ಸುರತ್ಕಲ್‌ MRPLನಲ್ಲಿ ವಿಷಾನಿಲ ಸೋರಿಕೆ : ಇಬ್ಬರು ಸಾವು

MRPL gas leak : ಮಂಗಳೂರು : ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಸುರತ್ಕಲ್‌ನ ಎಂಆರ್‌ಪಿಎಲ್ (Mangalore Refinery and Petrochemicals Limited) ಘಟಕದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪ್ರಾಯಗ್ರಾಜ್ ಜಿಲ್ಲೆಯ ದೀಪಚಂದ್ರ (33) ಮತ್ತು ಕೇರಳ ಮೂಲದ ಬಿಜಿಲ್ ಪ್ರಸಾದ್ (33) ಎಂದು ಗುರುತಿಸಲಾಗಿದೆ.

ಗದಗ ಮೂಲದ ವಿನಾಯಕ್ ಎಂಬ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂಆರ್‌ಪಿಎಲ್‌ನ H2S (ಹೈಡ್ರೋಜನ್ ಸಲ್ಫೈಡ್) ಗ್ಯಾಸ್ ಉತ್ಪಾದನಾ ಘಟಕದ ಆಯಿಲ್ ಮೂವ್‌ಮೆಂಟ್ ಮತ್ತು ಸ್ಟೋರೇಜ್ (OM&S) ಯುನಿಟ್‌ನ ಶೇಖರಣಾ ಪ್ರದೇಶದಲ್ಲಿ ಸಂಭವಿಸಿದೆ.

ಮೂವರು ಓಎಂ&ಎಸ್ ಸ್ಟೋರೇಜ್ ಘಟಕದಲ್ಲಿ ನಿರ್ವಹಣಾ ತಂಡದಲ್ಲಿದ್ದರು. ಟ್ಯಾಂಕ್ FB7029 A (ಡ್ರೈ ಸ್ಲಾಪ್ ಸರ್ವಿಸ್ – ಫ್ಲೋಟಿಂಗ್ ರೂಫ್)ನಲ್ಲಿ ಹೈಡ್ರೋಜನ್ ಸಲ್ಫೈಡ್ (H2S) ಅನಿಲ ಸೋರಿಕೆಯಾಗಿದೆ.

MRPL gas leak : ಟ್ಯಾಂಕ್‌ ಶುಚಿಗೊಳಿಸುವ ವೇಳೆ ದುರಂತ

ಟ್ಯಾಂಕ್‌ಗಳನ್ನು ಶುಚಿಗೊಳಿಸುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಎಂಆರ್‌ಪಿಎಲ್ ಘಟಕದ ಸುರಕ್ಷತಾ ವಿಭಾಗದ ಅಧಿಕಾರಿಗಳು ಸೋರಿಕೆಯನ್ನು ತಡೆಗಟ್ಟಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಹಮದಾಬಾದ್‌ ವಿಮಾನ ದುರಂತ : 260 ಜನರ ಜೀವ ತೆಗೆದಿದ್ದು ಯಾರು ?

ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಲ್ಲದೇ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದೆ. ‌

ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಬಲಪಡಿಸಲು ಸೂಚಿಸಲಾಗಿದೆ.

ಇದನ್ನೂ ಓದಿ : ವೈಯಕ್ತಿಕ ಸಾಲ vs ಚಿನ್ನದ ಸಾಲ : ತುರ್ತು ಅಗತ್ಯಕ್ಕೆ ಯಾವುದು ಬೆಸ್ಟ್‌ ?

ದುರಂತಕ್ಕೆ ನಿಖರವಾದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ, ಆದರೆ ಪ್ರಾಥಮಿಕವಾಗಿ ಟ್ಯಾಂಕ್ ಶುಚಿಗೊಳಿಸುವ ಕಾರ್ಯದ ವೇಳೆ ವಿಷಾನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

MRPL gas leak in Refinery tank, 2 staff dead in Kannada news

.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories