Varicose Veins : ಉಬ್ಬಿರುವ ರಕ್ತನಾಳ ಸಮಸ್ಯೆಗೆ ಅಗಸೆಬೀಜ ಸುಲಭ ಪರಿಹಾರ

ಅನೇಕರ ಕೈ ಮತ್ತು ಕಾಲುಗಳಲ್ಲಿ(Varicose Veins) ರಕ್ತನಾಳಗಳು ಉಬ್ಬಿಕೊಂಡಿರುತ್ತದೆ. ಈ ರೀತಿಯಾಗಿ ಉಬ್ಬಿಕೊಂಡಿರುವ ರಕ್ತನಾಳಗಳಿಗೆ ವೆರಿಕೋಸ್‌ ವೇನ್ಸ್‌ ಎಂದು ಕರೆಲಾಗುತ್ತದೆ. ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಯಾಗಿರುವುದರಿಂದ ಮಾರಣಾಂತಿಕವಲ್ಲದ ರೋಗವಾಗಿದೆ.

ರಕ್ತನಾಳಗಳು ಹೀಗೆ ಉಬ್ಬಿಕೊಳ್ಳುವುದರಿಂದ ಕಾಲು ಮತ್ತು ಕೈಯಲ್ಲಿ ವಿಪರೀತ ಸೆಳೆತ ಶುರುವಾಗುತ್ತದೆ. ಇದು ಹೆಚ್ಚಾಗಿ ಕಾಲುಗಳಲ್ಲಿ ಕಂಡು ಬರುತ್ತದೆ. ಒಂದು ರೀತಿಯ ಜೇಡರ ಬಲೆಯ ರೀತಿಯಲ್ಲಿ ರಕ್ತನಾಳಗಳು ಉಬ್ಬಿಕೊಂಡಿರುತ್ತದೆ. ಇದು ಪ್ರಾರಂಭದಲ್ಲಿ ಯಾವುದೇ ರೀತಿಯ ನೋವು ಮತ್ತು ತುರಿಕೆ ಇಲ್ಲದ ಕಾರಣ ಜನರು ನಿರ್ಲಕ್ಷಿಸುತ್ತಾರೆ. ಆದರೆ ನಿರ್ಲಕ್ಷವೇ ಮುಂದೆ ವಿಪರೀತ ನೋವು, ಉರಿಯೂತ ಮತ್ತು ತುರಿಕೆಗೆ ಕಾರಣವಾಗುತ್ತದೆ. ಆದರಿಂದ ಇದನ್ನು ಆರಂಭಿಕ ಹಂತದಲ್ಲಿ ಮನೆ ಮದ್ದಿನ ಸಹಾಯದಿಂದ ಗುಣಪಡಿಸಿಕೊಳ್ಳಬಹುದಾಗಿದೆ. ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಅಗಸೆಬೀಜ
  • ಚಕ್ಕೆ
  • ಒಣಶುಂಠಿ
  • ಬಿಸಿ ಹಾಲು

ತಯಾರಿಸುವ ವಿಧಾನ :
ಮೊದಲಿಗೆ ನಾಲ್ಕು ಟೇಬಲ್‌ ಸ್ಪೂನ್‌ನಷ್ಟು ಅಗಸೆಬೀಜವನ್ನು ಒಂದು ಬಾಣಲೆಗೆ ಹಾಕಿ ಗರಿಗರಿ ಆಗುವಷ್ಟು ಹುರಿದುಕೊಳ್ಳಬೇಕು. ಅದನ್ನು ಒಂದು ಡ್ರೈ ಇರುವ ಮಿಕ್ಸಿ ಜಾರಿಗೆ ಹಾಕಿ ಸಾಧ್ಯವಾದಷ್ಟು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿದ ಪೌಡರನ್ನು ಒಂದು ಬೌಲ್‌ಗೆ ಹಾಕಿಕೊಳ್ಳಬೇಕು. ನಂತರ ಚಕ್ಕೆಯನ್ನು ಪುಡಿ ಮಾಡಿಕೊಳ್ಳಬೇಕು. ನಾಲ್ಕು ಟೇಬಲ್‌ ಸ್ಪೂನ್‌ ಅಗಸೆಬೀಜ ಪೌಡರ್‌ಗೆ ಅರ್ಧ ಟೇಬಲ್‌ ಸ್ಪೂನ್‌ನಷ್ಟು ಚಕ್ಕೆ ಪೌಡರನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಇದೇ ಪುಡಿಗೆ ಅರ್ಧ ಟೇಬಲ್‌ ಸ್ಪೂನ್‌ನಷ್ಟು ಒಣಶುಂಠಿ ಪುಡಿಯನ್ನು ಸೇರಿಸಿ ಮಿಕ್ಸ್‌ ಮಾಡಿಕೊಳ್ಳಬೇಕು.


ನಂತರ ಅದೇ ಪೌಡರ್‌ಗೆ ಕಾಲು ಟೀ ಸ್ಪೂನ್‌ನಷ್ಟು ಅರಶಿನವನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ಆಮೇಲೆ ಒಂದು ಲೋಟ ಬಿಸಿ ಹಾಲಿಗೆ ಒಂದು ಟೇಬಲ್‌ ಸ್ಪೂನ್‌ನಷ್ಟು ರೆಡಿ ಮಾಡಿ ಇಟ್ಟುಕೊಂಡಿರುವ ಪೌಡರನ್ನು ಹಾಕಿ ಗಂಟು ಗಂಟು ಆಗದ ಹಾಗೆ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಇದನ್ನು ಕುಡಿಯುವಾಗ ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಮಿಕ್ಸ್‌ ಮಾಡಿಕೊಂಡು ಕುಡಿಯಬಹುದಾಗಿದೆ. ಸಕ್ಕರೆ ಕಾಯಿಲೆ ಇರುವವರು ಇದನ್ನು ಹಾಗೆ ಕುಡಿದರೆ ಒಳ್ಳೆಯದು. ಇದನ್ನು ಪ್ರತಿದಿನ ಕುಡಿಯುವುದರಿಂದ ಉಬ್ಬಿರುವ ರಕ್ತನಾಳದ ಸಮಸ್ಯೆಯಿಂದ ದೂರವಿರಬಹುದಾಗಿದೆ.

ಇದನ್ನೂ ಓದಿ : Healthy Stomach : ಔಷಧಗಳ ಬಳಕೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದದ್ದು ಏನು ಗೊತ್ತಾ…

ಇದನ್ನೂ ಓದಿ : Winter Season : ಚಳಿಗಾಲದಲ್ಲಿ ಕಾಡುವ ಕೆಮ್ಮು, ಕಫ ಮತ್ತು ಶೀತಕ್ಕೆ ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : Hemorrhoids : ಮೂಲವ್ಯಾಧಿಗೆ ಮನೆಯಲ್ಲೇ ಇದೆ ಸುಲಭ ಪರಿಹಾರ


ಅಗಸೆಬೀಜವು ನಮ್ಮ ಆರೋಗ್ಯ ಹಾಗೂ ಸೌಂದರ್ಯಕ್ಕೆ ಎರಡು ಉತ್ತಮವಾಗಿರುತ್ತದೆ. ನಮ್ಮ ದೇಹಕ್ಕೆ ಬೇಕಾಗುವ ಹೆಚ್ಚಿನ ಪೌಷ್ಟಿಕಾಂಶವನ್ನು ಒಳಗೊಂಡಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪೈಬರ್‌, ಸೇರಿದಂತೆ ಅನೇಕ ಪೌಷ್ಟಿಕಾಂಶವನ್ನು ಒಳಗೊಂಡಿರುತ್ತದೆ. ಅಗಸೆಬೀಜ ಸೇವನೆಯಿಂದ ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧಿಗೊಳಿಸುತ್ತದೆ. ಹಾಗೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ. ಹಾಗೆ ನಮ್ಮ ಕೂದಲಿನ ಬೆಳವಣೆಗೂ ಸಹಾಯ ಮಾಡುತ್ತದೆ. ಈ ಎಲ್ಲಾ ಮಿಶ್ರಣವನ್ನು ಕುಡಿಯುವುದರಿಂದ ಉಬ್ಬಿರುವ ರಕ್ತನಾಳದ ಸಮಸ್ಯೆಯನ್ನು ಸರಿಪಡಿಸುವುದು ಮಾತ್ರವಲ್ಲದೇ ಹೆಚ್ಚಿನ ಆರೋಗ್ಯ ಲಾಭವನ್ನು ಕೊಡುತ್ತದೆ.

Flaxseed is an easy remedy for varicose veins

Comments are closed.