Minor girl set on fire: ಅಪ್ರಾಪ್ತ ಬಾಲಕಿ ಬೆಂಕಿ ಹಚ್ಚಿದ ನೀಚರು: ಕಾರಣವಾಗಿದ್ದು ಆ ಒಂದು ಮದುವೆ ಕಾರ್ಯಕ್ರಮ

ಪಾಟ್ನಾ: (Minor girl set on fire) 10 ವರ್ಷದ ಬಾಲಕಿಗೆ ಯುವಕರು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣವೇನು ಎಂಬುದನ್ನು ಕೇಳಿದರೆ ನೀವು ದಂಗಾಗುತ್ತೀರಾ. ಹೌದು. ಘಟನೆಗೆ ಕಾರಣವಾಗಿದ್ದು ಆ ಒಂದು ಮದುವೆ.

ಮದುವೆ ಸಮಾರಂಭ ಎಂದರೇ ಅಲ್ಲಿ ಮೋಜು ಮಸ್ತಿ ಹಾಡು ಕುಣಿತ ಎಲ್ಲವೂ ಇರುವುದು ಸಾಮಾನ್ಯ. ಬಿಹಾರದಲ್ಲಿಯೂ ಒಂದು ಮದುವೆ ನಡೆದಿತ್ತು. ಅಲ್ಲಿಯೂ ಎಲ್ಲಾ ಮದುವೆ ಸಮಾರಂಭದಂತೆಯೇ ಹಾಡು ಕುಣಿತ ಎಲ್ಲವೂ ನಡೆಯುತ್ತಿತ್ತು. ಮದುವೆ ಸಮಾರಂಭದಲ್ಲಿದ್ದ ಬಾಲಕಿಯರು ಗುಂಪು ಸೇರಿ ನೃತ್ಯ ಮಾಡುತ್ತಿದ್ದರು. ಈ ಗುಂಪಿಗೆ ಯುವಕರ ಗುಂಪೊಂದು ಬಂದು ಬಾಲಕಿಯರ ಜೊತೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಈ ಸಂದರ್ಭ ಬಾಲಕಿಯರ ಗುಂಪಿನಲ್ಲಿದ್ದ ಓರ್ವ ಬಾಲಕಿ ಯುವಕರನ್ನು ಗುಂಪಿನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ಯುವಕರು ಕೂಡ ಹೊರ ಹೋಗಿದ್ದಾರೆ.

ಮರುದಿನ ಬಾಲಕಿಯರು ವಧುವಿನ ಮನೆಗೆ ತೆರಳಿದ್ದು, ನಂತರ ತಮ್ಮ ಊರಿಗೆ ಮರಳುತ್ತಿದ್ದರು. ಈ ಸಂದರ್ಭ ಮದುವೆ ಸಮಾರಂಭದಲ್ಲಿ ಬಾಲಕಿಯರ ಗುಂಪಿನಿಂದ ಯುವಕರನ್ನು ಹೊರಹೋಗುವಂತೆ ಸೂಚಿಸಿದ್ದ ಬಾಲಕಿಯನ್ನು ಯುವಕರು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಬಾಲಕಿ ಇದನ್ನು ತಲೆಗೆ ಹಾಕಿಕೊಳ್ಳದೇ ಮನೆಗೆ ಹೋಗಿದ್ದಾಳೆ. ಮರುದಿನ ಎಂದಿನಂತೆ ಶಾಲೆಗೆ ತೆರಳಲು ಸಿದ್ದಳಾಗಿ ಮನೆಯಿಂದ ಹೊರಗೆ ಬಂದಿದ್ದಾಳೆ. ಆಗ ಯುವಕರು ಆಕೆಯನ್ನು ಅಪಹರಿಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿಯ ಮೇಲೆ ಪೆಟ್ರೊಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಬಾಲಕಿ ನೋವು ತಾಳಲಾರದೇ ಕೂಗಡಲು ಪ್ರಾರಂಭಿಸಿದ್ದು. ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಬಂದು ಆಕೆಯನ್ನು ಅಪಾಯದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕಿಯ ದೇಹದ ಕೆಲವು ಭಾಗಗಳಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಹಾಜಿಪುರದ ಸದರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದದು ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಆರೋಪಿಗಳ ವಿರುದ್ದ ದೂರು ದಾಖಲಾಗಿದೆ. ದೂರಿನನ್ವಯ ಆರೋಪಿಗಳ ಹುಡುಕಾಟದಲ್ಲಿದ್ದು, ಆದಷ್ಟು ವೇಗವಾಗಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

Minor girl set on fire: A minor girl set fire to the scoundrel: The reason was a wedding event

Comments are closed.