Woman Tries To Order Sweets: ಆನ್​ಲೈನ್​​ನಲ್ಲಿ ಸಿಹಿ ತಿನಿಸು ಆರ್ಡರ್​ ಮಾಡಲು ಹೋದ ಮಹಿಳೆಗೆ 2.4 ಲಕ್ಷ ರೂ. ಪಂಗನಾಮ

ಮುಂಬೈ : Woman Tries To Order Sweets : ಹಬ್ಬಗಳು ಅಂದಮೇಲೆ ಅಲ್ಲಿ ಸಿಹಿ ತಿನಿಸುಗಳು ಇಲ್ಲ ಅಂದರೆ ಹಬ್ಬಗಳು ಪೂರ್ಣ ಅನಿಸೋದಿಲ್ಲ. ಹೀಗಾಗಿ ಪ್ರತಿಯೊಂದು ಮನೆಯಲ್ಲಿಯೂ ಸಿಹಿ ತಿಂಡಿಗಳು ಹಬ್ಬಗಳಲ್ಲಿ ಇದ್ದೇ ಇರುತ್ತದೆ. ಈಗ ದೀಪಾವಳಿ ಹಬ್ಬ ಬೇರೆ ಇರೋದ್ರಿಂದ ಕೆಲವರು ಮನೆಯಲ್ಲಿ ಸಿಹಿ ತಿಂಡಿಗಳನ್ನು ತಯಾರಿ ಮಾಡಿದರೆ ಇನ್ನೂ ಕೆಲವರು ಆನ್​ಲೈನ್​​ನಲ್ಲಿ ಆರ್ಡರ್​ ಮಾಡುತ್ತಾರೆ. ಇದೇ ರೀತಿ ಮುಂಬೈನಲ್ಲಿ ಹಬ್ಬಕ್ಕೆಂದು ಆನ್​ಲೈನ್​ನಲ್ಲಿ ಸಿಹಿ ತಿನಿಸುಗಳನ್ನು ಆರ್ಡರ್​ ಮಾಡಲು ಹೋದ 49 ವರ್ಷದ ಮಹಿಳೆಯು ಬರೋಬ್ಬರಿ 2.4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಮಹಿಳೆಯು ವಂಚನೆಯಾದ ತನ್ನ ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಅಂಧೇರಿ ಉಪನಗರ ನಿವಾಸಿ ಪೂಜಾ ಶಾ ಭಾನುವಾರದಂದು ಫುಡ್​ ಡೆಲಿವರಿ ಅಪ್ಲಿಕೇಶನ್​​ನಲ್ಲಿ ಸಿಹಿ ತಿಂಡಿಗಳನ್ನು ಆರ್ಡರ್​ ಮಾಡಿದ್ದರು. ಆನ್​ಲೈನ್​ನಲ್ಲಿ ಒಂದು ಸಾವಿರ ರೂಪಾಯಿ ಪಾವತಿ ಮಾಡಲು ಮುಂದಾದ ಸಮಯದಲ್ಲಿ ವಹಿವಾಟು ವಿಫಲವಾಗಿತ್ತು. ಇದಾದ ಬಳಿಕ ಗೂಗಲ್​ನಲ್ಲಿ ಸ್ವೀಟ್​ ಅಂಗಡಿಯ ನಂಬರ್​ನ್ನು ತೆಗೆದುಕೊಂಡ ಪೂಜಾ ಶಾ ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ಪೂಜಾ ಶಾರ ಕ್ರೆಡಿಟ್​ ಕಾರ್ಡ್​ ಸಂಖ್ಯೆ ಹಾಗೂ ಆಕೆಯು ಫೋನ್​ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನೀಡುವಂತೆ ಕೇಳಿದ್ದಾರೆ.

ಪೂಜಾ ಶಾ ಕ್ರೆಡಿಟ್​ ಕಾರ್ಡ್​ನ ವಿವರ ಹಾಗೂ ಒಟಿಪಿಯನ್ನು ಶೇರ್ ಮಾಡುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ 2,40,310 ರೂಪಾಯಿಗಳು ಡೆಬಿಟ್​ ಆಗಿದೆ. ತಾನು ಆನ್​ಲೈನ್​ ವಂಚನೆಗೆ ಒಳಗಾಗಿದ್ದೇನೆ ಎಂಬ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ಪೂಜಾ ಶಾ ಕೂಡಲೇ ಓಶಿವಾರಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಪೂಜಾ ಶಾ ಖಾತೆಯಿಂದ 2,27,205 ರೂಪಾಯಿಗಳು ಡೆಬಿಟ್​ ಆಗುವುದನ್ನು ತಪ್ಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನು ಓದಿ : Varicose Veins : ಉಬ್ಬಿರುವ ರಕ್ತನಾಳ ಸಮಸ್ಯೆಗೆ ಅಗಸೆಬೀಜ ಸುಲಭ ಪರಿಹಾರ

ಇದನ್ನೂ ಓದಿ : Dinesh Karthik thanks Aswhin : “ನನ್ನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್” ಅಶ್ವಿನ್’ಗೆ ಹೀಗಂದಿದ್ಯಾಕೆ ದಿನೇಶ್ ಕಾರ್ತಿಕ್?

Mumbai Woman Tries To Order Sweets Online, Loses ₹ 2.4 Lakh In Fraud

Comments are closed.