ಮಂಗಳೂರಿನ ನಟೋರಿಯಸ್ ರೌಡಿ ನೌಫಾಲ್ ಕೇರಳದಲ್ಲಿ ಹತ್ಯೆ
Mangaluru Crime News: 25ಕ್ಕೂ ಅಧಿಕ ಪ್ರಕರಣಗಳಲ್ಲಿ ಸಿಲುಕಿದ್ದ ನಟೋರಿಯಸ್ ರೌಡಿಶೀಟರ್ ನೌಫಾಲ್ ಯಾನೆ ತೊಪ್ಪಿ ನೌ ಫಾಲ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮಂಗಳೂರಿನ ನಟೋರಿಯಸ್ ರೌಡಿಯಾಗಿದ್ದ ಈತ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ.
ಈತನನ್ನು ಕೇರಳದ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ಬರ್ಬರವಾಗಿ ಕಡಿದು ಹಾಕಲಾಗಿದೆ. ಈ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಬಜಾಲ್ ಫೈಸಲ್ ನಗರದ ನಿವಾಸಿಯಾಗಿದ್ದ ರೌಡಿಶೀಟರ್ ನೌಫಾಲ್ನನ್ನು ಇಂದು ಬೆಳಗ್ಗೆ ಕೊಲೆ ಮಾಡಲಾಗಿದೆ. ಮೃತದೇಹವನ್ನು ಗಮನಿಸಿದಾಗ ನೌಫಾಲ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟುಗಳು ಬಿದ್ದಿವೆ.
ಇದನ್ನೂ ಓದಿ: ಹೊಸಕೋಟೆಯಲ್ಲಿ ಭ್ರೂಣ ಹತ್ಯೆ : ಫಾಕ್ಸ್ಕಾನ್ ಕಂಪೆನಿಗೆ ಸಂಕಷ್ಟ
ಅಲ್ಲದೇ ಈತನ ಶವದ ಮೇಲೆ ಕೇವಲ ಬನಿಯನ್ ಮತ್ತು ಪ್ಯಾಂಟ್ ಮಾತ್ರ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಪ್ಪಳ ರೈಲ್ವೆ ಗೇಟ್ ಬಳಿಗೆ ಈತ ಸ್ಕೂಟಿಯಲ್ಲಿ ತೆರಳಿದ್ದ ಎನ್ನಲಾಗಿದೆ. ಸದ್ಯ ನೌಫಾಲ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಪೆರಿಯಾರಂ ಮೆಡಿಕಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಡ್ರಗ್ಸ್ ಸೇವನೆ ಮತ್ತು ವಹಿವಾಟಿನಲ್ಲಿ ಬಹಳ ಸಕ್ರಿಯನಾಗಿದ್ದ ನೌಫಾಲ್ 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಅಡ್ಯಾರುವಿನ ರೌಡಿ ಜಿಯಾ ಮತ್ತು ಮತ್ತೊಬ್ಬನನ್ನು ಡಬಲ್ ಮರ್ಡರ್ ಮಾಡುವ ಮೂಲಕ ನಟೋರಿಯಸ್ ರೌಡಿ ಎನಿಸಿದ್ದ.
ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ಗಳಲ್ಲಿ ಸಕ್ರಿಯನಾಗಿದ್ದ ಈತ ಡ್ರಗ್ಸ್ ವ್ಯವಹಾರದಲ್ಲಿ ಭಾರೀ ಸಕ್ರಿಯನಾಗಿದ್ದ.
ತನ್ನದೇ ಆದ ತಂಡವನ್ನೂ ಹೊಂದಿದ್ ನೌಫಾಲ್ನ ಮೇಲೆ ಸುರತ್ಕಲ್, ವಾಮಂಜೂರು, ಕಾವೂರು, ಕಂಕನಾಡಿ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಿವೆ.
ಮಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಲು ಆರಂಭಿಸಿದ ಬಳಿಕ ಈತ ಮಂಗಳೂರು ತೊರೆದು ಕಾಸರಗೋಡು ಭಾಗದಲ್ಲಿ ನೆಲೆಸಿದ್ದ.
ಇದೀಗ ಈತನ ಮೇಲೆ ಗ್ಯಾಂಗ್‌ವಾರ್ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಸೀದು ಹೋದ ರೊಟ್ಟಿ ತಿನ್ನಲು ನೀಡಿದ ಸೊಸೆ : ಮನನೊಂದ ಮಾವ ಆತ್ಮಹತ್ಯೆಗೆ ಶರಣು



