ಸೋಮವಾರ, ಏಪ್ರಿಲ್ 28, 2025
HomeCrimeMurder : ಬಾವನ ಕೊಂದು ಠಾಣೆಗೆ ಕೈಗಳನ್ನು ತಂದ ಬಾಮೈದ

Murder : ಬಾವನ ಕೊಂದು ಠಾಣೆಗೆ ಕೈಗಳನ್ನು ತಂದ ಬಾಮೈದ

- Advertisement -

ಮೈಸೂರು : ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯ ಸಹೋದರನೇ ಭೀಕರವಾಗಿ ಕೊಲೆಗೈದು ಕೈಗಳ ಸಮೇತ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ಮೈಸೂರಿನ ಉದಯಗಿರಿಯ ಗೌಸಿಯಾ ನಗರದಲ್ಲಿ ನಡೆದಿದೆ.

ಮಹಮದ್ ಸರಾನ್ (27 ವರ್ಷ )ಎಂಬಾತನೇ ಭೀಕರವಾಗಿ ಕೊಲೆಯಾದವನು. ಭಾವಮೈದ ಕದೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉದಯಗಿರಿಯ ಗೌಸಿಯಾ ನಗರದ ಮಹಮದ್ ಸರಾನ್ ಮತ್ತು ರೂಬಿನಾಗೆ ಕಳೆದ ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆಯಾದ ದಿನದಿಂದಲೂ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಸುರಾನ್‌ ಪದೇ ಪದೇ ಕಿರುಕುಳ ನೀಡುತ್ತಿದ್ದ.

ಇದೇ ಕಾರಣಕ್ಕೆ ಎರಡೂ ಕುಟುಂಬದವರ ನಡುವೆ ರಾಜಿ ಮಾತುಕತೆಯನ್ನೂ ನಡೆಸಲಾಗಿತ್ತು. ಆದರೆ ಸರಾನ್‌ ಪದೇ ಪದೇ ಇದೇ ವಿಷಯವಾಗಿ ಜಗಳ ಮಾಡುತ್ತಿದ್ದ. ಇದರಿಂದ ಕೆರಳಿದ ರೂಬಿನಾಳ ಸಹೋದರರಾದ ಖಲೀಂ ಪಾಷಾ, ಅಜ್ಮನ್ ಪಾಷಾ, ಹಲ್ಮತ್ ಪಾಷಾ ಮತ್ತು ಕದೀರ್ ಸೇರಿಕೊಂಡು ಸರಾನ್ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಮಹಮದ್ ಸರಾನ್‌ನನ್ನು ಕೊಲೆಗೈದ ನಂತರದಲ್ಲಿ ಆತನ ಕೈಗಳನ್ನು ಚೀಲದಲ್ಲಿಟ್ಟುಕೊಂಡು ಆರೋಪಿ ಕದೀರ್‌ ಉದಯಗಿರಿ ಠಾಣೆಯ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ

ಇದನ್ನೂ ಓದಿ : ಮಗಳನ್ನು ವೈದ್ಯೆಯನ್ನಾಗಿಸುವ ಕನಸು ಕಂಡಿದ್ದಳು ತಾಯಿ : ಆದರೆ ಹೆತ್ತಾಕೆಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಪುತ್ರಿ

ಇದನ್ನೂ ಓದಿ : ಸೊಸೆಯೊಂದಿಗೆ ಸೆಕ್ಸ್‌ಗೆ ಮಾವನ ಒತ್ತಡ, ಪತಿಯಿಂದಲೂ ಕಿರುಕುಳ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular