Manipal Arbi Falls : ಅರ್ಬಿ ಫಾಲ್ಸ್‌ನಲ್ಲಿ ಪೊಲೀಸರ ಹೆಸರಲ್ಲಿ ಪ್ರೇಮಿಗಳಿಂದ ಸುಲಿಗೆ : ಇಬ್ಬರ ಬಂಧನ

ಮಣಿಪಾಲ : ಅರ್ಬಿ ಫಾಲ್ಸ್‌ನಲ್ಲಿ (Manipal Arbi Falls) ಕುಳಿತಿದ್ದ ಜೋಡಿಯನ್ನು ಬೆದರಿಸಿ ಪೊಲೀಸರ ಹೆಸರಲ್ಲಿ ಹಣ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಹಾವೇರಿ ಮೂಲದ ಹನುಮಂತಪ್ಪ ಮಹಾದೇವಪ್ಪ ಹಾಗೂ ಮುರುಡೇಶ್ವರ ಮೂಲದ ಲಕ್ಷಣ ಕುಪ್ಪಗೊಂಡ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಶಿರ್ವ ಬಂಟಕಲ್ಲಿನ ವ್ಯಕ್ತಿಯೋರ್ವರು ತನ್ನ ಗೆಳತಿಯ ಜೊತೆಯಲ್ಲಿ ಮಣಿಪಾಲದ ಬಳಿಯಲ್ಲಿರುವ ಅರ್ಬಿ ಫಾಲ್ಸ್‌ಗೆ ತೆರಳಿದ್ದರು. ಇಬ್ಬರು ಜೊತೆಯಾಗಿ ಕುಳಿತಿದ್ದ ವೇಳೆಯಲ್ಲಿ ಅಲ್ಲಿಗೆ ಬಂದ ಹನುಂತಪ್ಪ ಎಂಬಾತ ತಾನು ಮಣಿಪಾಲ ಠಾಣೆಯ ಪೊಲೀಸ್‌ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನೀವು ಯಾಕೆ ಇಲ್ಲಿ ಕುಳಿತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಅಲ್ಲದೇ ಪ್ರಕರಣ ದಾಖಲು ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ.

ನಂತರದಲ್ಲಿ ಮಣಿಪಾಲ ಠಾಣೆಯ ಪಿಎಸ್‌ಐ ಎಂದು ಸುಳ್ಳು ಹೇಳಿ ಹನುಮಂತಪ್ಪ ಲಕ್ಷ್ಮಣ ಕುಪ್ಪಗೊಂಡನಿಗೆ ಕರೆ ಮಾಡಿದ್ದಾನೆ. ಐದು ಸಾವಿರ ರೂಪಾಯಿ ಕೊಟ್ಟರೆ ಬಿಡುತ್ತೇವೆ ಇಲ್ಲಾ ಅಂದ್ರೆ ಜೀಪ್‌ ಕಳುಹಿಸಿ ಠಾಣೆಗೆ ಕರೆಯಿಸಿಕೊಳ್ಳುವುದಾಗಿ ಬೆದರಿಕೆಯೊಡ್ದಿದ್ದಾರೆ. ಯುವಕನಿಂದ ಐದು ಸಾವಿರ ಹಣವನ್ನು ಗೂಗಲ್‌ ಪೇ ಮಾಡಿಸಿಕೊಂಡ ವಂಚಿಸಿದ್ದರು.

ಇದನ್ನೂ ಓದಿ : Crime News : ಹಳೆ ದ್ವೇಷ ಚಾಕುನಿಂದ ಇರಿದು ಯುವಕನ ಹತ್ಯೆ

ಇದನ್ನೂ ಓದಿ : Rain Death : ಸತತ 2 ದಿನ ಸುರಿದ ಭಾರೀ ಮಳೆಗೆ 13 ಮಂದಿ ಸಾವು

ಇದರ ಬೆನ್ನಲ್ಲೇ ಯುವಕ ಮಣಿಪಾಲ ಠಾಣೆಗೆ ತೆರಳಿ ತಮಗಾದ ವಂಚನೆಯ ಕುರಿತು ಪ್ರಕರಣ ದಾಖಲು ಮಾಡಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಗೂಗಲ್‌ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆಯನ್ನು ಬಳಸಿ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Manipal Arbi Falls: Extortion by lovers in the name of police in Arbi Falls: Two arrested

Comments are closed.