ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ನಟೋರಿಯಸ್ ರೌಡಿ ನೌಫಾಲ್ ಕೇರಳದಲ್ಲಿ ಹತ್ಯೆ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories